ಯೋಧ ಎದುರು ಗೆದ್ದ ಬುಲ್ಸ್

0
211
ಪುಣೆ:

ಪವನ್ ಕುಮಾರ್(10) ಹಾಗೂ ರೋಹಿತ್ ಕುಮಾರ್(7) ಹಾಗೂ ಮಹೇಂದ್ರ ಕುಮಾರ್(5) ಅವರ ಚುರುಕಿನ ಪ್ರದರ್ಶನದ ನೆರವಿನಿಂದ ಬೆಂಗಳೂರು ಬುಲ್ಸ್  ತಂಡ, ಯುಪಿ ಯೋಧ ವಿರುದ್ಧ ಭರ್ಜರಿ ಜಯ ಸಾಧಿಸಿತು.

ಇಲ್ಲಿನ ಶ್ರೀ ಶಿವ ಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ನಡೆದ 84ನೇ ಹಣಾಹಣಿಯಲ್ಲಿ ಬುಲ್‌ಸ್‌  ತಂಡದ ಸಂಘಟಿತ ಹೋರಾಟದ ಫಲವಾಗಿ ಯುಪಿ ಯೋಧ ತಂಡದ ಎದುರು 37-27 ಅಂತರದಲ್ಲಿ ಗೆಲುವಿನ ನಗೆ ಬೀರಿತು. ಇದರೊಂದಿಗೆ ಬೆಂಗಳೂರು ಬುಲ್ಸ್  ತಂಡ ಒಟ್ಟು 47 ಅಂಕಗಳೊಂದಿಗೆ ಬಿ ವಲಯದ ಪಟ್ಟಿಯಲ್ಲಿ ಅಗ್ರ ಸ್ಥಾನ ಅಲಂಕರಿಸಿತು. ಸೋಲುವ ಮೂಲಕ ಯುಪಿ ಯೋಧ ಕೊನೆಯ ಸ್ಥಾನಕ್ಕೆೆ ಜಾರಿತು.
ಪವನ್, ರೋಹಿತ್, ಮಹೇಂದ್ರ ಅವರೊಂದಿಗೆ ಬುಲ್ಸ್ ಪರ ಉತ್ತಮ ಆಟವಾಡಿದ ಕಾಶಿಲಿಂಗ್, ಅಮಿತ್ ಹಾಗೂ ರಾಜು ಕ್ರಮವಾಗಿ 4,4 ಮತ್ತು ಮೂರು ಅಂಕಗಳಿಸಿದರು. ಯುಪಿ ಯೋಧ ಪರ ಅಮೋಘ ಪ್ರದರ್ಶನ ನೀಡಿದ ಶ್ರೀಕಾಂತ್ ಜಾದವ್ 12 ಅಂಕಗಳಿಸಿದರು. ಆದರೂ ಬುಲ್ಸ್ ಎದುರು ಯೋಧ ಸೋಲಬೇಕಾಯಿತು. ಮತ್ತೊಂದು ಪಂದ್ಯದಲ್ಲಿ ತಮಿಳ್ ತಲೈವಾಸ್ ತಂಡ 31-21 ಅಂತರದಲ್ಲಿ ತೆಲುಗು ಟೈಟಾನ್ಸ್  ತಂಡವನ್ನು ಮಣಿಸಿತು.