Saturday, October 5, 2024

ಗೆದ್ದು ಜೈ ಶ್ರೀ ಹನುಮಾನ್‌ ಎಂದ ಕೇಶವ ಮಹಾರಾಜ್‌!

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಬೌಂಡರಿ ಹೊಡೆದು ರೋಚಕ ಜಯ ತಂದಿತ್ತ ದಕ್ಷಿಣ ಆಫ್ರಿಕಾದ ಆಟಗಾರ ಕೇಶವ ಮಹಾರಾಜ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹನುಮಂತನ ದಯೆಯಿಂದ ಇದು ಯಶಸ್ವಿಯಾಯಿತು ಎಂಬ ರೀತಿಯಲ್ಲಿ ಪೋಸ್ಟ್‌ ಹಾಕಿದ್ದಾರೆ. Keshav Maharaj Chanted Jai Shree Hanuman after win against Pakistan.

ಕೇಶವ ಮಾಹರಾಜ್‌ ಅವರು ಜನಿಸಿದ್ದು ದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿ. ಆದರೆ ಅವರ ಹಿರಿಯರು 1874ರಲ್ಲೇ ಭಾರತವನ್ನು ತೊರೆದು ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿದ್ದರು. ಕೇಶವ್‌ ಮಹಾರಾಜ್‌ ದಕ್ಷಿಣ ಆಫ್ರಿಕಾದಲ್ಲಿ ಹುಟ್ಟಿ ಬೆಳೆದಿದ್ದರೂ ಭಾರತದ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಮೈಗೂಡಿಕೊಂಡು ಬೆಳೆದಿದ್ದಾರೆ. ದೇವರಲ್ಲಿ ಅಪಾರ ನಂಬಿಕೆ ಇಟ್ಟಿರುವ ಕೇಶವ ಮಹಾರಾಜ್‌ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ, “ನಾನು ದೇವರಲ್ಲಿ ನಂಬಿಕೆ ಇಟ್ಟವನು. “ನಮ್ಮ ಹಡುಗರು ವಿಶೇಷವಾದ ಜಯ ತಂದುಕೊಟ್ಟರು. ನಮ್ಮವಾರದ ಶಂಶಿ ಮತ್ತು ಮಾರ್ಕ್‌ರಾಮ್‌ ಅವರ ಪ್ರದರ್ಶನ ಅದ್ಭುತವಾಗಿತ್ತು.  ಜೈ ಶ್ರೀ ಹನುಮಾನ್‌,” ಎಂದು ಜಯದ ಬಗ್ಗೆ ಬರೆದಿದ್ದರು.

ಕೇಶವ್‌ ಮಹಾರಾಜ ಅವರ ತಂದೆ ಆತ್ಮಾನಂದ. ಕ್ಲಬ್‌ ಹಂತದ ಕ್ರಿಕೆಟಿಗ. ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿ ಇದ್ದ ಕಾರಣ ದೇಶೀಯ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪ್ರವೇಶ ಮಾಡಲಾಗಲಿಲ್ಲ. ಆತ್ಮಾನಂದ ಅವರ ತಂದೆಯದ್ದು ಇದೇ ಪರಿಸ್ಥಿತಿ. ಕೇಶವ ಮಹಾರಾಜ್‌ ಚಿಕ್ಕಂದಿನಲ್ಲಿ ಫುಟ್ಬಾಲ್‌ನಲ್ಲಿ ಆಸಕ್ತಿ ತೋರಿದ್ದರು. ನಂತರ ತಂದೆಯ ಆಸೆಯನ್ನು ಈಡೇರಿಸುವುದಕ್ಕಾಗಿ ಕ್ರಿಕೆಟ್‌ಗೆ ಕಾಲಿಟ್ಟರು. ಮೊದಲು ವೇಗದ ಬೌಲರ್‌ ಹಾಗೂ ಬ್ಯಾಟ್ಸ್‌ಮನ್‌ ಆಗಿದ್ದ ಕೇಶವ ಮಹಾರಾಜ್‌ ನಂತರ ಸ್ಪಿನ್‌ ಬೌಲಿಂಗ್‌ನಲ್ಲಿ ಆಸಕ್ತಿ ತೋರಿದರು. ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ ಕ್ರಿಕೆಟ್‌ಗೆ ಕಾಲಿಡುವ ಮೂಲಕ ತಂದೆಯ ಕನಸನ್ನು ನನಸಾಗಿಸಿದರು.

ಕೇಶವ ಮಹಾರಾಜ್‌ ಅವರ ತಂದೆ ಆತ್ಮಾನಂದ ಅವರಿಗೆ ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌, ಕಿರಣ್‌ ಮೋರೆ ಹಾಗೂ ಮೊಹಮ್ಮದ್‌ ಅಜರುದ್ದೀನ್‌ ಅವರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದಾರೆ. ಇದರಿಂದಾಗಿ ಮಗನಿಗೆ ಉತ್ತಮ ಸಂಸ್ಕಾರಗಳನ್ನು ಕಲಿಸಿದ್ದರು. ವಿಶ್ವಕಪ್‌ಗೆ ಆಗಮಿಸಿದ ಮೊದಲ ವಾರದಲ್ಲಿ ಕೇಶವ ಮಹಾರಾಜ್‌ ತಿರುವನಂತಪುರದಲ್ಲಿರುವ ಅನಂತಪದ್ಮನಾಭ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದಿದ್ದರು. ತಮ್ಮ ಬ್ಯಾಟ್‌ನಲ್ಲೂ ಓಂ ಚಿಹ್ನೆಯನ್ನು ಹಾಕಿಕೊಂಡು ಗಮನ ಸೆಳೆದಿದ್ದರು.

ಒಂದೇ ಪಂದ್ಯದಲ್ಲಿ 318 ರನ್‌ ನೀಡಿಕೆ!!

ಬಲಗೈ ಬ್ಯಾಟ್ಸ್‌ಮನ್‌ ಮತ್ತು ಎಡಗೈ ಸ್ಪಿನ್ನರ್‌ ಆಗಿರುವ ಕೇಶವ ಮಹಾರಾಜ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ದುಬಾರಿ ಬೌಲಿಂಗ್‌ನಲ್ಲಿ ಜಗತ್ತಿನಲ್ಲೇ ನಾಲ್ಕನೇ ಸ್ಥಾನದಲ್ಲಿದ್ದಾರೆ. 2019ರಲ್ಲಿ ವಿಶಾಖಪಟ್ಟಣದಲ್ಲಿ ನಡೆದ ಟೆಸ್ಟ್‌ ಚಾಂಪಿಯನ್‌ಷಿಪ್‌ ಪಂದ್ಯದಲ್ಲಿ ಕೇಶವ ಮಹಾರಾಜ್‌ 77 ಓವರ್‌ಗಳಲ್ಲಿ 318 ರನ್‌ ನೀಡಿ ಜಗತ್ತಿನ ನಾಲ್ಕನೇ ದುಬಾರಿ ಟೆಸ್ಟ್‌ ಬೌಲರ್‌ ಎನಿಸಿದರು. ಮೊದಲ ಇನ್ನಿಗ್ಸ್‌ನಲ್ಲಿ  55 ಓವರ್‌ಗಳಲ್ಲಿ 189 ರನ್‌ಗೆ 3 ವಿಕೆಟ್‌ ಗಳಿಸಿದ ಕೇಶವ ಮಹಾರಾಜ್‌ ಎರಡನೇ ಇನ್ನಿಂಗ್ಸ್‌ನಲ್ಲಿ 22 ಓವರ್‌ಗಳಲ್ಲಿ 129 ರನ್‌ಗೆ 2 ವಿಕೆಟ್‌ ಗಳಿಸಿದರು. ಟೆಸ್ಟ್‌ ಕ್ರಿಕೆಟ್‌ನ ಪಂದ್ಯವೊಂದರಲ್ಲೇ ನೀಡಿದ 318 ರನ್‌ ದುಬಾರಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

Related Articles