ಲಂಕೆಯನ್ನು ಮನೆಗೆ ಅಟ್ಟಿದ ಆಫ್ಘಾನ್
ಏಜನ್ಸೀಸ್ ದುಬೈ
ಐದು ಬಾರಿ ಚಾಂಪಿಯನ್ ಹಾಗು ವಿಶ್ವ ಚಾಂಪಿಯನ್ ಶ್ರೀಲಂಕಾ ತಂಡ ಏಷ್ಯಾ ಕಪ್ ನಲ್ಲಿ ಸತತ ಎರಡು ಸೋಲುಂಡು ಚಾಂಪಿಯನ್ ಷಿಪ್ ನಿಂದ ನಿರ್ಗಮಿಸಿದೆ. ಆಫ್ಘಾನ್ ಪಡೆ ನೀಡಿದ 249 ರನ್ ಗುರಿ ತಲ್ಪುವಲ್ಲಿ ವಿಫಲವಾದ ಲಂಕಾ 158 ರನ್ ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಸೋಲಿಗೆ ಶರಣಾಯಿತು.
ಬಾಂಗ್ಲಾದೇಶ ವಿರುದ್ಧದ ಮೊದಲ ಪಂದ್ಯದಲ್ಲಿ ಲಂಕಾ ಪಡೆ 137 ರನ್ ಗಳ ಅಂತರದಲ್ಲಿ ಸೋಲನುಭವಿಸಿ ಆಘಾತ ಕಂಡಿತ್ತು.
ತಿಸಾರ ಪೆರೇರಾ 55 ರನ್ ಗೆ 5 ವಿಕೆಟ್ ಗಳಿಸಿದ್ದು ಪ್ರಯೋಜನಕ್ಕೆ ಬರಲಿಲ್ಲ. ಪಂದ್ಯ ಶ್ರೇಷ್ಠ ರಹಮತ್ ಶಾ 77 ರನ್ ಗಳಿಸಿ ಜಯದ ರೂವಾರಿ ಎನಿಸಿದರೂ.249 ರನ್ ಜಯದ ಗುರಿ ಹೊತ್ತ ಶ್ರೀಲಂಕಾ 41.2 ಓವರ್ ಗಳಲ್ಲಿ ಕೇವಲ 158 ರನ್ ಗಳಿಸಿ 91 ರನ್ ಅಂತರದಲ್ಲಿ ಸೋಲನುಭವಿಸಿ ನಿರ್ಗಮಿಸಿತು. ಶಿಸ್ತಿನ ಬೌಲಿಂಗ್ ಪ್ರದರ್ಶಿಸಿದ ಅಫಘಾನಿಸ್ತಾನ ಲಂಕೆಗೆ ಅನಿರೀಕ್ಷಿತ ಆಘಾತ ನೀಡಿತು.