Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ದಾವಣಗೆರೆಯ ಮಣಿಕಂಠಗೆ 4 ಚಿನ್ನ, ಚೆನ್ನಾಗಿ ಈಜಿದ ಚಿನ್ನದ ಮೀನು

ರಾಯ್ಪುರ: ಇಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಬುಡಕಟ್ಟು ಕ್ರಿಡಾಕೂಟದಲ್ಲಿ ಕರ್ನಾಟಕದ ಮಣಿಕಂಠ ಎಲ್‌. ಈಜಿನಲ್ಲಿ ನಾಲ್ಕು ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದಾರೆ. ಮೊದಲ ದಿನದಲ್ಲಿ ಎರಡು ಚಿನ್ನ ಗೆದ್ದಿದ್ದ ಮಣಿಕಂಠ ಎರಡನೇ ದಿನದಲ್ಲೂ ಇನ್ನೆರಡು ಸ್ವರ್ಣ ಗೆದ್ದರು. Manikantha L. from Davanagere won four gold medals in swimming at the Khelo India Tribal Games 2026

ಒಡಿಶಾದ ಚಿನ್ನದ ಮೀನು ಅಂಜಲಿ ಎರಡನೇ ಚಿನ್ನ ಗೆದ್ದರು. 200 ಮೀ, ವೈಯಕ್ತಿಕ ಮೆಡ್ಲೆ ವಿಭಾಗದಲ್ಲಿ ಅನುಷ್ಕಾ ಭಗತ್‌ ಎರಡನೇ ಬೆಳ್ಳಿ ಗೆಲ್ಲುವ ಮೂಲಕ ಆತಿಥೇಯ ಛತ್ತೀಸ್‌ಗಢಕ್ಕೆ ಮತ್ತೊಂದು ಸಂಭ್ರಮದ ದಿನ.

ಬುಧವಾರ 100 ಮೀಟರ್ ಬ್ರೆಸ್ಟ್‌ಸ್ಟ್ರೋಕ್ ಮತ್ತು 50 ಮೀಟರ್ ಬಟರ್‌ಫ್ಲೈ ವಿಭಾಗದಲ್ಲಿ ಚಿನ್ನ ಗೆದ್ದಿದ್ದ ಮಣಿಕಂಠ, ಎರಡನೇ ದಿನದಲ್ಲಿ 200 ಮೀಟರ್ ಮೈಯಕ್ತಿಕ ಮೆಡ್ಲೆಯನ್ನು 2 ನಿಮಿಷ 25.93 ಸೆಕೆಂಡುಗಳಲ್ಲಿ ಪೂರ್ಣಗೊಳಿಸುವ ಮೂಲಕ ಈಜುಕೊಳದಲ್ಲಿ ಪ್ರಭುತ್ವ ಮುಂದುವರಿಸಿದರು. ತ್ರಿಪುರಾದ ರಿಯಾಜ್ ತ್ರಿಪುರ 2:34.04 ಸೆಕೆಂಡುಗಳಲ್ಲಿ ಕ್ರಮಿಸಿ ಎರಡನೇ ಸ್ಥಾನ ಪಡೆದರೆ, ಕನ್ಹು ಸೊರೆನ್ (ಒಡಿಶಾ) 2:36.21 ಸೆಕೆಂಡುಗಳಲ್ಲಿ ಕ್ರಮಿಸಿ ಕಂಚಿನ ಪದಕ ಗೆದ್ದರು. ಕರ್ನಾಟಕದ ಆದಿತ್ಯ ಅರವಿಂದ್‌ ಉತ್ತಮ ಪೈಪೋಟಿ ನೀಡಿ ನಾಲ್ಕನೇ ಸ್ಥಾನ ಗಳಿಸಿ ಪದಕದಿಂದ ವಂಚಿತರಾದರು.

ನಂತರ 100 ಮೀ ಬ್ಯಾಕ್‌ಸ್ಟ್ರೋಕ್‌ನಲ್ಲಿ ಮಣಿಕಂಠ 1 ನಿಮಿಷ 07.74 ಸೆಕೆಂಡುಗಳಲ್ಲಿ ಗುರಿ ತಲುಪಿ ಕ್ರೀಡಾಕೂಟದ ನಾಲ್ಕನೇ ಚಿನ್ನ ಗೆದ್ದರು. ಕರ್ನಾಟಕದ ಕೀರ್ತನ್‌ ಶರತ್‌ ನಾಲ್ಕನೇ ಸ್ಥಾನ ಗಳಿಸಿ ಪದಕದಿಂದ ವಂಚಿತರಾದರು. ವನಿತೆಯರ 100 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಕರ್ನಾಕದ ನಿಧಿ ಎಸ್‌ ಬೆಳ್ಳಿ ಗೆದ್ದರು. ಈ ವಿಭಾಗದಲ್ಲಿ ಒಡಿಶಾದ ಅಂಜಲಿ ಮುಂಡಾ ಚಿನ್ನ ಗೆದ್ದರು.

ಪುರುಷರ 4×100 ಮೀ. ಫ್ರೀ ಸ್ಟೈಲ್‌ ರಿಲೇಯಲ್ಲಿ ಕರ್ನಾಟಕ ತಂಡ 4 ನಿಮಿಷ 00.42 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಗೆದ್ದಿತು. ಕೀರ್ತನ್‌ ಶರತ್‌, ಕೃಷ್ಣ, ಧೋನೇಶ್‌ ಹಾಗೂ ಮಣಿಕಂಠ ಎಲ್‌. ಅವರು ರಿಲೇ ಜಯದ ರೂವಾರಿಗಳು. ವನಿತೆಯರ 4×100 ಮೀ, ರಿಲೇಯಲ್ಲಿ ಕರ್ನಾಟಕ ಕಂಚಿನ ಪದಕಕ್ಕೆ ತೃಪ್ತಿಪಟ್ಟಿತು. ಮೇಘಾಂಜಲಿ, ವೈಷ್ಣವಿ, ಅಕ್ಷಿತ ಹಾಗೂ ನಿಧಿ ಎಸ್‌. ಅವರು ಕರ್ನಾಟಕಕ್ಕೆ ರಿಲೇಯಲ್ಲಿ ಕಂಚಿನ ಪದಕ ಗೆದ್ದರು.


administrator