ರಾಜ್ಯ ಪೊಲೀಸ್ ಕ್ರೀಡಾಕೂಟ: ಉಡುಪಿ ಸಾಧಕರಿಗೆ ಎಸ್ಪಿ ಅಭಿನಂದನೆ
ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಉಡುಪಿ ಜಿಲ್ಲೆಯಿಂದ ಸ್ಪರ್ಧಿಸಿದ ಪೊಲೀಸ್ ಸಿಬ್ಬಂದಿಗಳು ಉತ್ತಮ ಪ್ರದರ್ಶನ ತೋರಿ ಪದಕಗಳನ್ನು ಗೆದ್ದಿದ್ದಾರೆ. Police personnel from Udupi district who competed in the state-level police annual sports meet held in Bengaluru have performed well and won medals.
ಅಮಾಸೆಬೈಲು ಪೊಲೀಸ್ ಠಾಣೆಯ ಪಿಎಸ್ಐ ಸುಧಾರಾಣಿ ಅವರು ಪಿಸ್ತೂಲ್ ಶೂಟಿಂಗ್ ನಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಎಆರ್ಎಸ್ಐ ಶಂಕರ್ ಅವರು 45 ವರ್ಷದ ವಿಭಾಗದವರ 200 ಮೀ. ಓಟದಲ್ಲಿ ದ್ವಿತೀಯ ಸ್ಥಾನ, ಮತ್ತು 100 ಮೀ. ಓಟದಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ.

ಅಮಾಸೆಬೈಲು ಠಾಣೆಯ ಸಿಪಿಸಿ, ವಿನಾಯಕ್ ಅವರು ಲಾಂಗ್ ಜಂಪ್ ನಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ. ಎಪಿಸಿ ಜೀವನ್ ನಾಯಕ್ ಅವರು ತ್ರಿಬಲ್ ಜಂಪ್ ನಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ, ಕುಮಾರಿ. ನಾಗಶ್ರೀ ಬ್ರಹ್ಮಾವರ ವೃತ್ತ ಕಛೇರಿ ಇವರು ಶಾಟ್ ಪುಟ್ ವಿಭಾಗದಲ್ಲಿ ದ್ವಿತೀಯ ಸ್ಥಾನ, ಮತ್ತು ಲಾಂಗ್ ಜಂಪ್ ನಲ್ಲಿ ತೃತೀಯ ಸ್ಥಾನಗಳಿಸಿರುತ್ತಾರೆ. ಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ದಾಳುಗಳಿಗೆ ಹಾಗೂ ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ಪೊಲೀಸ್ ಅಧೀಕ್ಷಕರು ಅಭಿನಂದಿಸಿರುತ್ತಾರೆ.

