Saturday, July 27, 2024

ಪಿಸಿಬಿಗೆ “ಬೆಹನ್‌ ಕಿ…..” ಎಂದು ನಿಂದಿಸಿದ ಆಮೀರ್‌!

ಕರಾಚಿ: ಪಾಕಿಸ್ತಾನ ಕ್ರಿಕೆಟ್‌ ತಂಡ ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಹೀನಾಯ ಪ್ರದರ್ಶನ ತೋರಿ ಮನೆ ತಲುಪಿದೆ. ಈಗ ಕ್ರಿಕೆಟ್‌ ಅಭಿಮಾನಿಗಳು ಮತ್ತು ಮಾಜಿ ಕ್ರಿಕೆಟಿಗರು ಪಾಕ್‌ ಆಟಗಾರರಿಗೆ ಮತ್ತು ಪಾಕಿಸ್ತಾನ ಕ್ರಿಕೆಟ್‌ ತಂಡಕ್ಕೆ ಮನ ಬಂದಂತೆ ಟೀಕೆ ಮಾಡುತ್ತಿದ್ದಾರೆ. ಪಾಕಿಸ್ತಾನದ ಮಾಜಿ ವೇಗದ ಬೌಲರ್‌ ಮೊಹಮ್ಮದ್‌ ಆಮೀರ್‌ ಮಾಡಿರುವ ಟೀಕೆ ಈಗ ಸೋಷಿಯಲ್‌ ಮೀಡಿಯಾಕ್ಕೆ ಆಹಾರವಾಗಿದೆ. Kya system ne kaha tha behen ki…sorry.

ಮೊದಮ್ಮದ್‌ ಆಮೀರ್‌ ಅವರನ್ನು ಪಾಕಿಸ್ತಾನ ತಂಡದ ಪ್ರದರ್ಶನದ ಬಗ್ಗೆ ಚರ್ಚಿಸಲು ನ್ಯಾಷನಲ್‌ ಟಿವಿ ಆಹ್ವಾನಿಸಿತ್ತು. ಆಮೀರ್‌ ತಂಡದ ಆಯ್ಕೆ ಪ್ರಕ್ರಿಯೆ ಬಗ್ಗೆ ಪಿಸಿಬಿಯನ್ನು ಹೀಗಳೆಯುತ್ತ ಬಳಸ ಬಾರದ ಪದವನ್ನು ಬಳಸಿ ನಡುವೆ “Sorry” ಎಂದಿದ್ದಾರೆ.

ಆಮೀರ್‌ ಅವರು 2017ರಲ್ಲಿ ಪಾಕಿಸ್ತಾನ ತಂಡ ಚಾಂಪಿಯನ್ಸ್‌ ಟ್ರೋಫಿ ಗೆದ್ದ ಬಗ್ಗೆ ಮಾತನಾಡುತ್ತಿದ್ದರು. ಆಗ ಅವರಿಗೆ ಬೆನ್ನು ನೋವು ಇದ್ದ ಕಾರಣ ಸೆಮಿಫೈನಲ್‌ ಪಂದ್ಯದಲ್ಲಿ ಆಡಲಾಗಲಿಲ್ಲ. ತಂಡದಲ್ಲಿ ಬದಲಾವಣೆ ತರುಬೇಕೆ ಹೊರತು ನಾಯಕತ್ವ ಬದಲಾವಣೆ ಅಲ್ಲ ಎಂದು ಹೇಳುತ್ತಿದ್ದರು. ಮಿಕಿ ಆರ್ಥರ್‌ ಹಾಗೂ ಸರ್ಫರಾಜ್‌ ಅಹಮ್ಮದ್‌ ಅವರು ಆಮೀರ್‌ ಫೈನಲ್‌ ಆಡಬೇಕೆಂದು ಸೂಚಿಸಿದ್ದರು. ಈ ಸಂದರ್ಭದಲ್ಲಿ ರೂಮಾನ್‌ ರಾಯೀಸ್‌ ತಂಡದಲ್ಲಿ ಉತ್ತಮವಾಗಿ ಆಡುತ್ತಿದ್ದರು. ಈ ಸಂದರ್ಭದಲ್ಲಿ ಪಿಸಿಬಿ ಬಗ್ಗೆ ಅವಾಚ್ಯವಾಗಿ ಮಾತನಾಡಿದ ಆಮೀರ್‌ ಆ ಬಳಿಕ ಕೂಡಲೇ ಕ್ಷಮೆಯಾಚಿಸಿದರು.

“ನಾನು ಚಾಂಪಿಯನ್ಸ್‌ ಟ್ರೋಫಿಯಲ್ಲಿ ಬೆನ್ನುನೋವಿಗೆ ತುತ್ತಾಗಿದ್ದೆ. ನನ್ನ ಬದಲಿಗೆ ರೂಮಾನ್‌ ಉತ್ತಮವಾಗಿಯೇ ಪ್ರದರ್ಶನ ನೀಡಿದರು. ನಾನು ಫಿಟ್‌ ಆಗಿ ಆರ್ಥರ್‌ ಹಾಗೂ ಸರ್ಫರಾಜ್‌ ಅವರ ಸಲಹೆ ಮೇರೆಗೆ ಫೈನಲ್‌ ಆಡಿದೆ. ಹೀಗೆ ಮಾತನಾಡುತ್ತ ಆಮೀರ್‌, “ಕ್ಯಾ ಸಿಸ್ಟಮ್‌ನೆ ಕಹಾ ಥಾ ಬೆಹನ್‌ ಕೀ…. Sorry” ಎಂದರು.  

Related Articles