Friday, February 23, 2024

ಬೆಂಗಳೂರಿನಲ್ಲಿ ಐತಿಹಾಸಿಕ ವಾಲಿಬಾಲ್‌ ಕ್ಲಬ್‌ ವಿಶ್ವಕಪ್‌

ಬೆಂಗಳೂರು: 2023ರ ಪುರುಷರ ವಾಲಿಬಾಲ್‌ ಕ್ಲಬ್‌ ವಿಶ್ವ ಚಾಂಪಿಯನ್‌ಷಿಪ್‌ಗೆ (Volleyball Club World Championship) ಬೆಂಗಳೂರು ಆತಿಥ್ಯ ವಹಿಸಲಿದೆ. ಭಾರತೀಯ ವಾಲಿಬಾಲ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ಈ ಕ್ರೀಡೆಯ ಕೆಲವು ಜಾಗತಿಕ ತಾರೆಗಳನ್ನು ಒಳಗೊಂಡ ಜನಪ್ರಿಯ ವಾಲಿಬಾಲ್‌ ಟೂರ್ನಿ ದೇಶದಲ್ಲಿ ನಡೆಯುತ್ತಿದೆ. Men’s Volleyball Club World Championships makes historic debut in Bengaluru.

ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಾಳೆಯಿಂದ ಆರಂಭವಾಗಲಿರುವ ಐದು ದಿನಗಳ ವಾಲಿಬಾಲ್‌ ಪಂದ್ಯಾವಳಿಗೆ ಮುನ್ನ ಎಲ್ಲಾ ಆರು ತಂಡಗಳ ಪ್ರತಿನಿಧಿಗಳು ಮತ್ತು ಪ್ರಮುಖ ಸಂಘಟಕರು ಬೆಂಗಳೂರಿನ ರಿನೈಸಾನ್ಸ್‌ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ರುಪೇ ಪ್ರೈಮ್‌ ವಾಲಿಬಾಲ್‌ ಲೀಗ್‌ ಸೀಸನ್‌ 2ರ ಹಾಲಿ ಚಾಂಪಿಯನ್‌ ಅಹ್ಮದಾಬಾದ್‌ ಡಿಫೆಂಡರ್ಸ್‌ ಭಾಗವಹಿಸಿದ್ದು, ಭಾರತೀಯ ತಾರೆಯರು ವಿಶ್ವದ ಅತ್ಯುತ್ತಮ ಆಟಗಾರರ ವಿರುದ್ಧ ತಮ್ಮ ಕೌಶಲ್ಯವನ್ನು ಪ್ರದರ್ಶಿಸುವ ಅವಕಾಶವನ್ನು ಪಡೆದುಕೊಂಡಿದ್ದಾರೆ.

ಅಹ್ಮದಾಬಾದ್‌ ಡಿಫೆಂಡರ್ಸ್‌ ಅಭಿಯಾನದಲ್ಲಿಭಾಗವಹಿಸಲಿರುವ ಕರ್ನಾಟಕದ ಹುಡುಗ ಸೃಜನ್‌ ಶೆಟ್ಟಿ, ಪುರುಷರ ವಾಲಿಬಾಲ್‌ ಕ್ಲಬ್‌ ವಿಶ್ವ ಚಾಂಪಿಯನ್‌ಷಿಪ್‌ನ ಪ್ರಾಮುಖ್ಯತೆಯ ಬಗ್ಗೆ ಮಾತನಾಡುತ್ತಾ, ‘‘ತವರು ನೆಲದಲ್ಲಿಪುರುಷರ ವಾಲಿಬಾಲ್‌ ಕ್ಲಬ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುವುದು ಹೆಮ್ಮೆಯ ವಿಷಯವಾಗಿದೆ. ಈ ಪಂದ್ಯಾವಳಿಯು ವಿಶ್ವದ ಅತ್ಯುತ್ತಮ ಆಟಗಾರರೊಂದಿಗೆ ಆಡಲು ನಮಗೆ ಸುವರ್ಣಾವಕಾಶವನ್ನು ಒದಗಿಸುವುದಲ್ಲದೆ, ಭಾರತೀಯ ವಾಲಿಬಾಲ್‌ನ ನಿಜವಾದ ಸಾಮರ್ಥ್ಯ‌ವನ್ನು ಪ್ರದರ್ಶಿಸುತ್ತದೆ,’’ ಎಂದು ಹೇಳಿದರು. ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿಪ್ರಸಾರವಾಗಲಿರುವ ಮಾಕ್ರ್ಯೂ ಸ್ಪರ್ಧೆಯಲ್ಲಿಹಾಲಿ ಚಾಂಪಿಯನ್‌ ಇಟಲಿಯ ಸರ್‌ ಸೇಫ್ಟಿ ಸುಸಾ ಪೆರುಗಿಯಾ, ಪಂದ್ಯಾವಳಿಯ ನಾಲ್ಕು ಬಾರಿ ವಿಜೇತರಾಗಿರುವ ಬ್ರೆಜಿಲ್‌ ಕ್ಲಬ್‌ ಸಡಾ ಕ್ರುಜೈರೊ ವೊಲೆ, ಕಳೆದ ವರ್ಷ ನಾಲ್ಕನೇ ಸ್ಥಾನ ಪಡೆದ ನಂತರ ಮಿನಾಸ್‌ ಟೆನಿಸ್‌ ಕ್ಲಬ್‌ (ಇಟ್ಟಂಬೆ ಮಿನಾಸ್‌) ಮೂರನೇ ಬಾರಿಗೆ ಸ್ಪರ್ಧೆಯಲ್ಲಿಕಾಣಿಸಿಕೊಳ್ಳಲಿದೆ. ಜಪಾನ್‌ನ ಸುಂಟೋರಿ ಸನ್‌ ಬರ್ಡ್ಸ್ ಕ್ಲಬ್‌ ಮತ್ತು ಟರ್ಕಿಯ ಹಾಲ್ಕ್‌ ಬ್ಯಾಂಕ್‌ ಸ್ಪೋರ್‌ ಕುಲುಬೆ ಕೂಡ ಈ ವರ್ಷ ಪದಾರ್ಪಣೆ ಮಾಡಲಿವೆ.

ಪಂದ್ಯಾವಳಿಯಲ್ಲಿ ತಮ್ಮ ತಂಡದ ಭವಿಷ್ಯದ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡ ಸರ್‌ ಸೇಫ್ಟಿ ಸುಸಾ ಪೆರುಗಿಯಾದ ನಾಯಕ ವಿಲ್‌ಫ್ರೆಡೊ ಲಿಯಾನ್‌, ‘‘ನಾವು ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಸಾಕಷ್ಟು ನಿರೀಕ್ಷೆಗಳು ಮತ್ತು ಸಕಾರಾತ್ಮಕ ಶಕ್ತಿಯೊಂದಿಗೆ ಇಲ್ಲಿಗೆ ಬಂದಿದ್ದೇವೆ. ನಾನು ಈ ಪಂದ್ಯಾವಳಿಯನ್ನು ಅನೇಕ ಬಾರಿ ಆಡಿದ್ದೇನೆ ಮತ್ತು ಅದನ್ನು ಮತ್ತೆ ಗೆಲ್ಲುವುದು ನಮ್ಮ ತಂಡಕ್ಕೆ ದೊಡ್ಡದಾಗಿದೆ, ವಿಶೇಷವಾಗಿ ಭಾರತದಲ್ಲಿಅದನ್ನು ಗೆಲ್ಲುವುದು. ಈ ಪಂದ್ಯಾವಳಿಯಲ್ಲಿ ಅನೇಕ ದೊಡ್ಡ ತಾರೆಗಳಿದ್ದಾರೆ ಮತ್ತು ವಾಲಿಬಾಲ್‌ ಯುರೋಪ್‌ ಮತ್ತು ಅಮೆರಿಕದಲ್ಲಿ ಮಾತ್ರವಲ್ಲದೆ ಭಾರತದಲ್ಲಿಯೂ ಬೆಳೆಯುತ್ತಿದೆ ಎಂದು ತೋರಿಸಲು ಇದು ಉತ್ತಮ ಮಾರ್ಗವಾಗಿದೆ. ಇದು ಭವಿಷ್ಯದ ಪೀಳಿಗೆಯು ಆಶಿಸಬಹುದಾದ ವಿಷಯ ಎಂದು ನಾನು ಭಾವಿಸುತ್ತೇನೆ,’’ ಎಂದರು. ಎಫ್‌ಐವಿಬಿ,2ನೇ ಕಾರ್ಯನಿರ್ವಾಹಕ ಉಪಾಧ್ಯಕ್ಷ  ಮತ್ತು ಸಿಇವಿ ಅಧ್ಯಕ್ಷ  ಶ್ರೀ ಅಲೆಕ್ಸಾಂಡರ್‌ ಬೊರಿಸಿಕ್‌ ಪಂದ್ಯಾವಳಿಯನ್ನು ಭಾರತಕ್ಕೆ ತರುವಲ್ಲಿ ಸಂತೋಷ ವ್ಯಕ್ತಪಡಿಸಿದರು, ‘‘ಈ ಪಂದ್ಯಾವಳಿಗಾಗಿ ಭಾರತದಲ್ಲಿರಲು ನಮಗೆ ತುಂಬಾ ಸಂತೋಷವಾಗಿದೆ. ಭಾರತವು ಇಷ್ಟು ದೊಡ್ಡ ದೇಶವಾಗಿದ್ದರೂ, ವಾಲಿಬಾಲ್‌ನ ಅತ್ಯುನ್ನತ ಮಟ್ಟದಲ್ಲಿಸಾಕಷ್ಟು ಮಾನ್ಯತೆ ಹೊಂದಿಲ್ಲ. ಈ ಆಟವನ್ನು ಮತ್ತು ಭಾರತದಲ್ಲಿಅದರ ಬೆಳವಣಿಗೆಯನ್ನು ಬೆಂಬಲಿಸುವಂತೆ ಪ್ರತಿಯೊಬ್ಬರನ್ನು ಕೋರಲು ನಾನು ಈ ಅವಕಾಶವನ್ನು ಬಳಸಿಕೊಳ್ಳಲು ಬಯಸುತ್ತೇನೆ,’’ ಎಂದು ಹೇಳಿದರು.

ಬೇಸ್‌ ಲೈನ್‌ ವೆಂಚರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಹ-ಸಂಸ್ಥಾಪಕ ತುಹಿನ್‌ ಮಿಶ್ರಾ ಕೂಡ ಸ್ಪರ್ಧೆಯ ಮಹತ್ವವನ್ನು ಒತ್ತಿ ಹೇಳಿದರು. ‘‘ನಮಗೆ ಈ ಅವಕಾಶವನ್ನು ನೀಡಿದ್ದಕ್ಕಾಗಿ ನಾನು ಎಫ್‌ಐವಿಬಿಗೆ ನನ್ನ ಕೃತಜ್ಞತೆಯನ್ನು ಅರ್ಪಿಸಲು ಬಯಸುತ್ತೇನೆ, ಭಾರತದಲ್ಲಿಈ ಹೆಗ್ಗುರುತು ಕಾರ್ಯಕ್ರಮವನ್ನು ಆಯೋಜಿಸಲು ನಾವು ನಿಜವಾಗಿಯೂ ಉತ್ಸುಕರಾಗಿದ್ದೇವೆ. ನಾವು ಮುಂದಿನ ವರ್ಷವೂ ಪ್ರಶಸ್ತಿಯನ್ನು ಆಯೋಜಿಸಲಿದ್ದೇವೆ ಮತ್ತು ನಮ್ಮ ಭಾರತೀಯ ಆಟಗಾರರಿಗೆ ವಿಶ್ವದ ಅತ್ಯುತ್ತಮ ಆಟಗಾರರ ವಿರುದ್ಧ ಸ್ಪರ್ಧಿಸಲು ಮತ್ತು ಅವರಿಗೆ ಅಗತ್ಯವಿರುವ ಮಾನ್ಯತೆಯನ್ನು ಪಡೆಯಲು ಇದು ಉತ್ತಮ ಅವಕಾಶವಾಗಿದೆ. ಇದು ಇಡೀ ರುಪೇ ಪ್ರೈಮ್‌ ವಾಲಿಬಾಲ್‌ ಲೀಗ್‌ಗೆ ದೊಡ್ಡ ಸಾಧನೆಯಾಗಿದೆ ಮತ್ತು ಈ ಮೈಲಿಗಲ್ಲನ್ನು ಸಾಧಿಸಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ,’’ ಎಂದು ತಿಳಿಸಿದರು.

ಡಿಸೆಂಬರ್‌ 6ರಂದು ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಟೂರ್ನಿ ಆರಂಭವಾಗಲಿದೆ. ಅಹ್ಮದಾಬಾದ್‌ ಡಿಫೆಂಡರ್ಸ್‌ ತಂಡ ‘ಎ’ ಗುಂಪಿನಲ್ಲಿಹಾಲಿ ಚಾಂಪಿಯನ್‌ ಇಟಲಿಯ ಸರ್‌ ಸಿಕೊಮಾ ಪೆರುಗಿಯಾ ಮತ್ತು ಬ್ರೆಜಿಲ್‌ನ ಮಿನಾಸ್‌ ಟೆನಿಸ್‌ ಕ್ಲಬ್‌ (ಇಟಾಂಬೆ ಮಿನಾಸ್‌) ಅವರನ್ನು ಎದುರಿಸಲಿದೆ. ‘ಬಿ’ ಗುಂಪಿನಲ್ಲಿಟರ್ಕಿಯ ಹಾಲ್ಕ್‌ಬ್ಯಾಂಕ್‌ ಸ್ಪೋರ್‌ ಕುಲುಬೆ, ಬ್ರೆಜಿಲ್‌ನ ಸಡಾ ಕ್ರುಜೈರೊ ವೊಲೆ ಮತ್ತು ಜಪಾನ್‌ನ ಸುಂಟೋರಿ ಸನ್ಬರ್ಡ್ಸ್ ಸ್ಥಾನ ಪಡೆದಿವೆ. ಪುರುಷರ ವಾಲಿಬಾಲ್‌ ಕ್ಲಬ್‌ ವಿಶ್ವ ಚಾಂಪಿಯನ್‌ಷಿಪ್‌ 2023 ಭಾರತದಲ್ಲಿಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿಸೋನಿ ಟೆನ್‌ 1 ಮತ್ತು ಸೋನಿ ಟೆನ್‌ 3 ಚಾನೆಲ್‌ಗಳಲ್ಲಿ ನೇರ ಪ್ರಸಾರವಾಗಲಿದೆ. ಭಾರತದ ಅಭಿಮಾನಿಗಳು ಫ್ಯಾನ್‌ಕೋಡ್‌ನಲ್ಲಿಆನ್‌ಲೈನ್‌ನಲ್ಲಿ ಪಂದ್ಯಾವಳಿಯನ್ನು ನೇರವಾಗಿ ವೀಕ್ಷಿಸಬಹುದು

Related Articles