Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಸಾಲ ಬಾಕಿ: ಪಾಕಿಸ್ತಾನಕ್ಕೆ ಆಹ್ವಾನ ನಿರಾಕರಿಸಿದ ಮಲೇಷ್ಯಾ

ಹೊಸದಿಲ್ಲಿ: ಜಾಗತಿಕ ಕ್ರೀಡಾ ಇತಿಹಾಸದಲ್ಲೇ ಮುಜುಗರಕ್ಕೆ ಒಳಗಾಗುವ ಸನ್ನಿವೇಶವನ್ನು ಪಾಕಿಸ್ತಾನ ಹಾಕಿ ಮಂಡಳಿ ಎದುರಿಸಿದೆ. ಕಳೆದ ಬಾರಿಯ ಅಜ್ಲಾನ್‌ ಶಾ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿಯ ಪದಕ ಗೆದ್ದಿದ್ದ ಪಾಕಿಸ್ತಾನ ತಂಡಕ್ಕೆ ಈ ಬಾರಿ ಆತಿಥೇಯ ಮಲೇಷ್ಯಾ ಆಹ್ವಾನ ನಿರಾಕರಿಸಿದೆ. ಇದಕ್ಕೆ ಮುಖ್ಯ ಕಾರಣ ಪಾಕಿಸ್ತಾನ ಹಳೆ ಬಾಕಿಯನ್ನು ತೀರಿಸಿಲ್ಲ. Pakistan not invited by Malaysian Hockey Federation for Azlan Shah Cup over pending debts

ಪಾಕಿಸ್ತಾನ ಹಾಕಿ ಫೇಡರೇಷನ್‌ನ ಅಧಿಕಾರಿಗಳು ಈ ಬಗ್ಗೆ ಮಲೇಷ್ಯಾ ಹಾಕಿ ಫೆಡರೇಷನ್‌ ಜೊತೆ ಮಾತುಕತೆ ನಡೆಸುತ್ತಿದ್ದು, ಸಮಸ್ಯೆ ಪರಿಹಾರ ಕಂಡರೆ ಮುಂದಿನ ವಾರದಲ್ಲಿ ಆಹ್ವಾನ ನೀಡು ಸಾಧ್ಯತೆ ಇದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕಳೆದ ಬಾರಿಯ ಟೂರ್ನಿಯ ವೇಳೆ ಪಾಕಿಸ್ತಾನ ಹಾಕಿ ಫಡರೆಷನ್‌ನ ಅಧಿಕಾರಿಯೊಬ್ಬರು ಕೈಗೊಂಡ ತಪ್ಪು ನಿರ್ಣಯದಿಂದಾಗಿ ಹಣ ಬಾಕಿಯಾಗಿದೆ. 1983ರಲ್ಲಿ ಆರಂಭಗೊಂಡ ಅಜ್ಲಾನ್‌ ಶಾ ಹಾಕಿ ಚಾಂಪಿಯನ್‌ಷಿಪ್‌ ಮೊದಲು ಎರಡು ವರ್ಷಗಳಿಗೊಮ್ಮೆ ನಡೆಯುತ್ತಿದ್ದು, 1998ರಿಂದ ಪ್ರತಿವರ್ಷ ನಡೆಯುತ್ತಿದೆ.


administrator