ರಾಷ್ಟ್ರೀಯ ಆಟ್ಯ-ಪಾಟ್ಯ: ಮಹಾರಾಷ್ಟ್ರ, ಪುದುಚೇರಿ ಚಾಂಪಿಯನ್ಸ್
ಬೆಳಗಾವಿ: ಚಂದರಗಿ ಕ್ರೀಡಾ ಶಾಲೆಯ ಆಶ್ರಯದಲ್ಲಿ, ಕರ್ನಾಟಕ ಆಟ್ಯ- ಪಾಟ್ಯ ಅಸೋಸಿಯೇಷನ್ ಹಾಗೂ ಆಟ್ಯ-ಪಾಟ್ಯ ಫೆಡರೇಷನ್ ಆಫ್ ಇಂಡಿಯಾ ನೆರವಿನೊಂದಿಗೆ ನಡೆದ 39ನೇ ಪುರುಷರ ಹಾಗೂ 34ನೇ ವನಿತೆಯರ ರಾಷ್ಟ್ರೀಯ ಆಟ್ಯ-ಪಾಟ್ಯ ಚಾಂಪಿಯನ್‌ಷಿನ್ ಪುರುಷರ ವಿಭಾಗದಲ್ಲಿ ಮಹಾರಾಷ್ಟ್ರ ಹಾಗೂ ವನಿತೆಯರ ವಿಭಾಗದಲ್ಲಿ ಪುದುಚೇರಿ ತಂಡಗಳು ಪ್ರಶಸ್ತಿ ಗೆದ್ದುಕೊಂಡವು. National Atya-Patya Championship Maharashtra men’s champion and Puducherry women’s champions
ಪುರುಷರ ವಿಭಾಗದಲ್ಲಿ ಮೂರನೇ ಸ್ಥಾನವನ್ನು ಕರ್ನಾಟಕ ಹಾಗೂ ಪುದುಚೇರಿ ತಂಗಳ ಪಾಲಾಯಿತು. ವನಿತೆಯ ವಿಭಾಗಲ್ಲಿ ಮೂರನೇ ಸ್ಥಾನವನ್ನು ತಮಿಳುನಾಡು ಹಾಗೂ ಮಹಾರಾಷ್ಟ್ರದ ತಂಡಗಳು ಗೆದ್ದುಕೊಂಡವು.
ಪುರುಷರ ವಿಭಾಗದ ವೈಯಕ್ತಿಕ ಪ್ರಶಸಿಯಲ್ಲಿ ಉತ್ತಮ ಡಿಫೆಂಡರ್ ಪ್ರಶಸ್ತಿ ಕೇರಳದ ನಿಬಿನ್ ಎಂ. ಹಾಗೂ ಉತ್ತಮ ಆಕ್ರಮಣಕಾರ ಪ್ರಶಸ್ತಿಯನ್ನು ಕರ್ನಾಟಕದ ಸಂತೋಷ್ ಕುಮಾರ್ ಗೆದ್ದುಕೊಂಡರು. ಉತ್ತಮ ಆರ್ರೌಂಡರ್ ಪ್ರಶಸ್ತಿಯನ್ನು ಮಹಾರಾಷ್ಟ್ರದ ದೇವೇಶ್ ಪಾಟೀಲ್ ಗೆದ್ದುಕೊಂಡರು. ಪುರುಷರ ವಿಭಾಗದ ಉದಯೋನ್ಮುಖ ಆಟಗಾರ ಪ್ರಶಸ್ತಿಗೆ ಪುದುಚೇರಿಯ ಸಂಜಯ್ ಆಯ್ಕೆಯಾದರು.

ವನಿತೆಯರ ವಿಭಾಗದಲ್ಲಿ ಉತ್ತಮ ಡಿಫೆಂಡರ್ ಪ್ರಶಸ್ತಿಯನ್ನು ಕೇರಳ ತಂಡದ ಶೃತಿ ಹಾಗೂ ಉತ್ತಮ ಆಕ್ರಮಣಕಾರ ಪ್ರಶಸ್ತಿಯನ್ನು ಕರ್ನಾಟಕ ತಂಡದದ ಅನಿತಾ ಗೆದ್ದುಕೊಂಡು. ಉತ್ತಮ ಆಲ್ರೌಂಡರ್ ಪ್ರಶಸ್ತಿಗೆ ಪುದುಚೇರಿಯ ಸಂಧ್ಯಾ ಭಾಜನರಾದರೆ, ಉದಯೋನ್ಮುಖ ಆಟಗಾರ್ತಿ ಗೌರವಕ್ಕೆ ತಮಿಳುನಾಡಿನ ಪ್ರತೀಕ ಆಯ್ಕೆಯಾದರು. ಇದೇ ಸಂದರ್ಭದಲ್ಲಿ ಚಂದರಗಿ ಕ್ರೀಡಾ ಶಾಲೆಗೆ ವಿವಿಧ ಹಂತಗಳಲ್ಲಿ ಕೀರ್ತಿ ತಂದ ಕ್ರೀಡಾಸಾಧಕರನ್ನು ಗೌರವಿಸಲಾಯಿತು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕ್ರೀಡಾ ಉತ್ತೇಜನ ಹಾಗೂ ಅಭಿವೃದ್ಧಿ ಸಹಕಾರಿ ಸಂಘ ನಿಯಮಿತ ಚಂದರಗಿ ಇದರ ಅಧ್ಯಕ್ಷೆ ಮೃಣಾಲಿನಿ ಪಟ್ಟಣ್ ಅವರು ಚಾಂಪಿಯನ್ನರಿಗೆ ಬಹುಮಾನ ವಿತಿಸಿದರು, ಕ್ರೀಡಾ ಉತ್ತೇಜನ ಹಾಗೂ ಅಭಿವೃದ್ಧಿ ಸಹಕಾರಿ ಸಂಘ ನಿಯಮಿತ ಚಂದರಗಿ ಇದರ ಉಪಾಧ್ಯಕ್ಷ ಮಹೇಶ್ ಎ ಭಾಟೆಎ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದು, “ದೇಶೀಯ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಅಗತ್ಯವಿದೆ. ಗ್ರಾಮೀಣ ಪ್ರತಿಭೆಗಳನ್ನು ಪ್ರೋತ್ಸಾಹಿಸಿದರೆ ಅವರು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯ ಹಾಗೂ ದೇಶಕ್ಕೆ ಕೀರ್ತಿ ತರುತ್ತಾರೆ ಎಂಬುಕ್ಕೆ ಆಟ್ಯ-ಪಾಟ್ಯ ಪ್ರತಿಭೆಗಳೇ ಸಾಕ್ಷಿ,” ಎಂದು ಹೇಳಿದರು. ಮೂರು ದಿನಗಳ ಕಾಲ ನಡೆದ ಈ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಂದರಗಿ ಕ್ರೀಡಾ ಶಾಲೆಯ ಕನ್ನಡ ವಿಭಾಗದ ಪ್ರಾಂಶುಪಾಲರಾದ ಐ ಎಸ್. ಸೂಳಿಬಾವಿ., ಸಿಬಿಎಸ್‌ಇ ವಿಭಾಗದ ಪ್ರಾಶುಪಾಲದರಾ ಪಾಂಡುರಂಗ ಪಾಟೀಲ್, ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಎಂ. ಮೇಠಿ, ಪಿಯುಸಿ ವಿಭಾಗದ ಪ್ರಾಂಶುಪಾಲರಾದ ಎಸ್‌ಬಿ ಪಾಟೀಲ್, ಕೋಚ್ ಲಕ್ಷ್ಮಣ್ ಲಮಾಣ, ಬಿ.ಬಿ. ವಿಜಯನಗರ್, ಗೋಪಾಲ್, ಮಂಜುನಾಥ್ ಟಿ ಹಾಗೂ ಇತರ ಶಿಕ್ಷಕ ವೃಂದ ಯಶಸ್ಸಿಗಾಗಿ ಶ್ರಮಿಸಿದರು.

ಇಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮದ ಯಶಸ್ಸಿಗೆ ಚಂದರಗಿ ಕ್ರೀಡಾ ಶಾಲೆಯ ಸಂಸ್ಥಾಪಕ ಎಸ್.ಎಂ. ಕಲೂತಿ ಅವರು ಹಾಕಿಕೊಟ್ಟ ಅಡಿಪಾಯ, ನೀಡಿದ ಸಲಹೆಗಳೇ ಪ್ರಮುಖವಾಗಿದೆ.

