Thursday, April 25, 2024

ಮುಂದಿನ ವರ್ಷ ಪ್ರೊ ವಾಲಿಬಾಲ್ ಶುರು

ಮುಂಬೈ:

ಮುಂದಿನ ವರ್ಷ ಫೆ. 2ರಿಂದ 22ರವೆರಗೆ ನಡೆಯುವ ಪ್ರೊ ವಾಲಿಬಾಲ್ ಉದ್ಘಾಟನಾ ಆವೃತ್ತಿಗೆ ಆರು ತಂಡಗಳು ಭಾಗವಹಿಸಲಿವೆ ಎಂದು ಭಾರತ ವಾಲಿಬಾಲ್ ಫೆಡರೇಷನ್ ಹಾಗೂ ಬೇಸ್‌ಲೈನ್ ವೆಂಚರ್ಸ್ ಇಂಡಿಯಾ ಪ್ರೈ .ಲಿ  ಸೋಮವಾರ ಸ್ಪಷ್ಟಪಡಿಸಿದವು.

ಬೊನ್ಹೊಮಿ ಸ್ಪೋರ್ಟ್ಸ್ ಇವೆಂಟ್ ಲಿ. ಮಾಲೀಕತ್ವದ ಅಹಮದಾಬಾದ್ ಡಿಫೆಂಡರ್ಸ್, ಬೀಕನ್ ಸ್ಪೋರ್ಟ್ಸ್ ಮಾಲಿಕತ್ವದ ಕ್ಯಾಲಿಕಟ್ ಹಿರೋಸ್, ಚೆನ್ನೈ ಸ್ಪರ್ಟನ್ಸ್   ಫ್ರೈ ಲಿ. ಒಡೆತನದ ಚೆನ್ನೈ ಸ್ಪರ್ಟನ್ಸ್ , ಎಗೈಲ್ ಸೆಕ್ಯೂರಿಟೀಸ್ ಪ್ರೈ ಲಿ.ನ ಹೈದರಾಬಾದ್ ಬ್ಲ್ಯಾಕ್ ಹಾಕ್ಸ್  ಹಾಗೂ ಥಾಮಸ್ ಮುತ್ತೂಟ್ ಮಾಲಿಕತ್ವದ ಕೊಚ್ಚಿ ಬ್ಲೂ ಸ್ಪೈಕರ್ಸ್  ಸೇರಿದಂತೆ ಒಟ್ಟು ಆರು ತಂಡಗಳು ಮೊದಲ ಆವೃತ್ತಿಯಲ್ಲಿ ಅಂಗಳಕ್ಕೆೆ ಇಳಿಯಲಿವೆ.
ಇಬ್ಬರೂ ವಿದೇಶ ಆಟಗಾರರು, ಭಾರತದ ಒಬ್ಬ ಸ್ಟಾರ್ ಆಟಗಾರ, 21 ವಯೋಮಿತಿಯ ಇಬ್ಬರೂ ಆಟಗಾರರು ಸೇರಿದಂತೆ ಒಂದು ತಂಡದಲ್ಲಿ 12 ಆಟಗಾರರು ಒಳಗೊಂಡಿರುತ್ತಾರೆ. ಆರು ತಂಡಗಳು ಒಟ್ಟು 18 ಪಂದ್ಯಗಳು ಆಡಲಿವೆ. ರೌಂಡ್ ರೊಬಿನ್ ಹಂತದಲ್ಲಿ ತಲಾ ಒಂದೊಂದು ಬಾರಿ ತಂಡಗಳು ಮುಖಾಮುಖಿಯಾಗಲಿದ್ದು, ಅಗ್ರ ಎರಡು ತಂಡಗಳು ಸೆಮಿಫೈನಲ್ ತಲುಪಲಿವೆ.

Related Articles