Thursday, December 5, 2024

ರಾಷ್ಟ್ರೀಯ ಸೈಕ್ಲಿಂಗ್ : ರಾಜ್ಯಕ್ಕೆ ಸಮಗ್ರ ಚಾಂಪಿಯನ್ ಪಟ್ಟ

ಸ್ಪೋರ್ಟ್ಸ್ ಮೇಲ್ ವರದಿ

ಪುಣೆಯಲ್ಲಿ ನಡೆದ ರಾಷ್ಟ್ರೀಯ ಎಂಟಿಬಿ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಮೈಸೂರು ಹಾಗೂ ಬೆಂಗಳೂರಿನ ಸೈಕ್ಲಿಸ್ಟ್‌ಗಳು ಪ್ರಭುತ್ವ ಸಾಧಿಸುವುದರೊಂದಿಗೆ ಕರ್ನಾಟಕ ತಂಡ ಸಮಗ್ರ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ.

2014ರಿಂದ ಸತತ ಮೂರು ಬಾರಿ ಚಾಂಪಿಯನ್ ಪಟ್ಟ ಗೆದ್ದಿದ್ದ ರಾಜ್ಯ ತಂಡಕ್ಕೆ ಕಳೆದ ವರ್ಷ ಸಮಗ್ರ ಚಾಂಪಿಯನ್ ಪಟ್ಟ ಕೈ ತಪ್ಪಿತ್ತು. ಪುಣೆಯಲ್ಲಿ ಮೂರು ದಿನಗಳ ಕಾಲ ನಡೆದ ಮೌಂಟೇನ್ ಬೈಕ್ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಬೆಂಗಳೂರು ಹಾಗೂ ಮೈಸೂರಿನ ಸೈಕ್ಲಿಸ್ಟ್‌ಗಳು ಒಟ್ಟು  7 ಚಿನ್ನ,7 ಬೆಳ್ಳಿ ಹಾಗೂ 4 ಕಂಚಿನ ಪದಕ ಗೆದ್ದು ಸಾಧನೆ ಮಾಡಿದ್ದಾರೆ.
ಮೈಸೂರಿನ ಚರಿತ್ ಗೌಡ 2 ಚಿನ್ನ, ಮೈಸೂರಿನ ವೈಶಾಖ್ 2 ಚಿನ್ನ, ಮೈಸೂರಿನ ಅಡೋನಿಸ್ 2 ಚಿನ್ನ, ಕಮಲರಾಜ್ 2 ಬೆಳ್ಳಿ, ಹಸ್ಮುಖ 2 ಬೆಳ್ಳಿ, ಬೆಂಗಳೂರಿನ ಕಿರಣ್ ರಾಜು 1 ಚಿನ್ನ ಹಾಗೂ 1 ಬೆಳ್ಳಿ ಹಾಗೂ ಮೈಸೂರಿನ ಲಕ್ಷ್ಮೀಶ್ ಕಂಚಿನ ಪದಕ ಗೆದ್ದಿದ್ದಾರೆ.
ಮಹಿಳಾ ಹಾಗೂ ಬಾಲಕಿಯರ ವಿಭಾಗದಲ್ಲಿ ವಿಜಯಪುರದ ಸೌಮ್ಯ ಅಂತಾಪುರ 2 ಬೆಳ್ಳಿ ಹಾಗೂ 1 ಕಂಚಿನ ಸಾ‘ನೆ ಮಾಡಿದ್ದಾರೆ. ಈ ಮೂಲಕ ಕರ್ನಾಟಕ ತಂಡ ಸಮಗ್ರ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ.

Related Articles