ಅಹಮದಾಬಾದ್: ರೈಡರ್ ಸೋನು ಹಾಗೂ ರಾಕೇಶ್ ಅವರ ಅದ್ಭುತ ರೈಡಿಂಗ್ ನೆರವಿನಿಂದ ಗುಜರಾತ್ ಜಯಂಟ್ಸ್ Gujarat Giants ತಂಡ ಪ್ರೊ ಕಬಡ್ಡಿ ಲೀಗ್‌ನ ಮೊದಲ ಪಂದ್ಯದಲ್ಲೇ ತೆಲುಗು ಟೈಟಾನ್ಸ್ Telugu Titans ವಿರುದ್ಧ 38-32 ಅಂತರದಲ್ಲಿ ಜಯ ಗಳಿಸಿದೆ. Pro Kabaddi Season 10 Gujarat Giants defeats Telugu Titans by 38-32
ದ್ವಿತಿಯಾರ್ಧದ ಆರಂಭದಲ್ಲೇ ಬದಲಿ ಆಟಗಾರ ಸೋನು ಸೂಪರ್ ರೈಡ್ ಮೂಲಕ 5 ಅಂಕಗಳನ್ನು ಕಬಳಿಸುವುದರೊಂದಿಗೆ ಗುಜರಾತ್ ಜಯಂಟ್ಸ್ ಮುನ್ನಡೆ ಕಂಡಿತು. ನಂತರದ ಎರಡು ರೈಡ್‌ಗಳಲ್ಲೇ ತೆಲುಗು ಟೈಟಾನ್ಸ್ ಅಲೌಟ್. ಗುಜರಾತ್ ಜಯಂಟ್ಸ್ ಎದುರಾಳಿಯ ದೌರ್ಬಲ್ಯ ಹಾಗೂ ಶಕ್ತಿಯನ್ನು ದ್ವಿತಿಯಾರ್ಧದಲ್ಲಿ ಖಚಿತಪಡಿಸಿಕೊಂಡಿತು. ಪವನ್ ಶೆರಾವತ್ ಅವರನ್ನು ನಿಯಂತ್ರಿಸಿದರೆ ಪಂದ್ಯ ಗೆದ್ದಂತೆ ಎಂಬುದು ತಂಡಕ್ಕೆ ಖಚಿತವಾಯಿತು. ಯಾವುದೇ ತಂಡ ಒಬ್ಬ ಆಟಗಾರನನ್ನು ನಂಬಿಕೊಂಡಿರಬಾರದು. ಹಾಗಾದಲ್ಲಿ ತಂಡ ಉತ್ತಮ ಹೋರಾಟದ ನಡುವೆಯೂ ಸೋಲಿಗೆ ಶರಣಾಗಬೇಕಾಗುತ್ತದೆ.
ಪ್ರಥಮಾರ್ಧದಲ್ಲಿ ತೆಲುಗು ಟೈಟಾನ್ಸ್ ಮುನ್ನಡೆ:
ನಾಯಕ ಪವನ್ ಶೆರಾವತ್ ಅವರ ಆಲ್ರೌಂಡ್ ಪ್ರದರ್ಶನದ ನೆರವಿನಿಂದ ಗುಜರಾತ್ ಜಯಂಟ್ಸ್ ವಿರುದ್ಧದ ಪಂದ್ಯದ ಪ್ರಥಮಾರ್ಧದಲ್ಲಿ ತೆಲುಗು ಟೈಟಾನ್ಸ್ 16-13 ಅಂತರದಲ್ಲಿ ಮುನ್ನಡೆ ಕಂಡಿದೆ.
ಕಳೆದ ಋತುವಿನಲ್ಲಿ ಗಾಯದ ಕಾರಣ ಹೆಚ್ಚಿನ ಪಂದ್ಯಗಳಿಂದ ಹೊರಗುಳಿದಿದ್ದ ಪವನ್ ಶೆರಾವತ್ ಸಾಮಾನ್ಯವಾಗಿ ರೈಡಿಂಗ್‌ನಲ್ಲಿ ಅಂಕ ಗಳಿಸುತ್ತಾರೆ. ಆದರೆ ಮೊದಲ ಪಂದ್ಯದಲ್ಲೇ ಟ್ಯಾಕಲ್‌ನಲ್ಲೂ ಪ್ರಭುತ್ವ ಸಾಧಿಸಿದರು. 7 ಅಂಕಗಳ ಯಶಸ್ಸಿನಿಂದ ಶೆರಾವತ್ ತಂಡದ ಮುನ್ನಡೆಯಲ್ಲಿ ಪ್ರಮುಖ ಪಾತ್ರವಹಿಸಿದರು. ಗುಜರಾತ್ ಜಯಂಟ್ಸ್ ತಂಡದ ನಾಯಕ ಫಜಲ್ ಅತ್ರಚಲಿ 3 ಅಂಕ ಹಾಗೂ ರೋಹಿತ್ ಗುಲಿಯಾ 4 ರೈಡರ್ ಅಂಕ ಗಳಿಸಿ ದಿಟ್ಟ ಹೋರಾಟ ನೀಡಿದರು. ಇತ್ತಂಡಗಳು ತಲಾ ಒಂದು ಬಾರಿ ಆಲೌಟ್ ಆಗಿದ್ದವು.
Pro Kabaddi Season 10 Gujarat Giants defeats Telugu Titans by 38-32