ಖೇಲೋ ವಿಂಟರ್ ಗೇಮ್ಸ್: ರಾಜ್ಯಕ್ಕೆ ಚಿನ್ನ ತಂದ ಶ್ರೀವತ್ಸ
ಲೆಹ್: ಖೇಲೋ ಇಂಡಿಯಾ ಚಳಿಗಾಲದ ಕ್ರೀಡಾ ಕೂಟದಲ್ಲಿ ಕರ್ನಾಟಕದ ಶ್ರೀವತ್ಸ ರಾವ್ ಮೊದಲ ಚಿನ್ನ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. Karnataka’s 18-year-old Srivatsa S Rao stunned the field as he raced away to men’s gold in the 1000m long track ice skating event
18 ವರ್ಷದ ಶ್ರೀವತ್ಸ ಎಸ್ ರಾವ್ ಪುರುಷರ 1000 ಮೀ ಟ್ರ್ಯಾಕ್ ಐಸ್ ಸ್ಕೇಟಿಂಗ್ನಲ್ಲಿ ಅಗ್ರ ಸ್ಥಾನ ಪಡೆದು ಎಲ್ಲರನ್ನು ನಿಬ್ಬೆರಗುಗೊಳಿಸಿದ್ದಾರೆ. ಪ್ರಸಕ್ತ ಸಾಲಿನ ಕ್ರೀಡಾಕೂಟದಲ್ಲಿ ಇದು ಕರ್ನಾಟಕದ ಪಾಲಿಗೆ ಮೊದಲ ಚಿನ್ನವಾಗಿತ್ತು. 2024ರಲ್ಲಿ ಇದೇ ವಿಭಾಗದಲ್ಲಿ ಕಿರಿಯರ ವಿಭಾಗದಲ್ಲಿ ಚಿನ್ನ ಗೆದ್ದಿದ್ದ ಶ್ರೀವತ್ಸ 1:36.64 ಅವಧಿಯಲ್ಲಿ ಗುರಿ ತಲುಪಿ ಚಾಂಪಿಯನ್ ಪಟ್ಟ ಗೆದ್ದುಕೊಂಡರು. ಮಹಾರಾಷ್ಟ್ರ ಮತ್ತು ತಮಿಳುನಾಡಿನ ಸ್ಪರ್ಧಿಗಳು ಅನುಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದರು.

