Friday, October 4, 2024

ಟಾರ್ಪೆಡೊಸ್ ಮುಕ್ತ ಆನ್ ಲೈನ್ ಚೆಸ್ ಟೂರ್ನಮೆಂಟ್

ಉಡುಪಿ:

ರಾಜ್ಯದ ಪ್ರತಿಷ್ಠಿತ ಕ್ರೀಡಾ ಸಂಸ್ಥೆಗಳಲ್ಲಿ ಒಂದಾಗಿರುವ ಟಾರ್ಪೆಡೊಸ್ ಸ್ಪೋರ್ಟ್ಸ್ ಕ್ಲಬ್ (ರಿ.) ಇವರು ಮುಕ್ತ ಆನ್ ಲೈನ್ ಚೆಸ್ ಟೂರ್ನಮೆಂಟ್ ಆಯೋಜಿಸಿದ್ದು ಟೂರ್ನಿಯು ಒಟ್ಟು 50,000 ರೂ.ಗಳ ನಗದು ಬಹುಮಾನದಿಂದ ಕೂಡಿರುತ್ತದೆ ಎಂದು ಕ್ಲಬ್ ನ ಅಧ್ಯಕ್ಷ ಗೌತಮ್ ಶೆಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

3-10-2021 ರಂದು ನಡೆಯಲಿರುವ ಈ ಟೂರ್ನಿಯು ಯುನೈಟೆಡ್ ಕರ್ನಾಟಕ ಚೆಸ್ ಅಸೋಸಿಯೇಷನ್ (ರಿ) ಮತ್ತು ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್ (ರಿ.) ಇವರ ಸಹಯೋಗದಲ್ಲಿ ನಡೆಯಲಿದೆ.

ಒಟ್ಟು 61  ಬಹುಮಾನ ನೀಡಲಾಗುತ್ತಿದ್ದು, ಟೂರ್ನಮೆಂಟ್ ನ ಪ್ರವೇಶ ಶುಲ್ಕ ರೂ. 350 ಆಗಿರುತ್ತದೆ. www.tornelo.com ಪ್ಲ್ಯಾಟ್ ಫಾರ್ಮ್ ನಲ್ಲಿ ನಡೆಯಲಿರುತ ಈ ಟೂರ್ನಿಯಲ್ಲಿ ಪಾಲ್ಗೊಳ್ಳವವರು ಪ್ರವೇಶ ಶುಲ್ಕವನ್ನು www.chessfee.com ಮೂಲಕ ಸಲ್ಲಿಸಬಹುದು.

ಬಹುಮಾನಗಳು:

ಮುಕ್ತ ವಿಭಾಗದಲ್ಲಿ ಟಾಪ್ 20 ಬಹುಮಾನಗಳನ್ನು ನೀಡಲಾಗುದುವು. ಚಾಂಪಿಯನ್ ಪಟ್ಟ ಗೆದ್ದವರಿಗೆ 5,000 ರೂ, ನಗದು ಮತ್ತು ದ್ವಿತೀಯ, ತೃತೀಯ ಮತ್ತು ನಾಲ್ಕನೇ ಸ್ಥಾನ ಗಳಿಸಿದವರರಿಗೆ ಅನುಕ್ರಮವಾಗಿ ರೂ. 4,000, 3,000 ಮತ್ತು 2,000 ನೀಡಲಾಗುವುದು. ಹೀಗೆ ಟಾಪ್ 20 ಬಹುಮಾನಗಳನ್ನು ನೀಡಲಾಗುವುದು.

ವಯಸ್ಸಿನ ವಿಭಾಗದಲ್ಲಿ ಗೆದ್ದವರಿಗೆ 7 ವಿಭಾಗಗಳಲ್ಲಿ ಬಹುಮಾನ ನೀಡಲಾಗುವುದು. ( 7, 9, 11, 13 ಮತ್ತು 15 ವಯೋಮಿತಿ ವಿಭಾಗ) ಇಲ್ಲಿ ಮೊದಲ ಬಹುಮಾನ ರೂ. 1,000, ದ್ವಿತೀಯ, ರೂ. 900. ತೃತೀಯ ರೂ. 800, ನಾಲ್ಕನೇ ಸ್ಥಾನಕ್ಕೆ ರೂ. 700. ಐದನೇ ಸ್ಥಾನಕ್ಕೆ ರೂ. 600, ಆರನೇ ಸ್ಥಾನಕ್ಕೆ ರೂ. 500 ಮತ್ತು ಏಳನೇ ಸ್ಥಾನಕ್ಕೆ ರೂ. 400 ನೀಡಲಾಗುವುದು.

ಉತ್ತಮ ಆಟ ಪ್ರದರ್ಶಿಸಿದ ಐವರು ಮಹಿಳಾ ಆಟಗಾರ್ತಿಯರಿಗೆ ತಲಾ 500 ರೂ.ಗಳನ್ನು ಬಹುಮಾನವಾಗಿ ನೀಡಲಾಗುವುದು.

ಉತ್ತಮ ಹಿರಿಯ ಆಟಗಾರರಿಗೂ 500 ರೂ, ಬಹುಮಾನವಿರುತ್ತದೆ.

ಹೆಸರನ್ನು ನೋದಾಯಿಸಲು 01-10-2021 ಕೊನೆಯ ದಿನಾಂಕವಾಗಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ತೀರ್ಪುಗಾರರು:

ಮುಖ್ಯ ತೀರ್ಪುಗಾರರಾಗಿ ಅಂತಾರಾಷ್ಟ್ರೀಯ ತೀರ್ಪುಗಾರರಾದ ವಸಂತ್ ಬಿ.ಎಚ್ ಕಾರ್ಯನಿರ್ವಹಿಸಲಿದ್ದಾರೆ. ತೀರ್ಪುಗಾರರ ತಂಡದಲ್ಲಿ ಅಂತಾರಷ್ಟ್ರೀಯ ತೀರ್ಪುಗಾರರಾದ ಸಲೀಂ ಬೇಗ್, ಪ್ರಮೋದ್ ಮೋರೆ ಮತ್ತು ರಾಷ್ಟ್ರೀಯ ತೀರ್ಪುಗಾರರಾದ ಸಾಕ್ಷಾತ್ ಯು.ಕೆ. ಸೌಂದರ್ಯ ಯ.ಕೆ, ಹಾಗೂ ಬಾಬು ಜೆ. ಪೂಜಾರಿ ಸೇರಿದ್ದಾರೆ.

ವೇಳಾ ಪಟ್ಟಿ:

ಉದ್ಘಾಟನೆ: ಬೆಳಿಗ್ಗೆ 8:30ಕ್ಕೆ, ಆಟಗಾರರ ಸೇರುವಿಕೆ: ಬೆಳಿಗ್ಗೆ 8:45

ಮೊದಲನೇ ಸುತ್ತು: ಬೆಳಿಗ್ಗೆ 9:30ರಿಂದ

ಎರಡನೇ ಸುತ್ತು: ಬೆಳಿಗ್ಗೆ 10:30ರಿಂದ

ಮೂರನೇ ಸುತ್ತು: ಬೆಳಿಗ್ಗೆ 11:30ರಿಂದ

ನಾಲ್ಕನೇ ಸುತ್ತು: ಮಧ್ಯಾನ್ಹ 12:30ರಿಂದ

ಐದನೇ ಸುತ್ತು: ಮಧ್ಯಾಹ್ನ 2 ರಿಂದ

ಆರನೇ ಸುತ್ತು: ಮಧ್ಯಾಹ್ನ 3ರಿಂದ

ಏಳನೇ ಸುತ್ತು ಸಂಜೆ 4 ರಿಂದ

ಎಂಟನೇ ಸುತ್ತು: ಸಂಜೆ 5 ರಿಂದ

ಒಂಬತ್ತನೇ ಸುತ್ತು: ಸಂಜೆ 6 ರಿಂದ

ನಿಯಮಗಳು:

  1. ಕೇವಲ ಲ್ಯಾಪ್ ಟಾಪ್ (Laptop)ಮತ್ತು ಡೆಸ್ಕ್ ಟಾಪ್ (Desktop) ಜತೆಯಲ್ಲಿ ವಿಂಡೋಸ್ ಅಪರೇಟಿಂಗ್ ಸಿಸ್ಟಮ್ (Windows Operating System) ಇರುವವರಿಗೆ ಮಾತ್ರ ಅವಕಾಶ. ಕಾರ್ಯನಿರ್ವಹಿಸುತ್ತಿರುವ ಕ್ಮಾಮರಾ ಸ್ಪೀಕರ್ ಹೊಂದಿರುವುದು ಕಡ್ಡಾಯ.
  2. ಟೂರ್ನಿಯು ಮುಕ್ತ ವಿಭಾಗ ಮತ್ತು ವಯೋಮಿತಿಯ ವಿಭಾಗದಲ್ಲಿ ನಡೆಯಲಿದ್ದು, ಬಹುಮಾನ ನೀಡಲಾಗುವುದು.
  3. ಸ್ವಿಸ್ ಪದ್ಧತಿಯನ್ನು (Swiss System) ಅನುಸರಿಸಲಾಗುವುದು. ಟೈಮ್ ಕಂಟ್ರೋಲ್: 10 ನಿಮಿಷ + 05 ಸೆಕೆಂಡುಗಳು.
  4. ಸುತ್ತುಗಳು ಸಂಖ್ಯೆ 9
  5. ಟೈ ಬ್ರೇಕ್: BUCHHOLZಟೈ ಬ್ರೇಕ್ ಪದ್ಧತಿಯನ್ನು ಅನುಸರಿಸಲಾಗುವುದು. ಟೈ ಆದಲ್ಲಿ ಬಹುಮಾನವನ್ನು ಹಂಚಲಾಗುವುದಿಲ್ಲ.
  6. ಎಫ್ ಪಿಪಿ (FPP) ನಿಯಮವನ್ನು ಉಲ್ಲಂಘಿಸಿದರೆ ಅಂಥ ಆಟಗಾರರನ್ನು ಟೂರ್ನಿಯಿಂದ ತೆಗೆದುಹಾಕಲಾಗುವುದು.
  7. ಬಹುಮಾನವನ್ನು ಪಡೆಯುವ ವೇಳೆ ಸ್ಪರ್ಧಿಗಳು ವಯೋಮಿತಿಯ ಬಗ್ಗೆ ದಾಖಲೆಯನ್ನು ಸಲ್ಲಿಸತಕ್ಕದ್ದು.
  8. ಸಂಘಟಕರು ಮತ್ತು ಪ್ರಧಾನ ತೀರ್ಪುಗಾರರ ನಿರ್ಣಯವೇ ಅಂತಿಮವಾಗಿರುತ್ತದೆ, ಇದಕ್ಕೆ ಎಲ್ಲಾ ಆಟಗರರು ಬದ್ಧರಾಗಿರಬೇಕು.
  9. 02-10-2021 ರಂದು ಟೊರ್ನೆಲೊ ಲಿಂಕ್ (Tornelo link) ಅನ್ನು ಟೊರ್ನೆಲೊ ಮೈಲ್ ಐಡಿ (Tornelo mail ID) ಹೊಂದಿರುವ ಪ್ರತಿಯೊಬ್ಬ ನೋಂದಾಯಿತ ಸ್ಪರ್ಧಿಗೂ ಕಳುಹಿಲಾಗುವುದು. ಅವರು 02-10-2021ರಂದು ಭಾರತೀಯ ಕಾಲಮಾನ ಸಂಜೆ 5 ಗಂಟೆಯ ಒಳಗಾಗಿ ಲಾಗಿನ್ ಆಗಬೇಕು.
  10. ಆಟಗಾರರು ಅದೇ ಟೊರ್ನೆಲೊ ಐಡಿ (Tornelo ID) ಮೂಲಕವೇ ಝೂಮ್ (ZOOM) ಗೆ ಲಾಗಿನ್ ಆಗಬೇಕು (ಅಂದರೆ Tornelo ಮತ್ತು ZOOM ಗೆ ಆಟಗಾರರು ಒಂದೇ ಬಗೆಯ ಮೇಲ್ ಐಡಿ ಬಳಸಬೇಕು)
  11. ಫೇರ್ ಪ್ಲೇ ಟೀಮ್ ನಲ್ಲಿ ಜಿಎಮ್ ಮತ್ತು ಐಎಂ ಗಳು ಇರುತ್ತಾರೆ.

ಟಾರ್ಪೆಡೊಸ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಗೌತಮ್ ಶೆಟ್ಟಿ, ಯುಕೆಸಿಎ ಕಾರ್ಯದರ್ಶಿ ಅರವಿಂದ ಶಾಸ್ತ್ರೀ, ಉಡುಪಿ ಜಿಲ್ಲಾ ಚೆಸ್ ಸಂಸ್ಥೆಯ ಅಧ್ಯಕ್ಷ ಡಾ. ರಾಜಗೋಪಾಲ್ ಶೆಣೈ ಈ ಟೂರ್ನಿಯ ಯಶಸ್ಸಿಗಾಗಿ ಶ್ರಮಿಸಲಿದ್ದಾರೆ.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ:

ಇಂಗ್ಲಿಷ್ ಮತ್ತು ಹಿಂದಿಗಾಗಿ: 9845121498, 8088625123

ಕನ್ನಡಕ್ಕಾಗಿ: 9448547958

Related Articles