Saturday, February 24, 2024

ಇರಾನಿ ಕಪ್ ಟೀಂ ಇಂಡಿಯಾಕ್ಕೆ ಮಯಾಂಕ್ ಅಗರ್ವಾಲ್ ಸಾರಥ್ಯ : ಶೇಷ ಭಾರತ ತಂಡವನ್ನು ಪ್ರಕಟಿಸಿದ ಬಿಸಿಸಿಐ

ಮಂಬೈ : ಮುಂಬರುವ ಇರಾನಿ ಕಪ್ ಗೆ (Irani Cup) ಬಿಸಿಸಿಐ ಭಾರತ ತಂಡ (ರೆಸ್ಟ್ ಆಪ್ ಇಂಡಿಯಾ ) ತಂಡವನ್ನು ಪ್ರಕಟಿಸಿದೆ. ಕನ್ನಡಿಗ ಮಯಾಂಕ್ ಅಗರ್ವಾಲ್ (Mayank Agarwal) ತಂಡದ ಸಾರಥ್ಯವನ್ನು ವಹಿಸಲಿದ್ದಾರೆ. ಮಾರ್ಚ್ 1ರಿಂದ 5ರವರೆಗೆ ಮಧ್ಯಪ್ರದೇಶದ ಗ್ವಾಲಿಯರ್’ನ ಕ್ಯಾಪ್ಟನ್ ರೂಪ್ ಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿದೆ.ಇನ್ನು ಮಧ್ಯಮ ಕ್ರಮಾಂಕದ ಬ್ಯಾಟರ್ ಸರ್ಫರಾಜ್ ಖಾನ್ ಎಡಗೈ ಕಿರುಬೆರಳಿನ ಕೂದಲು ಮುರಿತದಿಂದಾಗಿ ಇರಾನಿ ಕಪ್‌ನಿಂದ ಹೊರಬಿದ್ದಿದ್ದಾರೆ. ಹೀಗಾಗಿ ಗಾಯಾಳು ಸರ್ಫರಾಜ್ ಬದಲಿಗೆ ಬಾಬಾ ಇಂದ್ರಜಿತ್ ಸ್ಥಾನ ಪಡೆದಿದ್ದಾರೆ. ಆದರೆ ಮಯಾಂಕ್ ಹೊರತುಪಡಿಸಿ ಉಳಿದ ಕರ್ನಾಟಕದ ಯಾವುದೇ ಆಟಗಾರರು ಕೂಡ ತಂಡದಲ್ಲಿ ಸ್ಥಾನ ಪಡೆದುಕೊಂಡಿಲ್ಲ.

ಇನ್ನು ಈ ಬಾರಿಯ ರಣಜಿ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡದ ನೇತೃತ್ವವನ್ನು ವಹಿಸಿದ್ದ ಮಯಾಂಕ್ ಅಗರ್ವಾಲ್ ಗೆ ಶೇಷ ಭಾರತ ತಂಡವನ್ನು ಮುನ್ನೆಡೆಸುವ ಅವಕಾಶ ದೊರೆತಿದೆ. ಕರ್ನಾಟಕ ತಂಡದ ನಾಯಕನಾಗಿರುವ ಮಯಾಂಕ್ ಅಗರ್ವಾಲ್ ಪ್ರಸಕ್ತ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ 9 ಪಂದ್ಯಗಳಿಂದ ಎರಡು ದ್ವಿಶತಕಗಳ ಸಹಿತ 990 ರನ್ ಕಲೆ ಹಾಕಿದ್ದರು. ಸೌರಾಷ್ಟ್ರ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಸೆಮಿಫೈನಲ್ ಪಂದ್ಯದಲ್ಲಿ ಮಯಾಂಕ್ (Mayank Agarwal) ಅಮೋಘ ದ್ವಿಶತಕ ಬಾರಿಸಿದ್ದರು. ಆದರೆ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಮುಗ್ಗರಿಸಿ ಸರಣಿಯಿಂದ ಹೊರಬಿದ್ದಿತ್ತು.

2019–20ರಲ್ಲಿ ರೆಸ್ಟ್ ಆಫ್ ಇಂಡಿಯಾ ತಂಡ ಸೌರಾಷ್ಟ್ರ ತಂಡದ ವಿರುದ್ದ ಗೆಲುವು ದಾಖಲಿಸಿತ್ತು. ಆದರೆ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ತದನಂತರದಲ್ಲಿ ಇರಾನಿ ಟ್ರೋಫಿ ಪಂದ್ಯಾವಳಿ ನಡೆದಿರಲಿಲ್ಲ. ಇದೀಗ ಎರಡು ವರ್ಷಗಳ ನಂತರ ಇರಾನಿ ಟ್ರೋಫಿ ಪಂದ್ಯಾವಳಿ ನಡೆಯುತ್ತಿದೆ. ಇದುವರೆಗೆ ಒಟ್ಟು 57 ಬಾರಿ ಇರಾನಿ ಟ್ರೋಫಿಯಲ್ಲಿ ಪಾಲ್ಗೊಂಡಿದ್ದ ರೆಸ್ಟ್ ಆಫ್ ಇಂಡಿಯಾ ತಂಡ 24 ಬಾರಿ ಗೆಲುವು ದಾಖಲಿಸಿದ್ದು, 25 ಬಾರಿ ಸೋಲನ್ನು ಕಂಡಿತ್ತು. ಹೀಗಾಗಿ ರೆಸ್ಟ್ ಆಫ್ ಇಂಡಿಯಾ ಅತೀ ಹೆಚ್ಚು ಬಾರಿ ಇರಾನಿ ಟ್ರೋಫಿಯನ್ನು ಜಯಿಸಿದೆ. ಇನ್ನು ಮುಂಬೈ ತಂಡ 29 ಬಾರಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು, 12 ಬಾರಿ ಗೆಲುವು ಕಂಡಿದ್ದು, 15 ಬಾರಿ ಸೋಲನ್ನು ಅನುಭವಿಸಿದೆ. ಇರಾನಿ ಟ್ರೋಫಿಯಲ್ಲಿ ಅತೀ ಹೆಚ್ಚು ಗೆಲುವು ಸಾಧಿಸಿರುವ ತಂಡಗಳ ಪೈಕಿ ಕರ್ನಾಟಕ ತಂಡ ಮೂರನೇ ಸ್ಥಾನವನ್ನು ಗಳಿಸಿದೆ. ಇದುವರೆಗೆ ಒಟ್ಟು 8 ಬಾರಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು, 6 ಬಾರಿ ಗೆಲುವು ಕಂಡಿದ್ದು, 2 ಬಾರಿ ಸೋಲನ್ನು ಅನುಭವಿಸಿದೆ.

‌ಭಾರತ ತಂಡ ( ಶೇಷಭಾರತ) : ಮಯಾಂಕ್ ಅಗರ್ವಾಲ್ (ನಾಯಕ), ಅಭಿಮನ್ಯು ಈಶ್ವರನ್, ಯಶಸ್ವಿ ಜೈಸ್ವಾಲ್, ಯಶ್ ಧುಲ್, ಬಾಬಾ ಇಂದ್ರಜಿತ್, ಉಪೇಂದ್ರ ಯಾದವ್ (ವಿಕೆಟ್ ಕೀಪರ್), ಅತಿತ್ ಶೇತ್, ಸೌರಭ್ ಕುಮಾರ್, ಹಾರ್ವಿಕ್ ದೇಸಾಯಿ, ನವದೀಪ್ ಸೈನಿ, ಮುಖೇಶ್ ಕುಮಾರ್, ಚೇತನ್ ಸಕರಿಯಾ, ಆಕಾಶ್ ದೀಪ್, ಮಯನ್ಕಾಂದೆ , ಪುಲ್ಕಿತ್ ನಾರಂಗ್, ಸುದೀಪ್ ಕುಮಾರ್ ಘರಾಮಿ

ಇದನ್ನೂ ಓದಿ : Santosh Trophy Football ಸೌದಿ ಅರೇಬಿಯಾದಲ್ಲೇಕೆ ಸಂತೋಷ್ ಟ್ರೋಫಿ ಫುಟ್ಬಾಲ್‌ ?

ಇದನ್ನೂ ಓದಿ : Women’s Premier League 2023: ಆರ್‌ಸಿಬಿಗೆ ಡೆಲ್ಲಿ ಕ್ಯಾಪಿಟಲ್ಸ್ ಸವಾಲು : ಮಹಿಳಾ ಪ್ರೀಮಿಯರ್ ಲೀಗ್ ವೇಳಾಪಟ್ಟಿ ಪ್ರಕಟ

Related Articles