Thursday, December 12, 2024

ರಾಷ್ಟ್ರೀಯ ಕ್ರೀಡಾಕೂಟದಲ್ಲಿ ವಾಲಿಬಾಲ್‌ ಕ್ರೀಡೆಯೇ ಇಲ್ಲ!!!

ಗೋವಾ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಗೋವಾದಲ್ಲಿ ನಡೆಯಲಿರುವ ರಾಷ್ಟ್ರೀಯ ಕ್ರೀಡಾಕೂಟದಿಂದ ವಾಲಿಬಾಲ್‌ ಕ್ರೀಡೆಯನ್ನು ಕೈ ಬಿಡಲಾಗಿದೆ. There is no volleyball game in National games Goa

ದೇಶದಲ್ಲಿ ನಡೆಯುತ್ತಿರುವ ವಾಲಿಬಾಲ್‌ ಸಂಸ್ಥೆಯ ವಿವಾದ ಹಾಗೂ ಹಲವು ವರ್ಷಗಳಿಂದ ನಡೆಯದ ವಾಲಿಬಾಲ್‌ ಟೂರ್ನಿಗಳ ನಡುವೆ ಈಗ ಇಂಥಹ ಪ್ರತಿಷ್ಠಿತ ಕ್ರೀಡಾ ಕೂಟದಿಂದ ವಾಲಿಬಾಲ್‌ ಕ್ರೀಡೆಯನ್ನು ಕೈ ಬಿಟ್ಟಿರುವುದು ದುರಾದೃಷ್ಟಕರ.

ದೇಶದಲ್ಲಿ ವಾಲಿಬಾಲ್‌ ಕ್ರೀಡೆಯನ್ನು ಯಶಸ್ವಿಯಾಗಿ ಮುನ್ನಡೆಸಲು ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ ಮಧ್ಯಂತರ ತಾತ್ಕಾಲಿಕ ಸಮಿತಿಯನ್ನು ರಚಿಸಿತ್ತು. ಆದರೆ ಈ ಸಮಿತಿಯು ಕಾಲಾವಕಾಶ ಇಲ್ಲವೆಂದು ಅಲ್ಲದೆ ಎಂಟು ತಂಡಗಳನ್ನು ಆಯ್ಕೆ ಮಾಡುವುದು ಕೆಲವು ಕಾನೂನಾತ್ಮಕ ಸಮಸ್ಯೆಗಳಿಗೆ ಅವಕಾಶ ಮಾಡಿಕೊಡುತ್ತದೆ ಎಂದು ಹೇಳಿದೆ.

ಭಾರತೀಯ ವಾಲಿಬಾಲ್‌ ಸಂಸ್ಥೆಯ ಗೊಂದಲಗಳ ನಡುವೆಯೂ ಭಾರತೀಯ ವಾಲಿಬಾಲ್‌ ತಂಡ ಇತ್ತೀಚಿಗೆ ನಡೆದ ಏಷ್ಯನ್‌ ಗೇಮ್ಸ್‌ನಲ್ಲಿ ಚೈನೀಸ್‌ ತೈಪೆ ಹಾಗೂ ದಕ್ಷಿಣ ಕೊರಿಯಾದಂಥ ಬಲಿಷ್ಠ ತಂಡಗಳನ್ನು ಮಣಿಸಿ ಆರನೇ ಸ್ಥಾನ ಗಳಿಸಿತ್ತು.

ಈ ಫೆಡರೇಷನ್‌ಗಳ ಗೋಳು ಯಾವ ಹಂತ ತಲುಪಿದೆ ಎಂದರೆ ನಮ್ಮ ಕರ್ನಾಟಕದಲ್ಲೂ ಕಳೆದ ಹಲವು ವರ್ಷಗಳಿಂದ ಲೀಗ್‌ ಪಂದ್ಯಗಳೇ ನಡೆಯುತ್ತಿಲ್ಲ. ಯುವ ಆಟಗಾರರಿಗೆ ಅವಕಾಶ ಸಿಗದೆ ಅವರು ಆ ಕ್ರೀಡೆಯನ್ನೇ ತೊರೆಯವ ಸ್ಥಿತಿ ನಿರ್ಮಾಣವಾಗಿದೆ.

ಅಕ್ಟೋಬರ್‌ 26 ರಿಂದ ಗೋವಾದಲ್ಲಿ ರಾಷ್ಟ್ರೀಯ ಕ್ರೀಡಾಕೂಟ ಆರಂಭಗೊಳ್ಳಲಿದೆ.

Related Articles