Thursday, December 12, 2024

ವಿಶ್ವದ ಶ್ರೇಷ್ಠ ಅಥ್ಲೀಟ್‌ ಪ್ರಶಸ್ತಿ: ಫೈನಲ್‌ ಸುತ್ತಿಗೆ ನೀರಜ್‌ ಚೋಪ್ರಾ

ಹೊಸದಿಲ್ಲಿ: ಒಲಿಂಪಿಕ್ ಚಾಂಪಿಯನ್‌, ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ ಮತ್ತು ಏಷ್ಯನ್‌ ಗೇಮ್ಸ್‌ ಸ್ವರ್ಣ ವಿಜೇತ ಭಾರತದ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ ಅವರು 2023ನೇ ಸಾಲಿನ ವಿಶ್ವದ ಶ್ರೇಷ್ಠ ಅಥ್ಲೀಟ್‌ ಪಟ್ಟಿಯ ಫೈನಲ್‌ ಹಂತ ತಲುಪಿದ್ದಾರೆ. Neeraj Chopra in final list of World Athletics Award 2023.

ವಿಶ್ವ ಅಥ್ಲೆಟಿಕ್ಸ್‌ ಸಂಸ್ಥೆಯು ಫೈನಲ್‌ ತಲುಪಿದ ಜಗತ್ತಿನ ಶ್ರೇಷ್ಠ ಅಥ್ಲೀಟ್‌ಗಳ ಪಟ್ಟಿಯನ್ನು ಮಂಗಳವಾರ ಪ್ರಕಟಿಸಿದೆ. ನೀರಜ್‌ ಚೋಪ್ರಾ ಅವರು ಈ ಬಾರಿ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಹಾಗೂ ಏಷ್ಯನ್‌ ಗೇಮ್ಸ್‌ನಲ್ಲಿ ಮತ್ತೊಮ್ಮೆ ಸ್ವರ್ಣ ಪದಕ ಗೆಲ್ಲುವ ಮೂಲಕ ಫೈನಲ್‌ನಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.

ಡಿಸೆಂಬರ್‌ 11 ರಂದು 2023ನೇ ಸಾಲಿನ ವಿಶ್ವದ ಶ್ರೇಷ್ಠ ಅಥ್ಲೀಟ್‌ ಪ್ರಶಸ್ತಿಯನ್ನು ಪ್ರಕಟಿಸಲಾಗುವುದು. “ನಾಲ್ಕು ರಾಷ್ಟ್ರಗಳ ಐವರು ಅಥ್ಲೀಟ್‌ಗಳು ಈ ಬಾರಿ ಫೈನಲ್‌ ಹಂತ ತಲುಪಿದ್ದಾರೆ. ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿರುವುದು ಮಾತ್ರವಲ್ಲ ವಿಶ್ವದಾಖಲೆ ಬರೆದ ಅಥ್ಲೀಟ್‌ಗಳೂ ಪಟ್ಟಿಯಲ್ಲಿದ್ದಾರೆ. ಜಗತ್ತಿನ ಆರು ಖಂಡಗಳ ಶ್ರೇಷ್ಠ ಅಥ್ಲೆಟಿಕ್ಸ್‌ ತಜ್ಞರು 11 ಅಥ್ಲೀಟ್‌ಗಳನ್ನು ಆಯ್ಕೆ ಮಾಡಿ, ಅದರಲ್ಲಿ ಅಂತಿಮ ಹಂತಕ್ಕೆ ಐವರ ಆಯ್ಕೆ ಆಗಿದೆ.

ಫೈನಲ್‌ ಪಟ್ಟಿಯಲ್ಲಿರುವ ಐವರು ಶ್ರೇಷ್ಠ ಅಥ್ಲೀಟ್‌ಗಳು:

ನೀರಜ್‌ ಚೋಪ್ರಾ, ಭಾರತ, ಜಾವೆಲಿನ್‌ ಥ್ರೋ. [ವಿಶ್ವ ಚಾಂಪಿಯನ್‌‌ ಹಾಗೂ ಏಷ್ಯನ್‌ ಗೇಮ್ಸ್‌ ಚಾಂಪಿಯನ್‌]

ರೆಯಾನ್‌‌ ಕ್ರೂಸರ್‌, ಅಮೆರಿಕ, ಶಾಟ್‌ಪಟ್‌, [ವಿಶ್ವ ಚಾಂಪಿಯನ್‌, ವಿಶ್ವದಾಖಲೆ]

ಮಾಂಡೋ ಡುಪ್ಲಾಂಟಿಸ್‌, ಸ್ವೀಡನ್‌, ಪೋಲ್‌ ವಾಲ್ಟ್‌ [ವಿಶ್ವ ಚಾಂಪಿಯನ್‌, ಡೈಮಂಡ್‌ಲೀಗ್‌ ಚಾಂಪಿಯನ್‌ ವಿಶ್ವದಾಖಲೆ]

ಕೆವ್ಲಿನ್‌ ಕಿಪ್ಟಮ್‌ ಕೀನ್ಯಾ, ಮ್ಯಾರಥಾನ್‌ [ಲಂಡನ್‌ ಮತ್ತು ಚಿಕಾಗೋ ಮ್ಯಾರಥಾನ್‌ ವಿಜೇತ, ವಿಶ್ವದಾಖಲೆ]

ನೊಹ ಲೈಲಸ್‌ ಅಮೆರಿಕ, 100/200 ಮೀ. ಓಟ, [100 ಮತ್ತು 200 ಮೀ. ವಿಶ್ವ ಚಾಂಪಿಯನ್‌, ವಿಶ್ವದಲ್ಲೇ ಶ್ರೇಷ್ಠ, 200ಮೀ. ಓಟದಲ್ಲಿ ಆರು ಬಾರಿ ಚಿನ್ನ]

Related Articles