Wednesday, November 13, 2024

ಫೈನಲ್ ತಲುಪಿದ ಮೇರಿಕೋಮ್: ಲೊವ್ಲೀನಾಗೆ ಕಂಚು

ದೆಹಲಿ:

ಮಹಿಳೆಯರ ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನ 48ಕೆ.ಜಿ ವಿಭಾಗದ ಸೆಮಿಫೈನಲ್ ನಲ್ಲಿ ಭಾರತದ ಮೇರಿಕೋಮ್ ಅವರು ಉತ್ತರ ಕೊರಿಯಾದ ಕಿಮ್ ಹ್ಯಾಂಗ್ ಮಿ ಅವರನ್ನು ಸೋಲಿಸುವ ಮೂಲಕ ಫೈನಲ್ ಪ್ರವೇಶ ಮಾಡಿದ್ದಾರೆ. ಇದರೊಂದಿಗೆ ಆರನೇ ಚಿನ್ನದ ಪದಕದ ಸಮೀಪ ಮೋರಿ ಕೋಮ್ ಪಯಣ ಬೆಳಸಿದ್ದಾರೆ.

ಐದು ಬಾರಿ ವಿಶ್ವಚಾಂಪಿಯನ್ ಮೇರಿಕೋಮ್ ಅವರು ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಅಂತಿಮ ನಾಲ್ಕರ ಘಟ್ಟದಲ್ಲಿ ಕಿಮ್ ಹ್ಯಾಂಗ್ ಮಿ ಅವರನ್ನು ಬಲವಾದ ಪಂಚ್‍ಗಳ ಮೂಲಕ ಮಣಿಸುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಅಂಗಳದಲ್ಲಿ ನೆರೆದಿದ್ದ ನೂರಾರು ಅಭಿಮಾನಿಗಳ ಪ್ರೀತಿಗೆ ಮೇರಿ ಪಾತ್ರರಾದರು.
69 ಕೆ.ಜಿ ವಿಭಾಗದ ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಲೊವ್ಲೀನಾ ಅವರು ಚೈನೀಸ್ ತೈಫೈನ ಚೆನ್ ನೀನ್ ಚಿನ್ ವಿರುದ್ಧ ಸೋಲುವ ಮೂಲಕ ಕಂಚಿನ ಪದಕಕ್ಕೆ ತೃಪ್ತರಾದರು.

Related Articles