ಸೋಮಶೇಖರ್ ಪಡುಕರೆ ಬೆಂಗಳೂರು
ಅಮೆರಿಕಾದಲ್ಲಿ ಬದುಕು ಕಟ್ಟಿಕೊಂಡಿರುವ ಕರ್ನಾಟಕದ ಮಾಜಿ ಚೆಸ್ ಚಾಂಪಿಯನ್ ಮೈಸೂರಿನ ಕಾವ್ಯಶ್ರೀ ಮಲ್ಲಣ್ಣ ಕಳೆದ 20 ವರ್ಷಗಳಿಂದ ಅಲ್ಲಿಯ ಯುವಜನರಿಗೆ ಚೆಸ್ ತರಬೇತಿ ನೀಡುತ್ತಿರುವುದು ಮಾತ್ರವಲ್ಲ, ವಿಶೇಷ ಚೇತನ ಚೆಸ್ ಚಾಂಪಿಯನ್ನರಿಗೆ ನೆರವಾಗುತ್ತಿದ್ದಾರೆ.
ಎಂಜಿನಿಯರಿಂಗ್‌ನಲ್ಲಿ ಎಂಎಸ್ ಪದವಿ ಗಳಿಸಿರುವ ಕಾವ್ಯಶ್ರೀ ಇದುವರೆಗೂ ಅಮೆರಿಕದಲ್ಲಿ ಸಾವಿರಾರು ಮಕ್ಕಳಿಗೆ ಚೆಸ್ ತರಬೇತಿ ನೀಡಿ ಅಮೆರಿಕದ ಶ್ರೇಷ್ಠ ತರಬೇತುಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಚೆನ್ನೈನಲ್ಲಿ ನಡೆಯಲಿರುವ ಚೆಸ್ ಒಲಂಪಿಯಾಡ್‌ಗಾಗಿ ಆಗಮಿಸುತ್ತಿರುವ ಕಾವ್ಯಶ್ರೀ ಅವರು ತಮ್ಮ ಸೆಲೆಸ್ಟಿಯಲ್ ಮೈಂಡ್ಸ್ ಚೆಸ್ ಸಂಸ್ಥೆಯ ಮೂಲಕ ವಿಶೇಷ ಚೆಸ್ ಪಟುಗಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿದ್ದಾರೆ. ಅಂತಾರಾಷ್ಟ್ರೀಯ ಚೆಸ್ ಪದಕ ವಿಜೇತೆಯರಾದ ಕರ್ಗಿಸ್ತಾನ್‌ನ ಡಾರಿಯ ಕುಡೈನಜ಼ರೂವ ಹಾಗೂ ಕರ್ನಾಟಕದ ಬಂಟ್ವಾಳದ ಕಿವುಡ-ಮೂಗ ಚೆಸ್ ಪಟು ಕು. ಯಶಸ್ವಿ ಕುಡ್‌ಮಾನು ಅವರಿಗೆ ದೊರತಿದೆ. ಕರ್ನಾಟಕದ ಮಾಜಿ ಚೆಸ್ ಛಾಂಪಿಯನ್ ಶ್ರೀಮತಿ ಕಾವ್ಯಶ್ರೀ ಮಲ್ಲಣ್ಣನವರು ಅಮೆರಿಕದಲ್ಲಿ ನಡೆಸುತ್ತಿರುವ ಸೆಲೆಸ್ಟಿಯಲ್ ಮೈಂಡ್ಸ್ ಚೆಸ್ ಸಂಸ್ಥೆಯು ಪ್ರತಿವರ್ಷ ವಿಕಲಾಂಗ ಚೆಸ್ ಪಟುಗಳಿಗೆ ನೀಡುವ ಪ್ರತಿಭಾ ಪ್ರಶಸ್ತಿ ಹಾಗೂ ನಗದು ಪುರಸ್ಕಾರ ಈ ಸಾಲಿನಲ್ಲಿ ಅಂತಾರಾಷ್ಟ್ರೀಯ ಚೆಸ್ ಪದಕ ವಿಜೇತೆಯರಾದ ಕರ್ಗಿಸ್ತಾನ್‌ನ ಡಾರಿಯ ಕುಡೈನಜ಼ರೂವ ಹಾಗೂ ಕರ್ನಾಟಕದ ಬಂಟ್ವಾಳದ ಕಿವುಡ-ಮೂಗ ಚೆಸ್ ಪಟು ಕುಮಾರಿ ಯಶಸ್ವಿ ಕುಡ್‌ಮಾನು ಅವರಿಗೆ ದೊರತಿದೆ.
ಈ ಪ್ರಶಸ್ತಿಗೆ ಭಾಜನರಾಗಿರುವ ಕು.ಯಶಸ್ವಿಯವರು 2017, 18 ಹಾಗೂ 19 ರಲ್ಲಿ ಕಿವುಡ ಮೂಗರ ರಾಷ್ಟ್ರೀಯ ಚೆಸ್ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಅಲ್ಲದೆ World Blitz Chess Championship (England) ನಲ್ಲಿ ಕಂಚಿನ ಪದಕ ವಿಜೇತೆ.
2020-21ರ ಸಾಲಿನಲ್ಲಿ ಈ ಪ್ರತಿಭಾ ಪುರಸ್ಕಾರವನ್ನು ಉಗಾಂಡದ ವಾಸ್ವ ಷರೀಫ್, ಹಾಗೂ ಕರ್ನಾಟಕದ ಸಮರ್ಥ್ ರಾವ್ (ಹೊನ್ನಾವರ) ಅವರಿಗೆ ನೀಡಲಾಗಿತ್ತು. ಕರ್ನಾಟಕದ ಮೂಲದ ಈ ಸಂಸ್ಥೆ ಇನ್ನೂ ಎತ್ತರಕ್ಕೆ ಬೆಳೆಯಲೆಂದು ಮೈಸೂರು ಜಿಲ್ಲಾ ಚದುರಂಗ ಸಂಸ್ಥೆಯ ಕಾರ್ಯದರ್ಶಿ ಶ್ರೀ ನಾಗೇಂದ್ರ ರವರು ಹಾರೈಸಿದ್ದಾರೆ.
ಚೆಸ್‌ಗೆ ಬೆಂಬಲ ನೀಡಿದವರು:
ಅಮೆರಿಕದ ಮೆಸಾಚುಸೆಟ್ಸ್‌ನಲ್ಲಿರುವ ಡಾ. ಕಿರಣ್ ಸಿ.ಜೆ. ಈ ಪ್ರಶಸ್ತಿ ವಿಜೇತರಿಗೆ ಸ್ಕಾಲರ್‌ಷಿಪ್‌ನ ಪ್ರಾಯೋಜಕತ್ವ ನೀಡುತ್ತಿದ್ದು, ಚೆಸ್ ಪರಿಕರಗಳನ್ನು ಅಮೆರಿಕದ ನ್ಯೂಹ್ಯಾಂಷೈರ್‌ನಲ್ಲಿರುವ ಸ್ವಪ್ನ ತೆಲಪ್ರೊಲು ಮತ್ತು ಟೆಕ್ಸಾಸ್‌ನಲ್ಲಿರುವ ಕಿಶೋರ್ ತಿರವೀಧುಲಾ ಅವರು ನೀಡುತ್ತಿದ್ದಾರೆ. ಅದೇ ರೀತಿ ನ್ಯೂ ಹ್ಯಾಂಪ್‌ಷೈರ್ ಚೆಸ್ ಅಸೋಸಿಯೇಷನ್, ಇಂಡಿಯಾ ಅಸೋಸಿಯೇಷನ್ ಆಫ್ ಗರೇಟರ್ ಬೊಸ್ಟನ್, ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್, ಮೈಸೂರು ಚೆಸ್ ಸೆಂಟರ್, ಮೈಸೂರು ಪ್ರೊಫೆಷನಲ್ ಚೆಸ್ ಅಕಾಡೆಮಿ ಹಾಗೂ ಹಂಸಧ್ವನಿ ಸಾಂಸ್ಕೃತಿಕ ಟ್ರಸ್ಟ್ ನೆರವು ನೀಡುತ್ತಿದೆ.
ಕಾವ್ಯಶ್ರೀ ಸಾಧನೆ:
ಮೈಸೂರಿನ ಕರ್ನಾಟಕ ಕಲಾಶ್ರೀ ಪ್ರೊ. ಎಸ್. ಮಲ್ಲಣ್ಣ ಹಾಗೂ ಪ್ರೊ. ಪ್ರೇಮಲೀಲಾ ದಂಪತಿಯ ಹಿರಿಯ ಮಗಳಾದ ಕಾವ್ಯಶ್ರೀ ಮೊದಲು ತಾಯಿಯ ಹೆಸರಲ್ಲಿ ‘ಪ್ರೇಮಾ ಚೆಸ್ ತರಬೇತಿ ಕೇಂದ್ರ’ವನ್ನು ಸ್ಥಾಪಿಸಿದರು. ನಂತರ ‘ಸೆಲೆಸ್ಟಿಯಲ್ ಮೈಂಡ್ಸ್’ ಎನ್ನುವ ಸಂಸ್ಥೆಯನ್ನು ಸ್ಥಾಪಿಸಿದರು.
ಕೋಲ್ಟಿ ಚೆಸ್ ಕ್ಲಬ್ ನಡೆಸಿದ ಕ್ಯಾಲಿಫೋರ್ನಿಯಾ ಎಕ್ಸ್‌ಪರ್ಟ್ಸ್ ವಿಭಾಗದಲ್ಲಿ ಕಾವ್ಯಶ್ರೀ ಚಾಂಪಿಯನ್ ಪಟ್ಟ ಗೆದ್ದುಕೊಂಡಿದ್ದರು. ಮೆಸಾಚುಸ್ಸೆಟ್ಸ್ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ರನ್ನರ್‌ಅಪ್ ಗೌರವಕ್ಕೆ ಪಾತ್ರರಾಗಿದ್ದಾರೆ. ಲಾಸ್‌ವೇಗಸ್ ಇಂಟರ್‌ನ್ಯಾಷನಲ್ ಫೆಸ್ಟಿವಲ್ ಅಂಗವಾಗಿ ನಡೆದ ಚೆಸ್ ಟೂರ್ನಿಯಲ್ಲಿಯೂ ಕಾವ್ಯಶ್ರೀ ಉತ್ತಮ ಸಾಧನೆ ಮಾಡಿದ್ದಾರೆ.
ವಿಶ್ವ ಚೆಸ್ ಫೆಡರೇಷನ್(ಫಿಡೆ) ಕಾವ್ಯಶ್ರೀ ಅವರಿಗೆ ಅಂತಾರಾಷ್ಟ್ರೀಯ ಚೆಸ್ ಸಂಘಟಕಿ (ಇಂಟರ್‌ನ್ಯಾಷನಲ್ ಚೆಸ್ ಆರ್ಗನೈಸರ್) ಮಾನ್ಯತೆ ನೀಡಿದೆ. ಅಮೆರಿಕ ಚೆಸ್ ಸಂಸ್ಥೆಯ ಎಕ್ಸ್‌ಪರ್ಟ್ ರೇಟೆಡ್ ಚೆಸ್ ಆಟಗಾರ್ತಿ ಕೂಡ ಹೌದು. (2018 ರೇಟಿಂಗ್). ಅಲ್ಲದೆ ಅಮೆರಿಕಾ ಚೆಸ್ ಫೆಡರೇಷನ್‌ನ ಆರ್ಬಿಟರ್ ಕೂಡ ಆಗಿದ್ದಾರೆ.
ಸ್ವತಃ USCF expert rated player, FIDE International Organizer, ನ್ಯೂ ಹ್ಯಾಮ್‌ಶೈರ್ ನ ಅಗ್ರಶ್ರೇಯಾಂಕಿತ ಆಟಗಾರ್ತಿ ಹಾಗೂ ಚೆಸ್ ತರಬೇತಿದಾರರಾದ ಶ್ರೀಮತಿ ಕಾವ್ಯಶ್ರೀಯವರು ಜಗತ್ತಿನ ಇತರ ದೇಶಗಳಲ್ಲಿರುವ ಚೆಸ್ ಪ್ರತಿಭೆಗಳಿಗೆ ತಮ್ಮ ಸಂಸ್ಥೆಯ ಮುಖೇನ ಸಹಾಯಹಸ್ತ ನೀಡುತ್ತಿರುವುದು ಶ್ಲಾಘನೀಯ. ಮುಂದಿನ ವರ್ಷಕ್ಕೆ 20 ವರ್ಷ ಪೂರೈಸಲಿರುವ ಈ ಸಂಸ್ಥೆ ಆನ್‌ಲೈನ್ ನಲ್ಲಿಯೂ ಚೆಸ್ ತರಬೇತಿ ನೀಡುತ್ತಿದೆ. ಅಮೆರಿಕದ ಪತ್ರಿಕೆಗಳು ಮತ್ತು ಸುದ್ದಿ ಚಾನೆಲ್‌ಗಳಲ್ಲಿ ಕಾವ್ಯಶ್ರೀ ಅವರ ಸಾಧನೆ ಪ್ರಸಾರಗೊಂಡಿದೆ. 2106ರಲ್ಲಿ ಕಾವ್ಯಶ್ರೀ ಅವರಿಗೆ ವರ್ಷದ ಮಹಿಳೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ಕರ್ನಾಟಕದ ಕ್ರೀಡಾ ಸಾಧಕಿಯೊಬ್ಬರು ಅಮೆರಿದಕಲ್ಲಿ ಸಾಧನೆ ಮಾಡಿ ಕನ್ನಡ ನಾಡಿಗೆ ಕೀರ್ತಿ ತಂದಿರುವುದು ಹೆಮ್ಮೆಯ ಸಂಗತಿ.