ಬೆಂಗಳೂರು:
ಹರಿಯಾಣದ ಭಿವಾನಿಯಲ್ಲಿ ನಡೆಯಲಿರುವ 34ನೇ ರಾಷ್ಟ್ರೀಯ ಜೂನಿಯರ್ ನೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಲಿರುವ ಕರ್ನಾಟಕದ ಬಾಲಕ ಮತ್ತು ಬಾಲಕಿಯರ ತಂಡವನ್ನು ಕರ್ನಾಕಟಕ ಅಮೆಚೂರ್ ನೆಟ್‌ಬಾಲ್ ಸಂಸ್ಥೆ ಪ್ರಕಟಿಸಿದೆ.
ತಂಡಗಳ ವಿವರ:
ಬಾಲಕರ ತಂಡ: ಯಶಸ್ ಗೌಡ ಎಂ.ಎನ್. (ನಾಯಕ), ಸುದೀಪ್ ನಾಯಕ್ ಜೆ.ಸಿ. (ಉಪನಾಯಕ), ಬಿಪಿನ್ ಕೆ. ದಿನೇಶ್ ಡಿ.ವಿ, ದರ್ಶನ್ ಆರ್, ದಿನೇಶ್ ಎಂ,ಅಭಿ ಎಸ್, ಅಶ್ವಥ್ ನಾಯಕ, ಮೊಹಮ್ಮದ್ ಅಫಾನ್, ಪ್ರಜ್ವಲ್ ಎಂ.ಎಸ್, ರಮೇಶ್ ನಾಯಕ ಜೆಸಿ, ಹರ್ಷವರ್ಧನ್ ಜಿ.
ಕೋಚ್: ಶಿವಮೂರ್ತಿ ಜಿ.ಕೆ.
ಬಾಲಕಿಯರ ತಂಡ: ಗಗನ ಕೆಎಸ್ (ನಾಯಕಿ), ಶ್ರುತಿ ಬಿ ಜಿ (ಉಪನಾಯಕಿ), ಸ್ವಾತಿ ಜಿ, ಸೊನಾಲಿ ಎಲ್, ಮಹೇಶ್ವರಿ ಎಸ್, ಮೊನಿಶಾ ಮಂಜುನಾಥ್, ಆಲಿಯಾ ಅಯೂಬ್ ಸೇಠ್, ಶರಣ್ಯ ಡಿ, ಶರಣ್ಯ ಕೆ, ಭೂಮಿಕಾ ಎಚ್, ಸ್ನೇಹಾ ಕೆ, ಲಾವಣ್ಯ ಜಿ.
ಕೋಚ್: ಶಿಪಾಲಿ ಎಂ.
ಕರ್ನಾಟಕ ರಾಜ್ಯ ಅಮೆಚೂರ್ ನೆಟ್‌ಬಾಲ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಗಿರೀಶ್ ಸಿ, ತಂಡವನ್ನು ಪ್ರಕಟಿಸಿದ್ದಾರೆ. ಮಾರ್ಚ್ 12 ರಿಂದ 23ರ ವರೆಗೆ ತರಬೇತಿ ಶಿಬಿರವನ್ನು ನಡೆಸಲಾಗಿತ್ತು. ಬಾಲಕಿಯರಿಗಾಗಿ ಬಿಎಂಎಸ್ ಮಹಿಳಾ ಕಾಲೇಜಿನ ಅಂಗಣದಲ್ಲಿ ಮತ್ತು ಬಾಲಕರಿಗಾಗಿ ಗುಡ್ ಶಫರ್ಡ್ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ತರಬೇತಿ ನೀಡಲಾಗಿತ್ತು.
ಬಸವೇಶ್ವರ ಪಿ.ಯು. ಕಾಲೇಜಿನ ಪ್ರಾಂಶುಪಾಲರಾದ ಬಿ.ಆರ್. ಪ್ರೇಮಚಂದ್ರ ಅವರು ಆಟಗಾರರಿಗೆ ಕಿಟ್ ವಿತರಿಸಿದರು. ಈ ಸಂದರ್ಭದಲ್ಲಿ ಬಸವೇಶ್ವರ ಪಿ.ಯು. ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕರಾದ ಗರೀಶ್ ಜಿ, ಕರ್ನಾಟಕ ಅಮೆಚೂರ್ ನೆಟ್‌ಬಾಲ್ ಸಂಸ್ಥೆಯ ಜಂಟಿ ಕಾರ್ಯದರ್ಶಿ ಗಿರೀಶ್ ಪಿ., ಭಾರತೀಯ ನೆಟ್‌ಬಾಲ್ ಸಂಸ್ಥೆಯ ಅಸೋಸಿಯೇಟ್ ಕಾರ್ಯದರ್ಶಿ ಮತ್ತು ಕರ್ನಾಟಕ ಅಮೆಚೂರ್ ನೆಟ್‌ಬಾಲ್ ಸಂಸ್ಥೆಯ ಜಂಟಿ ಕಾರ್ಯದರ್ಶಿ ಶ್ರೀಮತಿ ಮಾನಸ ಎಲ್.ಜಿ ಹಾಜರಿದ್ದರು.
ಟೂರ್ನಿಯು ನಾಕೌಟ್ ಮಾದರಿಯಲ್ಲಿ ನಡೆಯುವುದರಿಂದ ಕೋವಿಡ್ ಹಿನ್ನೆಲೆಯಲ್ಲಿ ಮೊದಲ ಸುತ್ತಿನ ಪಂದ್ಯವು ಕರ್ನಾಟಕ ಬಾಲಕರು ಮತ್ತು ಬಾಲಕಿಯರು ತಮಿಳನಾಡು ವಿರುದ್ಧ ಬೆಂಗಳೂರಿನ ರಾಜಾಜಿನಗರದಲ್ಲಿರುವ ಬಸವೇಶ್ವರ ಕಾಲೇಜಿನ ಅಂಗಣದಲ್ಲಿ ಆಡಿದರು. ಕರ್ನಾಟಕ ಬಾಲಕರ ತಂಡ ತಮಿಳುನಾಡು ತಂಡವನ್ನು 29-22 ಅಂತದಲ್ಲಿ ಮಣಿಸಿತು. ಬಾಲಕಿಯರ ತಂಡವು ತಮಿಳುನಾಡು ವಿರುದ್ಧ 32-26 ಅಂತರದಲ್ಲಿ ಮಣಿಸಿತು.