ಚಂದರಗಿ ಕ್ರೀಡಾ ಶಾಲೆಯಲ್ಲಿ ರಾಷ್ಟ್ರೀಯ ಆಟ್ಯ ಪಾಠ್ಯಕ್ಕೆ ಚಾಲನೆ
ಚಂದರಗಿ: ರಾಷ್ಟ್ರೀಯ ಕ್ರೀಡಾಕೂಟಗಳನ್ನು ಆಯೋಜಿಸಿ ಯಶಸ್ಸು ಕಾಣುವುದು ಅಷ್ಟು ಸುಲಭವಲ್ಲ. ಆದರೆ ದೇಶದ ಮೊದಲ ಕ್ರೀಡಾ ಶಾಲೆಯಾಗಿರುವ ಚಂದರಗಿ ಕ್ರೀಡಾ ಶಾಲೆ ಉನ್ನತ ಮಟ್ಟದ ಕ್ರೀಡಾಕೂಟಗಳನ್ನು ಆಯೋಜಿಸಿ ಯಶಸ್ಸು ಕಂಡಿದೆ. ಇಂಥ ಶಾಲೆಗಳಿಗೆ ಪ್ರೋತ್ಸಾಹ ನೀಡುವುದು ಅಗತ್ಯ ಎಂದು ರಾಜ್ಯ ಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಆಯುಕ್ತ ಚೇತನ್ ಆರ್. ಅವರು ಅಭಿಪ್ರಾಯಪಟ್ಟರು. National Atya-Patya Championship inaugurated by Commissioner DYES Chetan R. at Chandaragi Sports School
ಅವರು ಬೆಳಗಾವಿ ಜಿಲ್ಲೆಯ ರಾಮದುರ್ಗಾದಲ್ಲಿರುವ ಚಂದರಗಿ ಕ್ರೀಡಾ ಶಾಲೆಯ ಆತಿಥ್ಯದಲ್ಲಿ ನಡೆದ 38ನೇ ಪುರುಷರ ಹಾಗೂ 34ನೇ ವನಿತೆಯರ ರಾಷ್ಟ್ರೀ ಆಟ್ಯ ಪಾಠ್ಯ ಚಾಂಪಿಯನ್‌ಷಿಪ್‌ನ ಉದ್ಘಾಟನಾ ಸಮಾರಂಭದಲ್ಲಿ ಗೌರವ ಅತಿಥಿ ಸ್ಥಾನದಿಂದ ಮಾತನಾಡಿದರು.

“ಬೆಳಗಾವಿಯ ಜನರು ಆತಿಥ್ಯಕ್ಕೆ ಹೆಸರಾದವರು. ಅದಕ್ಕೆ ಪೂರಕವಾಗಿ ಚಂದರಗಿ ಕ್ರೀಡಾ ಶಾಲೆಯಲ್ಲಿ ಉತ್ತಮ ರೀತಿಯಲ್ಲಿ ಅತಿಥ್ಯ ಕಲ್ಪಿಸಲಾಗಿದೆ. ವಿವಿಧ ರಾಜ್ಯಗಳಿಂದ ಬಂದ ನೀವೆಲ್ಲರೂ ಭಾರತ ದೇಶೀಯ ಕ್ರೀಡೆಯಾಗಿರುವ ಆಟ್ಯ ಪಾಟ್ಯ ಯಶಸ್ಸಿಗಾಗಿ ಅತ್ಯಂತ ಕ್ರೀಡಾ ಸ್ಫೂರ್ತಿಯಿಂದ ಸ್ಪರ್ಧಿಸಿ”, ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಿಮಿಸಿರುವ ರಾಜ್ಯ ವಿಧಾನಪರಿಷತ್ ಸಚೇತಕ ಹಾಗೂ ರಾಮದುರ್ಗಾ ಶಾಸಕ ಅಶೋಕ್ ಎಂ. ಪಟ್ಟಣ್ ಮಾತನಾಡಿ, “ಆಟ್ಯ ಪಾಠ್ಯ ನಮ್ಮದೇ ದೇಶದಲ್ಲಿ ಬೆಳೆದ ಕ್ರೀಡೆ. ಈ ಕ್ರೀಡೆ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವುದು ಹೆಮ್ಮೆಯ ಸಂಗತಿ, ಪ್ರಸಕ್ತ ಚಾಂಪಿಯನ್‌ಷಿಪ್‌ನಲ್ಲಿ 19 ಪುರುಷ ಹಾಗೂ 17 ಮಹಿಳಾ ತಂಡಗಳು ಪಾಲ್ಗೊಳ್ಳುತ್ತಿವೆ. ಕ್ರೀಡಾ ಇಲಾಖೆ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದೆ ಎಂದರು.

ಕ್ರೀಡಾ ಉತ್ತೇಜನ ಹಾಗೂ ಅಭಿವೃದ್ಧಿ ಸಹಕಾರಿ ನಿಯಮಿತ ಚಂದರಗಿ ಇದರ ಅಧ್ಯಕ್ಷರಾದ ಶ್ರೀಮತಿ ಮೃಣಾಲಿನಿ ಎಂ ಪಟ್ಟಣ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. “ನಮ್ಮ ದೇಶದ ಸಾಂಪ್ರದಾಯಿಕ ಕ್ರೀಡೆಗೆ ಹೆಚ್ಚಿನ ಒತ್ತು ನೀಡುವುದು ನಮ್ಮೆಲ್ಲರ ಕತ್ಯವ್ಯ,” ಎಂದರು.
ಕ್ರೀಡಾ ಉತ್ತೇಜನ ಹಾಗೂ ಅಭಿವೃದ್ಧಿ ಸಹಕಾರಿ ನಿಯಮಿತ ಚಂದರಗಿ ಇದರ ಉಪಾಧ್ಯಕ್ಷರಾದ ಮಹೇಶ್ ಎ. ಭಾಟೆ ಅವರು ಗೌರವ ಅತಿಥಿಯಾಗಿದ್ದರು, ಚಂದರಗಿ ಕ್ರೀಡಾಆ ಶಾಲೆಯ ಸ್ಥಾಪಕ ಎಸ್. ಎಂ. ಕಲುತಿ, ಭಾರತೀಯ ಆಟ್ಯ ಪಾಟ್ಯ ಫೆಡರೇಷನ್‌ನ ಹಂಗಾಮಿ ಅಧ್ಯಕ್ಷ ವಿ ಶಿವಕುಮಾರ್ ಹಾಗೂ ಪ್ರಧಾನ ಕಾರ್ಯದರ್ಶಿ ಡಿ.ಪಿ. ರವೀಶ್ವರ್ ಹಾಜರಿದ್ದರು. ಎಸ್.ಎ. ಕಲೂತಿ ಸಂಯುಕ್ತ ಕ್ರೀಡಾ ಶಾಲೆಯ ಸಿಬಿಎಸ್‌ಸಿ ವಿಭಾಗದ ಪ್ರಾಂಶುಪಾಲರಾದ ಪಾಂಡುರಂಗ ಪಾಟೀಲ್ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಪಿಯುಸಿ ವಿಭಾಗ ಪ್ರಾಂಶುಪಾಲ ಸತೀಶ್ ಪಾಟೀಲ್, ಕನ್ನಡ ವಿಭಾಗದ ಪ್ರಾಂಶುಪಾಲರಾದ ಈರಣ್ಣ ಸೂಳೆಬಾವಿ, ಸಂಸ್ಥೆಯ ಸಿಇಒ ಜಗದೀಶ್ ಎಂ. ಮೇಠಿ, ಆಟ್ಯ ಪಾಟ್ಯ ಕೋಚ್ ಲಕ್ಷ್ಮಣ್ ಲಮಾಣಿ, ಅಥ್ಲೆಟಿಕ್ಸ್ ಕೋಚ್ ಗೋಪಾಲ್ ಹಾಗೂ ಪ್ರಮುಖರು ಹಾಜರಿದ್ದರು.
ಕ್ಯಾಂಪಸ್ ವೀಕ್ಷಿಸಿದ ಆಯುಕ್ತರು: ಆಯಕ್ತರಾಗಿ ಮೊದಲ ಬಾರಿಗೆ ಚಂದರಗಿ ಕ್ರೀಡಾ ಶಾಲೆಗೆ ಭೇಟಿ ನೀಡಿರುವ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಆಯುಕ್ತರಾದ ಚೇತನ್ ಆರ್. (ಐಪಿಎಸ್) ಸುಮಾರು ನೂರು ಎಕರೆ ಪ್ರದೇಶದಲ್ಲಿ ವಿಸ್ತಾರವಾಗಿ ಹಬ್ಬರಿರುವ ಕ್ರೀಡಾ ಶಾಲೆಯ ಕ್ಯಾಂಪಸ್ ನೋಡಿ ಖುಷಿ ವ್ಯಕ್ತಪಡಿಸಿದರು.

ಕ್ರೀಡಾ ಇಲಾಖೆಯಿಂದ ಈ ಶಾಲೆಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸುವ ಬಗ್ಗೆ ಪ್ರಯತ್ನಿಸಲಾಗುವುದು ಎಂದರು.

