Saturday, April 13, 2024

ಬೀಡು, ಕುಟ್ಟಪ್ಪಗೆ ದ್ರೋಣಾಚಾರ್ಯ ಗೌರವ

ಸ್ಪೋರ್ಟ್ಸ್ ಮೇಲ್ ವರದಿ 

ನೂರಾರು ಕ್ರೀಡಾಪಟುಗಳಿಗೆ ಬದುಕು ನೀಡಿದ ಕರ್ನಾಟಕದ ಅಥ್ಲೆಟಿಕ್ಸ್ ಕೋಚ್ ಬೀಡು ವಿಶ್ವನಾಥ್ ಹಾಗೂ ಬಾಕ್ಸಿಂಗ್ ಕೋಚ್ ಕೆ.ಸಿ. ಕುಟ್ಟಪ್ಪ ಅವರನ್ನು ಪ್ರಸಕ್ತ ಸಾಲಿನ ಪ್ರತಿಷ್ಠಿತ ದ್ರೋಣಾಚಾರ್ಯ ಗೌರವಕ್ಕೆ ಶಿಫಾರಸು ಮಾಡಲಾಗಿದೆ.

ಕಂಠೀರವ ಕ್ರೀಡಾಂಗಣದಲ್ಲೇ ತನ್ನ ಬದುಕಿನ ಹೆಚ್ಚಿನ ಅವಧಿಯನ್ನು ಕಳೆದ ಬೀಡು ಅವರಲ್ಲಿ ತರಬೇತಿ ಪಡೆಯದ ಅಥ್ಲೀಟ್‌ಗಳೇ ಇಲ್ಲ. ಕ್ರೀಡಾಂಗಣದಲ್ಲಿ ಏಡುವ ಮಕ್ಕಳನ್ನು ಕರೆದು ಅವರಿಗೆ ಸಲಹೆಗಳನ್ನು ನೀಡುವ ಬೀಡು ಎಲ್ಲರ ಮೆಚ್ಚಿನ ಅಥ್ಲೆಟಿಕ್ಸ್ ಗುರು. ಮೈಸೂರಿನಲ್ಲಿದ್ದುಕೊಂಡು ಅಂತಾರಾಷ್ಟ್ರೀಯ ಬಾಕ್ಸರ್‌ಗಳನ್ನು ಹಟ್ಟುಹಾಕಿದ ಕುಟ್ಟಪ್ಪ ಈಗಲೂ ಎಲೆ ಮರೆಯ ಕಾಯಿಯಂತೆ ಬಾಕ್ಸಿಂಗ್ ತರಬೇತಿ ನೀಡುತ್ತಿದ್ದಾರೆ.

ಅತ್ಯಂತ ಯುವ ದ್ರೋಣಾಚಾರ್ಯ

೩೪ನೇ ವರ್ಷದಲ್ಲಿ ದ್ರೋಣಾಚಾರ್ಯ ಗೌರವಕ್ಕೆ ಪಾತ್ರರಾದ ಆರ್ಚರಿ ಕೋಚ್ ಜೀವನ್‌ಜೋತ್ ಸಿಂಗ್ ತೇಜ್ ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಸಾಧಕ ಎನಿಸಿದ್ದಾರೆ. ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಅರ್ಪಿಂದರ್ ಸಿಂಗ್ ಅವರ ಕೋಚ್ ಎಸ್.ಎಸ್. ಪನ್ನು ಕೂಡ ದ್ರೋಣಾಚಾರ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಜೀವನಶ್ರೇಷ್ಠ ಸಾಧನೆ ಮಾಡಿದ ನಾಲ್ವರು ಕೋಚ್‌ಗಳಿಗೆ ದ್ರೋಣಾಚಾರ್ಯ ಗೌರವಕ್ಕೆ ಶಿಫಾರಸು ಮಾಡಲಾಗಿದೆ. ಕ್ಲಾರೆನ್ಸ್ ಲೋಬೋ (ಹಾಕಿ), ತಾರಕ್ ಸಿನ್ಹಾ (ಕ್ರಿಕೆಟ್), ಜೀವನ್ ಕಮಾರ್ ಶರ್ಮಾ (ಜೂಡೋ) ಮತ್ತು ವಿ.ಆರ್. ಬೀಡು (ಅಥ್ಲೆಟಿಕ್ಸ್).
ಮಾಜಿ ನ್ಯಾಯಮೂರ್ತಿ ಜಸ್ಟೀಸ್ ಮುಕುಲ್ ಮುದ್ಗಲ್ ಅವರ ಅಧ್ಯಕ್ಷತೆಯ ಸಮಿತಿಯು ಸಾ‘ಕರನ್ನು ಆಯ್ಕೆ ಮಾಡಿದೆ. ಸಮರೇಶ್ ಜಂಗ್, ಅಶ್ವಿನಿ ಪೊನ್ನಪ್ಪ, ಜಿಎಸ್. ಸಂಧೂ , ಎ.ಕೆ. ಬನ್ಸಾಲ್, ಸಂಜೀವ್ ಸಿಂಗ್, ಭಾರತೀಯ ಕ್ರೀಡಾ ಪ್ರಾಧಿಕಾರದ  ವಿಶೇಷ ನಿರ್ದೇಶಕ ಎ.ಕೆ. ಬನ್ಸಾಲ್, ಜಂಟಿ ಕಾರ್ಯದರ್ಶಿ ಇಂದರ್ ದಮೀಜಾ ಸಮಿತಿಯ ಇತರ ಸದಸ್ಯರು.

ದ್ರೋಣಾಚಾರ್ಯ ಗೌರವ

ಜೀವನ್‌ಜೋತ್ ಸಿಂಗ್ (ಆರ್ಚರಿ), ಎಸ್.ಎಸ್. ಪನ್ನು (ಅಥ್ಲೆಟಿಕ್ಸ್), ಸಿ.ಎ. ಕುಟ್ಟಪ್ಪ (ಬಾಕ್ಸಿಂಗ್), ವಿಜಯ ಶರ್ಮಾ (ವೇಟ್‌ಲಿಫ್ಟಿಂಗ್), ಶ್ರೀನಿವಾಸ್ ರಾವ್ (ಟೇಬಲ್ ಟೆನಿಸ್). 
ಜೀವನಶ್ರೇಷ್ಠ ಸಾಧನೆ
ಕ್ಲಾರೆನ್ಸ್ ಲೋಬೋ (ಹಾಕಿ), ತಾರಕ್ ಸಿನ್ಹಾ (ಕ್ರಿಕೆಟ್), ಜೀವನ್ ಕುಮಾರ್ ಶರ್ಮಾ (ಜೂಡೋ), ವಿ.ಆರ್. ಬೀಡು (ಅಥ್ಲೆಟಿಕ್ಸ್)
 ಧ್ಯಾನ್ಚಂದ್ ಗೌರವ
ಸತ್ಯದೇವ ಪ್ರಸಾದ್ (ಆರ್ಚರಿ), ಭರತ್ ಛೆಟ್ರಿ (ಹಾಕಿ), ಬಾಬಿ ಅಲೋಶಿಯಸ್ ಹಾಗೂ ಚೌಗುಲೆ ದಾದು ದತ್ತಾತ್ರೆಯ (ಕುಸ್ತಿ)

Related Articles