ವಾಲಿಬಾಲ್ ಸಡಗರಕೆ ಪ್ರೈಮ್ ವಾಲಿಬಾಲ್ ಲೀಗ್

0
86
ಹೈದರಾಬಾದ್:
ಪ್ರೈಮ್ ವಾಲಿಬಾಲ್ ಲೀಗ್ ಗೆ ಚಾಲನೆ ದೊರೆಯುವುದರೊಂದಿಗೆ ಎರಡು ವರ್ಷಗಳಿಂದ ಭಾರತದಲ್ಲಿ ಸ್ಥಗಿತಗೊಂಡಿದ್ದ ವಾಲಿಬಾಲ್ ಚಟುವಟಿಕೆಗೆ ಮತ್ತೆ ಚಾಲನೆ ದೊರೆಯಲಿದೆ.
ಪ್ರೈಮ್ ವಾಲಿಬಾಲ್ ಲೀಗ್ ಸಾಂಪ್ರದಾಯಿಕ ವಾಲಿಬಾಲ್ ನಿಂದ ಫ್ರಾಂಚೈಸಿ ಆಧಾರಿತ ಲೀಗ್ ಆಗಿ ರೂಪುಗೊಂಡು ದೇಶದಲ್ಲಿ ಹೊಸ ವಾಲಿಬಾಲ್ ಕ್ರಾಂತಿಯನ್ನುಂಟುಮಾಡಲಿದೆ. ಎನ್.ಬಿಎ ಮಾದರಿಯಲ್ಲಿ ಕಾರ್ಯನಿರ್ವಹಿಸಲಿರುವ ಈ ಲೀಗ್ ನಲ್ಲಿ ಫ್ರಾಂಚೈಸಿ ಮಾಲೀಕರು ಕೂಡ ಲೀಗನ್ನು ಆಯೋಜಿಸಯವಲ್ಲಿ ಪಾಲುದಾರರಾಗಿರುತ್ತಾರೆ. ಇದು ತಂಡದ ಮಾಲೀಕರು ಮತ್ತು ಹಣ ವಿನಿಯೋಗಿಸಿದವರಿಗೆ ಹೆಚ್ಚಿನ ಮೌಲ್ಯ ಮತ್ತು ದೀರ್ಘ ಕಾಲದ ಸಂಬಂಧ ಜತೆಯಲ್ಲಿ ಸ್ಥಿರ ಹಣಕಾಸಿನ ಸ್ವರೂಪವನ್ನು ಕಲ್ಪಿಸಲಿದೆ.
ಮೊದಲ ಆವೃತ್ತಿಯ ಪ್ರೈಮ್ ವಾಲಿಬಾಲ್ ಲೀಗ್ ನಲ್ಲಿ ಆರು ತಂಡಗಳು ಪಾಲ್ಗೊಳ್ಳಲಿವೆ. ಕ್ಯಾಲಿಕಟ್ ಹೀರೋಸ್, ಕೊಚ್ಚಿ ಬ್ಲೂ ಸ್ಪೈಕರ್, ಅಹಮದಾಬಾದ್ ಡಿಫೆಂಡರ್ಸ್, ಹೈದಬರಾಬಾದ್ ಬ್ಲ್ಯಾಕ್ ಹಾಕ್ಸ್, ಚೆನ್ನೈ ಬ್ಲಿಟ್ಸ್ ಎಲ್ಲಾ ಫ್ರಾಂಚೈಸಿಗಳು ಈ ಹಿಂದೆ ವಾಲಿಬಾಲ್ ಲೀಗ್ ನಲ್ಲಿ ತಮ್ಮನ್ನು ತೊಡಗಿಸಕೊಂಡ ಅನುಭವ ಹೊಂದಿವೆ. ಹೊಸ ತಂಡವಾಗಿ ಬೆಂಗಳೂರು ಟಾರ್ಪೆಡೋಸ್ ಅಂಗಣಕ್ಕಿಳಿಯಲಿದೆ. ಈಟ್ ಫಿಟ್ ನ ಸ್ಥಾಪಕ ಅಂಕಿತ್ ನಗೋರಿ ಅವರು ಬೆಂಗಳೂರು ತಂಡದ ಮಾಲೀಕರಾಗಿರುತ್ತಾರೆ. ಲೀಗ್ ನ ಪ್ರತಿಯೊಂದು ಪಂದ್ಯಗಳು ಸೋನಿ ಪಿಕ್ಚರ್ಸ್ ನೆಟ್ವರ್ಕ್ ನಲ್ಲಿ ಪ್ರಸಾರಗೊಳ್ಳಲಿದ್ದು, ದೇಶದ ಪ್ರಮುಖ ಕ್ರೀಡಾ ಮಾರ್ಕೆಟಿಂಗ್ ಕಂಪೆನಿ ಬೇಸ್ ಲೀನ್ ವೆಂಚರ್ಸ್ (Baseline Ventures ) ಲೀಗನ್ನು ಮಾರುಕಟ್ಟೆಗೆ ತರಲಿದೆ. ಬಹಳ ವರ್ಷಗಳ ಅವಧಿಗೆ ಪ್ರಮುಖ ಫ್ಯಾಂಟಸಿ ಗೇಮ್ A23  ಒಪ್ಪಂದಕ್ಕೆ ಸಹಿ ಮಾಡಿದೆ.
ಈ ಬೆಳವಣಿಗೆಯ ಕುರಿತು ಮಾತನಾಡಿದ ಪ್ರೈಮ್ ವಾಲಿಬಾಲ್ ಲೀಗ್ ನ ಸಿಇಒ, ಜಾಯ್ ಭಟ್ಟಾಚಾರ್ಯ, “ದೇಶದಲ್ಲಿ ಉತ್ತಮ ಪ್ರತಿಭಾವಂತ ಆಟಗಾರರಿರುವುದನ್ನು ನಾವು ನೋಡಿದ್ದೇವೆ, ಈ ಪ್ರತಿಭೆಗಳಿಗೆ ಬೆಳೆಯಲು ಉತ್ತಮ ವೇದಿಯನ್ನು ನಿರ್ಮಿಸಿಕೊಡುವುದು ನಮ್ಮ ಪ್ರಮುಖ ಉದ್ದೇಶವಾಗಿದೆ. ಲೀಗ್ ಅನ್ನು ಬಹಳ ವರ್ಷಗಳ ಕಾಲ ಕಾಯ್ದುಕೊಂಡು ಹೋಗುವ ರೀತಿಯಲ್ಲಿ ನಾವು ವಿನ್ಯಾಸಗೊಳಿಸಿದ್ದೇವೆ, ಇದು ಫ್ರಾಂಚೈಸಿ ಮಾಲೀಕರಿಗೂ ಪ್ರಯೋಜವಾಗಲಿದೆ. ಭಾರತದ ವಾಲಿಬಾಲ್ ಗೆ ನೀಡಬಹುದುದಾದ ಉತ್ತಮ ಕಾರ್ಯವಾಗಿದೆ,”ಎಂದರು.
ಫ್ರಾಂಚೈಸಿಗಳ ಪರವಾಗಿ ಮಾತನಾಡಿದ ಕೇರಳ ಬ್ಲೂ ಸ್ಪೈಕರ್ಸ್ ನ ಮಾಲೀಕ ಹಾಗೂ ಮತ್ತೂಟ್ ಪಪ್ಪಾಚಾನ್ ಗ್ರೂಪ್ ನ ಥಾಮಸ್ ಮತ್ತೂಟ್, “2019ರಲ್ಲಿ ನಾವು ಮೊದಲ ಬಾರಿಗೆ ಕ್ರೀಡೆಯ ಜತೆ ಸಂಬಂಧ ಬೆಳೆಸಿ ಯಶಸ್ಸು ಕಂಡಿದ್ದೇವೆ. ಹೊಸ ಮಾದರಿಯಲ್ಲಿ ಸಿದ್ಧಗೊಂಡಿರುವ ಈ ಲೀಗ್ ನಲ್ಲಿ ಮುಂದುವರಿಯಲು ನಾವು ಖುಷಿಪಡುತ್ತೇವೆ. ಇದು ಫ್ರಾಂಚೈಸಿ ಮತ್ತು ಆಟಗಾರರು ಇಬ್ಬರಿಗೂ ಅನುಕೂಲವಾಗುವ ರೀತಿಯಲ್ಲಿದೆ,” ಎಂದರು.
ಸೋನಿ ಪಿಚ್ಚರ್ಸ್ ನೆಟ್ವರ್ಕ್ಸ್ ಇಂಡಿಯಾ ಇದರ ಮಾರ್ಕೆಟಿಂಗ್ ಮತ್ತು ಆನ್ ಏರ್ ಪ್ರಮೋಷನ್ ಇದರ ಎಸ್ ವಿ ಪಿ ಮತ್ತು & ಮುಖ್ಯಸ್ಥರಾಗಿರುವ ನೆವಿಲ್ಲೆ ಬಸ್ತಾವಲ್ಲಾ ಅವರು ಮಾತನಾಡಿ, “ಭಾರತದಲ್ಲಿ ವಾಲಿಬಾಲ್ ಗೆ ಉತ್ತಮ ಬೇಡಿಕೆ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ಭಾರತ ಸ್ಪರ್ಧಿಸದಿದ್ದರೂ ನಮ್ಮ ನೆಟ್ವರ್ಕ್ ನಲ್ಲಿ  2020ರ ಟೋಕಿಯೋ  ಒಲಿಂಪಿಕ್ಸ್ ನಲ್ಲಿ ಅತಿ ಹೆಚ್ಚು ಜನರು ವೀಕ್ಷಿಸಿದ ಕ್ರೀಡೆ ಇದಾಗಿದೆ. ಉತ್ತಮ ಗುಣಮಟ್ಟದ ಪ್ರದರ್ಶನ ಕಾಣಲಿರುವ ಪ್ರೈಮ್ ವಾಲಿಬಾಲ್ ಲೀಗ್ ಸೋನಿ ಪಿಚ್ಚರ್ಸ್ ನೆಟ್ವರ್ಕ್ಸ್ ಗೆ ಸೇರ್ಪಡೆಗೊಂಡಿರುವುದು ಅದ್ಭುತವೆನಿಸಿದೆ. ಭಾರತದಲ್ಲಿ ಈ ಕ್ರೀಡೆಯನ್ನು ಹೆಚ್ಚು ಜನಪ್ರಿಯಗೊಳಿಸಲು ಮತ್ತು ಅಭಿವೃದ್ಧಿ ಮಾಡಲು ನಾವು ಈ ಲೀಗ್ ನ ಪಾಲುದಾರರೊಂದಿಗೆ ಬಹಳ ಆಪ್ತವಾಗಿ ಕೆಲಸ ನಿರ್ವಹಿಸಲಿದ್ದೇವೆ, ಅತಿ ಹೆಚ್ಚು ವೀಕ್ಷಕರಿಗೆ ತಲಪುವಂತೆ ಮಾಡುತ್ತೇವೆ” ಎಂದು ಹೇಳಿದರು.
ಲೀಗ್ ಜತೆ ಸಂಬಂಧ ಹೊಂದಿರುವುದಕ್ಕೆ ಸಿಇಒ ಹೆಡ್ ಡಿಜಿಟಲ್ ವರ್ಕ್ಸ್, ದೀಪಕ್ ಗುಲ್ಲಪಳ್ಳಿ ಸಂತಸ ವ್ಯಕ್ತಪಡಿಸಿದ್ದಾರೆ, “ಫ್ಯಾಂಟಸಿ ಸ್ಪೋರ್ಟ್ ಅನಿಯಂತ್ರಿತ ವೇಗದಲ್ಲಿ ಬೆಳೆಯುತ್ತಿದೆ, ನಾವು A23 ಯಲ್ಲಿ ಕ್ರಿಕೆಟ್ ಮತ್ತು ಅದರಾಚೆಗೆ ಇತರ ಕ್ರೀಡೆಗಳ ಬೆಳವಣಿಗೆಯ ಕಡೆಗೂ ಗಮನ ಹರಿಸುತ್ತಿದ್ದೇವೆ. ವಾಲಿಬಾಲ್ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅತಿ ಹೆಚ್ಚು ಬೇಡಿಕೆ ಇರುವ ಮತ್ತು ಅಭಿಮಾನಿಗಳನ್ನು ಹೊಂದಿರುವ ಕ್ರೀಡೆಯಾಗಿದೆ. ಪ್ರತಿಯಬ್ಬರಿಗೂ ಅನುಕೂಲವಾಗು ರೀತಿಯಲ್ಲಿ ವಿನ್ಯಾಸಗೊಂಡಿರುವ ನಮ್ಮ ವಾಲಿಬಾಲ್ ಫ್ಯಾಂಟಸಿ ಸ್ಪೋರ್ಟ್ ಹೊಸ ಗ್ರಾಹಕರನ್ನು ಆಕರ್ಷಿಸಲಿದೆ,” ಎಂದರು.
ಮುಂಬರುವ ಋತುವಿನ ಆಟಗಾರರ ಹರಾಜು ಪ್ರಕ್ರಿಯೆ, ವೇಳಾಪಟ್ಟಿ ಮೊದಲಾದ ಮಾಹಿತಿಯನ್ನು ಲೀಗ್ ಸಸದ್ಯದಲ್ಲಿಯೇ ಪ್ರಕಟಿಸಲಿದೆ.
ಹೊಸ ಆಟಗಾರರು ಮತ್ತು ತರಬೇತುದಾರರಿಗೆ ಅವಕಾಶವನ್ನು ನೀಡುವ ಉದ್ದೇಶದಿಂದ ಪ್ರೈಮ್ ವಾಲಿಬಾಲ್ ಲೀಗ್ ಪಿಸ್ಟನ್ ಡೇಸ್ ಸ್ಪೋರ್ಟ್ಸ್ ಜತೆ ಕೈಜೋಡಿಸಿದೆ. ಆಟಗಾರರು ಮತ್ತು ತರಬೇತುದಾರರು ತಮ್ಮ ಹೆಸರನ್ನು ನೋದಾಯಿಸಿಕೊಳ್ಳುವುದಕ್ಕಾಗಿ ಪೋರ್ಟಲ್ ಸಿದ್ಧಗೊಂಡಿದೆ. ಆಸಕ್ತ ಆಟಗಾರರು ಮತ್ತು ತರಬೇತುದಾರರು ಈ ವೆಬ್ ಸೈಟ್ ನಲ್ಲಿ ತಮ್ಮ ಹೆಸರನ್ನು ನೋದಾಯಿಸಿಕೊಳ್ಳಬಹುದು:  www.pistondessport.com