Thursday, October 10, 2024

ಮಹಾರಾಜ ಟ್ರೋಫಿ: ಬೆಂಗಳೂರು ಬ್ಲಾಸ್ಟರ್ಸ್ ತಂಡಕ್ಕೆ ಜಯ

Journalist Ramson:  ಮಹಾರಾಜ ಟ್ರೋಫಿ ಟಿ20ಯ ಮೊದಲ ಪಂದ್ಯದಲ್ಲಿ ಮಾಯಾಂಕ್ ಅಗರ್ವಾಲ್ ನೇತೃತ್ವದ ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ತಂಡ ಗುಲ್ಬರ್ಗಾ ಮಿಸ್ಟಿಕ್ಸ್ ವಿರುದ್ಧ ಭರ್ಜರಿ 9 ವಿಕೆಟ್‌ಗಳ ಜಯ ಗಳಿಸಿದೆ. Maharaja Trophy Bengaluru Blasters won by 9 wickets.

ಟಾಸ್ ಗೆದ್ದ ಮಾಯಾಂಕ್ ಅಗರ್ವಾಲ್ ಫೀಲ್ಡಿಂಗ್ ಆಯ್ದುಕೊಂಡರು.ಆರಂಭಿಕ್ ಎರಡು ಓವರ್‌ಗಳಲ್ಲಿ ಗುಲ್ಬರ್ಗಾ ತಂಡದ ಆರಂಭಿಕ ಆಟಗಾರರಾದ ಲವನೀತ್ ಸಿಸೋಡಿಯಾ ಹಾಗೂ ನಾಯಕ ದೇವದತ್ ಪಡಿಕ್ಕಲ್ ಬ್ಲಾಸ್ಟರ್ಸ್ ಬೌಲರ್ಸ್‌ಗಳಿಗೆ ತಮ್ಮ ಬ್ಯಾಟಿಂಗ್ ರುಚಿ ತೋರಿಸಿದರು. ಲವೀಶ್ ಕೌಶಲ್ ಲವನೀತ್ ಸಿಸೋಡಿಯಾ ವಿಕೆಟ್ ಪಡೆಯುವ ಮೂಲಕ ಆರಂಭಿಕರ ಆರ್ಭಟದ ಜೊತೆಯಾಟಕ್ಕೆ ಬ್ರೇಕ್ ಹಾಕಿದರು. ನಂತರ ನವೀನ್ ಎಮ್‌ಜಿ ದೇವದತ್ತ ಅವರ ವಿಕೆಟ್ ಪಡೆದು ಇನ್ನೊಬ್ಬ ಆರಂಭಿಕನಿಗೆ ಪೆವಿಲಿಯನ್ ಹಾದಿ ತೋರಿಸಿದರು.ಇಲ್ಲಿ ಮುಗ್ಗರಿಸಿದ ತಂಡಕ್ಕೆ ಪ್ರವೀಣ್ ದುಬೆ ಸ್ವಲ್ಪ ಚೇತರಿಕೆ ಕೊಟ್ಟರೂ ತಂಡ ಮತ್ತೆ ಮೇಲೇಳಲೇ ಇಲ್ಲ.ಬ್ಲಾಸ್ಟರ್ಸ್ ತಂಡದ ಬೌಲರ್‌ಗಳ ಸಂಘಟಿತ ಪ್ರದರ್ಶನದಿಂದ ಗುಲ್ಬರ್ಗಾ 116ಕ್ಕೆ ಆಲೌಟ್ ಆಯಿತು. ಬ್ಲಾಸ್ಟರ್ಸ್ ಪರವಾಗಿ ಲವೀಶ್ ಕೌಶಲ್ (2 ), ನವೀನ್ ಎಮ್‌ಜಿ (2),ಆದಿತ್ಯ ಗೋಯಲ್(3),ಮೋಸಿನ್ ಖಾನ್ (2) ಉತ್ತಮ ಬೌಲಿಂಗ್‌ ಪ್ರದರ್ಶಿಸಿದರು.

ಇನ್ನೂ 117 ರನ್‌ಗಳ ಸಾಧಾರಣ ಗುರಿ ಮುಟ್ಟಲು ಅಂಗಣಕ್ಕಿಳಿದ ಬ್ಲಾಸ್ಟರ್ಸ್ ತಂಡದ ಆರಂಭಿಕ ಜೋಡಿಗಳಾದ ಎಲ್‌ಆರ್ ಚೇತನ್ ಹಾಗೂ ನಾಯಕ ಮಾಯಾಂಕ್ ಅಗರ್ವಾಲ್ ಇಬ್ಬರೂ ಬೌಲ್ಗಳನ್ನು ಬೌಂಡರಿಗಟ್ಟುತ್ತಾ ಶತಕದ ಜೊತೆಯಾಟವಾಡಿ ಗುಲ್ಬರ್ಗಾ ತಂಡದ ಬೌಲರ್ಸ್‌ಗಳ ಬೆವರಿಳಿಸಿದರು. 11.2 ಓವರ್‌ಗಳಲ್ಲೆ ಗುರಿ ಮುಟ್ಟಿ ಸುಲಭವಾಗಿ ಜಯವನ್ನು ದಕ್ಕಿಸಿಕೊಂಡರು.ಇದರಲ್ಲಿ ಎಲ್ ಆರ್ ಚೇತನ್ (53) ಅರ್ಧಶತಕ ಬಾರಿಸಿ ಮಿಂಚಿದರೆ, ಮಾಯಾಂಕ್ ಅಗರ್ವಾಲ್ 47 ರನ್ ಬಾರಿಸಿ ನಾಟೌಟ್ ಆಗಿ ಉಳಿದು ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.ಗುಲ್ಬರ್ಗಾ ಪರವಾಗಿ ವೈಶಾಖ್‌ ವಿಜಯ್‌ ಕುಮಾರ್ ಉಳಿದ ಬೌಲರ್‌ಗಳಂತೆ ದುಬಾರಿಯಾದರೂ ಒಂದು ವಿಕೆಟ್ ಪಡೆಯಲು ಯಶಸ್ವಿಯಾದರು.

Related Articles