Saturday, February 24, 2024

ಕೆಜಿಎಫ್‌ ವೂಲ್ವ್ಸ್‌ಗೆ ಚೊಚ್ಚಲ ಗ್ರ್ಯಾಂಡ್‌ ಪ್ರಿಕ್ಸ್‌ ಬ್ಯಾಡ್ಮಿಂಟನ್‌ ಕಿರೀಟ

ಬೆಂಗಳೂರು: ಮಂಡ್ಯ ಬುಲ್ಸ್‌ ವಿರುದ್ಧ 7-2 ಅಂತರದಲ್ಲಿ ಜಯ ಗಳಿಸಿದ ಕೆಜಿಎಫ್‌ ವೂಲ್ವ್ಸ್‌ ತಂಡ ಬೆಂಗಳೂರಿನಲ್ಲಿ ಭಾನುವಾರ ರಾತ್ರಿ ಮುಕ್ತಾಯಗೊಂಡ ಮೊದಲ ಗ್ರ್ಯಾಂಡ್‌ ಪ್ರಿಕ್ಸ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ ಪಟ್ಟ ಗೆದ್ದುಕೊಂಡಿದೆ.

ಭಾರತದ ಶ್ರೇಷ್ಠ ಬ್ಯಾಡ್ಮಿಂಟ್‌ ತಾರೆ ಪಿ.ವಿ.ಸಿಂಧೂ ಫೈನಲ್‌ ಪಂದ್ಯವನ್ನು ವೀಕ್ಷಿಸುತ್ತಿದ್ದಂತೆ, ಮೊದಲ ಪಂದ್ಯದಲ್ಲಿ ಗ್ಲೋರಿಯಾ ವಿನಯ್‌ಕುಮಾರ್‌ ವನಿತೆಯರ ಸಿಂಗಲ್ಸ್‌ನಲ್ಲಿ ಅನನ್ಯ ಪ್ರವೀಣ್‌ ವಿರುದ್ಧ ಜಯ ಗಳಿಸಿ ಉತ್ತಮ ಆರಂಭ ನೀಡಿದರು. ಆಶಿತ್‌ ಸೂರ್ಯ ಮತ್ತು ಸಾಯಿ ಪ್ರತೀಕ್‌ ಜೋಡಿ ಹೇಮಂತ್‌ ಗೌಡ ಮತ್ತು ಪ್ರಕಾಶ್‌ ರಾಜ್‌ ವಿರುದ್ಧದ ಟ್ರಂಪ್‌ ಪಂದ್ಯದಲ್ಲಿ ಜಯ ಗಳಿಸಿ ಬುಲ್ಸ್‌ಗೆ 2-1ರ ಮುನ್ನಡೆ ನೀಡಿದರು. ಅನಿರುಧ್‌ ದೇಶಪಾಂಡೆ ವಿರುದ್ಧದ ಪಂದ್ಯದಲ್ಲಿ ನರೇನ್‌ ಎಸ್‌ ಅಯ್ಯರ್‌ ಜಯ ಗಳಿಸಿದರು. ನಂತರ ಸಹಾಸ್‌ ವಿ ಮತ್ತು ಅಮೃತ್‌ ಪಿ ಜೋಡಿ ಮಧುಸೂದನ್‌ ಮತ್ತು ರುತ್‌ಮಿಶಾ ಜೋಡಿಯ ವಿರುದ್ಧ ಜಯ ಗಳಿಸಿ ಅದ್ಭುತ ಮುನ್ನಡೆ ಕಲ್ಪಿಸಿದರು.

ಸೂಪರ್‌ ಮ್ಯಾಚ್‌ನಲ್ಲಿ ಹೇಮಂತ್‌, ಪ್ರಕಾಶ್‌ ಮತ್ತು ಸುಹಾಸ್‌ ಜಯ ಗಳಿಸಿದ ವೂಲ್ವ್ಸ್‌ ಚಾಂಪಿಯನ್‌ ಪಟ್ಟ ಗೆಲ್ಲುವ ಮೂಲಕ 24,000 ರೂ,ಗಳ ಬಹಮಾನ ತನ್ನದಾಗಿಸಿಕೊಂಡಿತು. ರನ್ನರ್‌ಅಪ್‌ ಪ್ರಶಸ್ತಿ ಗೆದ್ದ ಬುಲ್ಸ್‌ 12ಲಕ್ಷ ರೂ. ನಗದು ಬಹುಮಾನ ಗೆದ್ದಿತು. ಟೂರ್ನಿಯ ಶ್ರೇಷ್ಠ ಆಟಗಾರ ಗೌರವಕ್ಕೆ ಪಾತ್ರರಾದ ಹೇಮಂತ್‌ 25,000 ರೂ. ನಗದು ಬಹುಮಾನ ತಮ್ಮದಾಗಿಸಿಕೊಂಡರು.

ಫಲಿತಾಂಶ:

 KGF Wolves bt Mandya Bulls

WS: Gloria Vinayakumar bt Ananya Praveen15-11, 15-11 MD: Hemanth M Gowda / Prakash Raj lost to Ashith Surya / Sai Pratheek (Trump) 7-15, 15-11, 14-15; MS: Naren S Iyer bt Anirudh Deshpande 15-13, 15-3; MXD: Suhas V / Amrutha P bt Madhusudan M / Ruth Misha Vinod 15-8, 15-14 SM: Hemanth M Gowda / Prakash Raj / Suhas V (Trump) bt Ashith Surya / Sai Pratheek / Madhusudan M 21-15 

Player of the tie: Suhas V

Player of the tournament: Hemanth M Gowda

 

Related Articles