ಸುದ್ದಿಯಾಗದ ಟೆನಿಸ್ ತಾರೆಯೊಡನೆ ಸದ್ದಿಲ್ಲದೆ ಮದುವೆಯಾದ ನೀರಜ್
ಹೊಸದಿಲ್ಲಿ: ಒಲಿಂಪಿಕ್ಸ್ ಪದಕ ವಿಜೇತ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ಭಾನುವಾರ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಮದುವೆಯ ಫೋಟೋವನ್ನು ಹರಿಯಬಿಟ್ಟು ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಮದುವೆಯಾಗುವುಕ್ಕೆ ಮುನ್ನ ಅವರ ಮದುವೆಯ ಬಗೆಗೆ ಸಾಕಷ್ಟು ಊಹಾಪೋಹಗಳು ಹಬ್ಬಿಕೊಳ್ಳುತ್ತವೆ. ಆದರೆ ನೀರಜ್ ಚೋಪ್ರಾ ಅವರು ಮದುವೆಯಾದ ಸುದ್ದಿ ಫೋಟೋ ನೋಡಿದ ಮೇಲೆಯೇ ಮಾಧ್ಯಮಗಳಿಗೆ ಗೊತ್ತಾದದ್ದು. Olympic Champion Neeraj Chopra’s wife is a former tennis player.
ನೀರಜ್ ಮದುವೆಯಾಗಿರುವ ಹಿಮಾನಿ ಮೋರ್ ಕೂಡ ಹರಿಯಾಣದವರೇ 25 ವರ್ಷ. ಸದ್ಯ ಅಮೆರಿಕದಲ್ಲಿ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದಾರೆ. ಇದಕ್ಕೂ ಮುನ್ನ ಅವರು ದೆಹಲಿಯಲ್ಲಿ ದೈಹಿಕ ಶಿಕ್ಷಣದಲ್ಲಿ ಪದವಿ ಗಳಿಸಿರುತ್ತಾರೆ.
ಟೆನಿಸ್ ಆಟಗಾರ್ತಿಯಾಗಿದ್ದ ಹಿಮಾನಿ 2018ರಲ್ಲಿ ಎಐಟಿಎ ರಾಷ್ಟ್ರೀಯ ರಾಂಕಿಂಗ್‌ನಲ್ಲಿ ಸಿಂಗಲ್ಸ್‌ನಲ್ಲಿ 42 ಹಾಗೂ ಡಬಲ್ಸ್‌ನಲ್ಲಿ 27ನೇ ರಾಂಕ್ ಗಳಿಸಿದ್ದರು.