Saturday, February 24, 2024

ಮಿಲಾಗ್ರಿಸ್‌ನ ನಿತೇಶ್‌, ವೆಲೋನಿಯಾಗೆ ಟಿಟಿ ನಾಯಕತ್ವ

sportsmail

ಮಿಲಾಗ್ರಿಸ್‌ ಕಾಲೇಜು ಕಲ್ಯಾಣಪುರ ಇದರ ಮಿಲಾಗ್ರಿಸ್‌ ಸ್ಪೋರ್ಟ್ಸ್‌ ಅಕಾಡೆಮಿಯಲ್ಲಿ ಪಳಗಿರುವ ಟೇಬಲ್‌ ಟೆನಿಸ್‌ ಆಟಗಾರರಾದ ನಿತೇಶ್‌ ಹಾಗೂ ಕುಮಾರಿ ವೆಲೋನಿಯಾ ಅನುಕ್ರಮವಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಪುರುಷ ಹಾಗೂ ಮಹಿಳಾ ಟೇಬಲ್‌ ಟೆನಿಸ್‌ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ.

 

ಮಂಗಳೂರು ವಿಶ್ವವಿದ್ಯಾಲಯ ತಂಡಕ್ಕೆ ಕಾಲೇಜಿನ ಮೂವರು ಆಟಗಾರರು ಆಯ್ಕೆಯಾಗಿದ್ದಾರೆ. ಪುರುಷರ ತಂಡಕ್ಕೆ ನಿತೇಶ್‌ ಹಾಗೂ ಕ್ರಿಸ್ಟೊನ್‌ ಆಯ್ಕೆಯಾಗಿದ್ದು, ಮಹಿಳೆಯರ ತಂಡದಲ್ಲಿ ಕುಮಾರಿ ವೆಲೋನಿಯಾ ಆಯ್ಕೆಯಾಗಿದ್ದಾರೆ.

ಅಂತಿಮ ಬಿಕಾಂ ವಿದ್ಯಾರ್ಥಿ ನಿತೇಶ್‌ ಮಂಗಳೂರು ವಿಶ್ವವಿದ್ಯಾನಿಲಯದ ತಂಡದ ನಾಯಕನಾಗಿ, ಮೊದಲ ವರ್ಷದ ಬಿಕಾಂ ವಿದ್ಯಾರ್ಥಿನಿ ಕುಮಾರಿ ವೆಲೋನಿಯಾ ಮಹಿಳಾ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

ದಕ್ಷಿಣ ವಲಯ ಪಂದ್ಯಗಳಲ್ಲಿ ಈ ಮೂವರು ಆಟಗಾರರು ಮಂಗಳೂರು ತಂಡವನ್ನು ಪ್ರತಿನಿಧಿಸಲಿದ್ದು, ಇಬ್ಬರು ನಾಯಕರಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಮೂವರೂ ಆಟಗಾರರಿಗೂ ಕಾಲೇಜು ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ.

ಚಾಂಪಿಯನ್‌ ಸತ್ಯಜಿತ್‌ ಭೇಟಿ:

ಮಿಲಾಗ್ರಿಸ್‌ ಕಾಲೇಜಿನ ಚಾಂಪಿಯನ್‌ ವಾಲಿಬಾಲ್‌ ಆಟಗಾರ ಸತ್ಯಜಿತ್‌ ಅವರು ಕಾಲೇಜಿನ ಆಕಾಡೆಮಿಗೆ ಭೇಟಿ ನೀಡಿ ಅಲ್ಲಿ ತರಬೇತಿ ಪಡೆಯುತ್ತಿದ್ದ ವಿವಿಧ ಕ್ರೀಡಾಪಟುಗಳಿಗೆ ಸ್ಫೂರ್ತಿ ತುಂಬಿದರು.

ಇದೇ ಸಂದರ್ಭದಲ್ಲಿ ಸತ್ಯಜಿತ್‌ ಅವರು ಮಂಗಳೂರು ವಿಶ್ವವಿದ್ಯಾಲಜಯ ತಂಡಕ್ಕೆ ಆಯ್ಕೆಯಾದ ಟೇಬಲ್‌ ಟೆನಿಸ್‌ ಆಟಗಾರರಾದ ನಿತೇಶ್‌, ವೆಲೋನಿಯಾ ಮತ್ತು ಕ್ರಿಸ್ಟೋನ್‌ ಅವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ನಿಖಿಲ್‌ ಡಿʼಸೋಜಾ, ಪ್ರಾಂಶುಪಾಲರಾದ ಡಾ. ವಿನ್ಸೆಂಟ್‌ ಆಳ್ವಾ ಹಾಗೂ ಇತರ ಪ್ರಮುಖರು ಹಾಜರಿದ್ದರು.

ಕೀರ್ತಿ ತಂದ ಕೀರ್ತನಾ:

ಮೂಡಬಿದಿರೆಯ ಆಳ್ವಾಸ್‌ ಕಾಲೇಜಿನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್‌ ಕಾಲೇಜು ಅಥ್ಲೆಟಿಕ್ಸ್‌ ಚಾಂಪಿಯನ್ಷಿಪ್‌ನಲ್ಲಿ ಮಿಲಾಗ್ರಿಸ್‌ ಕಾಲೇಜಿನ ದ್ವಿತೀಯ ಬಿಕಾಂ ವಿದ್ಯಾರ್ಥಿನಿ ಕುಮಾರಿ ಕೀರ್ತನಾ 100ಮೀ ಓಟದಲ್ಲಿ ಬೆಳ್ಳಿ ಪದಕ ಗೆದ್ದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಕೀರ್ತನಾ ಅವರಿಗೆ ಕಾಲೇಜಿನ ಸಂಚಾಲಕರಾದ ಅತಿ ವಂದನೀಯ ವಲೇರಿಯನ್‌ ಮೆಂಡೋನ್ಸಾ, ಪ್ರಾಂಶುಪಾಲರಾದ ಡಾ, ವಿನ್ಸೆಂಟ್‌ ಆಳ್ವಾ ಅವರು ಅಭಿನಂದನೆ ಸಲ್ಲಿಸಿದ್ದಾರೆ.

Related Articles