ಬೆಣ್ಣೆ ನಗರಿಯ ಚಿನ್ನದ ಗಣಿ, ಕರುನಾಡ ಮಣಿ
ರಾಯ್ಪುರ: ಖೇಲೋ ಇಂಡಿಯಾ ಟ್ರೈಬಲ್ ಗೇಮ್ಸ್‌ನ ಮೂರನೇ ದಿನದಂತ್ಯಕ್ಕೆ ಕರ್ನಾಟಕ ಪದಕಗಳ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿಸಿದರು. ಸತತ ಮೂರನೇ ದಿನದಲ್ಲೂ ಕರ್ನಾಟಕ ಪದಕಗಳ ಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದೆ. ಕರ್ನಾಕಟ 13 ಚಿನ್ನದ ಪದಕ ಗೆದ್ದಿದ್ದು ಅದರಲ್ಲಿ ದಾವಣಗೆರೆಯ ಮಣಿಕಂಠ ಒಬ್ಬರೇ 8 ಪದಕಗಳನ್ನು ಗೆದ್ದಿರುವುದು ವಿಶೇಷ. Karnataka continues to top the medal tally for the third consecutive day. Karnataka won 13 gold medals, with Manikanta of Davangere alone winning 8 medals.
ವೇಟ್‌ಲಿಫ್ಟಿಂಗ್‌ನಲ್ಲಿ ಒಂದು ಬೆಳ್ಳಿಯನ್ನು ಹೊರತುಪಡಿಸಿದರೆ ಕರ್ನಾಟಕ ಎಲ್ಲ ಪದಗಳನ್ನು ಗೆದ್ದಿರುವುದು ಈಜಿನಲ್ಲಿ 13 ಚಿನ್ನ, 5 ಬೆಳ್ಳಿ 1 ಕಂಚಿನ ಪದಕ ಗೆದ್ದು ಕರ್ನಾಟಕ ದಾಖಲೆ ಬರೆದಿದೆ.

ಬೆಂಗಳೂರಿನ ಜೈನ್ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿರುವ ಮಣಿಕಂಠ ಲಕ್ಷ್ಮಣ್ ಭಾರತದ ಈಜಿನಲ್ಲಿ ಹೊಸ ತಾರೆಯಾಗಿ ಮೂಡಿ ಬಂದಿದ್ದಾರೆ. ಈಜಿನಲ್ಲಿ ಇನ್ನೂ ಒಂದು ದಿನ ಬಾಕಿ ಇದ್ದು, ಮಣಿಕಂಠ ಮತ್ತಷ್ಟು ಚಿನ್ನ ಗೆಲ್ಲುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ sportsmail ಜೊತೆ ಮಾತನಾಡಿದ ಮಣಿಕಂಠ, “ಕಠಿಣ ಪರಿಶ್ರಮ ಫಲ ನೀಡಿದೆ. ಕೊರೋನಾ ಸಂದರ್ಭದಲ್ಲಿ ನಾವು ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ. ಈಜಿನಿಂದ ದೂರ ಸರಿಯುವ ತೀರ್ಮನಾ ಆಗಿತ್ತು. ಆದರೆ ನಮ್ಮ ತಂದೆ ಮುತುವರ್ಜಿ ವಹಿಸಿ ದಾವಣಗೆರೆಯಲ್ಲಿ ಒಂದು ಈಜುಕೊಳವನ್ನೇ ನಿರ್ವಹಣೆಗೆ ತೆಗೆದುಕೊಂಡು ನಿರತಂತರ ಅಭ್ಯಾಸಕ್ಕೆ ಅನುವುಮೊಡಿಕೊಟ್ಟರು. ಜೈನ್ ಕಾಲೇಜಿನಲ್ಲೂ ಉತ್ತಮ ಪ್ರೋತ್ಸಾಹ ಸಿಕ್ಕಿದೆ.” ಎಂದು ಮಣಿಕಂಠ ಹೇಳಿದರು,
“ಕಳೆದ 14 ವರ್ಷಗಳಿಂದ ಈಜಿನಲ್ಲಿ ತೊಡಗಿಸಿಕೊಂಡಿರುವೆ. ಕಳೆದ 1೦ ವರ್ಷಗಳಿಂದ ಸ್ಪರ್ಧೆಯಲ್ಲಿದ್ದೇವೆ. ಹಲವಾರು ಪದಕಗಳನ್ನು ಗೆದ್ದಿರುವೆ. ಖೇಲೋ ಇಂಡಿಯಾದಲ್ಲಿ ಈ ಹಿಂದೆಯೂ ಪದಕ ಗೆದ್ದಿರುವೆ. ಜೈನ್ ಕಾಲೇಜಿನಲ್ಲಿ ಕ್ರೀಡೆ ಹಾಗೂ ಶಿಕ್ಷಣ ಎರಡಕ್ಕೂ ಉತ್ತಮ ಪ್ರೋತ್ಸಾಹ ನೀಡುತ್ತಿರುವುದೇ ಈ ಸಾಧನೆಗೆ ಮುಖ್ಯ ಕಾರಣ. ಒಲಿಂಪಿಯನ್ ಗಗನ್ ಉಳ್ಳಾಲ್‌ಮಠ್ ಸರ್ ನಮ್ಮ ಯಶಸ್ಸಿನ ರೂವಾರಿ,” ಎಂದರು.
ಚಿಕ್ಕಪ್ಪನ ಸಾಧನೆ ಸ್ಪೂರ್ತಿಯಾಯಿತು: ಮಣಿಕಂಠ ಅವರ ಈಜಿನ ಸಾಧನೆಗೆ ಸ್ಪೂರ್ತಿಯಾದದ್ದ ಅವರ ಚಿಕ್ಕಪ್ಪ ಮಂಜುನಾಥ್. ಅವರ ಕೂಡ ಈಜಿನಲ್ಲಿ ಬಹಳಷ್ಟು ಸಾಧನೆ ಮಾಡಿದವರು. ರಾಷ್ಟ್ರೀಯ ಈಜಿನಲ್ಲಿ ಪಾಲ್ಗೊಂಡವರು. ಇದರಿಂದ ಮಣಿಕಂಠ ಇತರ ಕ್ರೀಡೆಯ ಕಡೆಗೆ ಹೆಚ್ಚು ಒಲವು ತೋರದೆ ಈಜಿನಲ್ಲೇ ಮುಂದುವರಿದರು. ವಿಶ್ವ ಯೂನಿವರ್ಸಿಟಿ ಗೇಮ್ಸ್‌ನಲ್ಲೂ ಮಣಿಕಂಠ ಭಾರತವನ್ನು ಪ್ರತಿನಿಧಿಸಿದ್ದರು. ಚಿಕ್ಕಪ್ಪನ ಜೊತೆಯಲ್ಲಿ ಈಜು ನೋಡಲು ಹೋಗುತ್ತಿದ್ದ ಮಣಿಕಂಠಗೆ ಈಜಿನಲ್ಲಿ ವ್ಯಾಮೋಹ ಹುಟ್ಟಿತು. ತಾಯಿ ಹೇಮಾವತಿ ಕೂಡ ಮಗನ ಈಜಿಗೆ ಪ್ರೋತ್ಸಾಹ ನೀಡಿದರು.

“ಖೇಲೋ ಇಂಡಿಯಾ ಟ್ರೈಬಲ್ ಗೇಮ್ಸ್ ಒಂದು ಉತ್ತಮ ವೇದಿಕೆ. ನನ್ನಲ್ಲಿ ಈಗಾಗಲೇ 15-20 ಖೇಲೋ ಇಂಡಿಯಾ ಚಿನ್ನದ ಪದಕಗಳಿವೆ. ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲೂ ಪಾಲ್ಗೊಂಡಿರುವೆ. ಭಾರತದಲ್ಲಿ ಕ್ರೀಡೆ ಉತ್ತಮ ಪ್ರೋತ್ಸಾಹ ಸಿಗುತ್ತಿದೆ. ಮತ್ತೊಮ್ಮೆ ಕಾಮನ್‌ವೆಲ್ತ್ ಕ್ರೀಡಾಕೂಟದ ಆತಿಥ್ಯವಹಿಸಲು ಭಾರತ ಸಜ್ಜಾಗಿದೆ. ಈ ನಡುವೆ ವಿವಿಧ ಹಂತದ ಸ್ಪರ್ಧೆಗಳು ನಡೆಯುತ್ತಿವೆ. ಇದರಿಂದ ಪ್ರತಿಭಾವಂತ ಕ್ರೀಡಾಪಟುಗಳಿಗೆ ಉತ್ತಮ ವೇದಿಕೆ ಸಿಗುತ್ತಿದೆ,” ಎಂದರು.
ಮಗನ ಈಜಿಗಾಗಿ ಈಜುಕೊಳವನ್ನೇ ನಿರ್ವಹಣೆ ಮಾಡಿದ ಲಕ್ಷ್ಮಣ್: ಮಣಿಕಂಠನಲ್ಲಿ ಈಜಿನ ಬಗ್ಗೆ ಇರುವ ಆಸಕ್ತಿಯನ್ನು ಗಮನಿಸಿದ ಲಕ್ಷ್ಮಣ್ ಅವರು, ಧನವ್ ಎಂಬ ಈಜು ತರಬೇತಿ ಕೇಂದ್ರವನ್ನು ನಿರ್ವಹಣೆ ಮಾಡುತ್ತಿದ್ದರು. ಕೇರದ ಕೋಚ್ ಸ್ಯಾನ್‌ಜೋ ಅವರು ತರಬೇತಿ ನೀಡುತ್ತಿದ್ದರು. ಸರಕಾರದ ಈಜುಕೊಳವನ್ನು ನಿರ್ವಹಣೆ ಮಾಡುತ್ತ ಮಗನ ಈಜು ಸಾಧನೆಗೆ ಲಕ್ಷ್ಮಣ್ ಅವರು ಶ್ರಮಿಸಿದ್ದು ವಿಶೇಷ. ಇದೆಲ್ಲದರ ಪರಿಣಾಮ ಇಂದು ಮಣಿಕಂಠ ಈಜುಕೊಳದಲ್ಲಿ ಚಿನ್ನದ ಮೀನಾಗಿ ಸಾಧನೆ ಮಾಡುತ್ತಿದ್ದಾರೆ.

ಸದ್ಯ ಬೆಂಗಳೂರಿನ ಬಸವನಗುಡಿ ಈಜುಕೊಳದಲ್ಲಿ ತರಬೇತಿ ಪಡೆಯುತ್ತಿರುವ ಮಣಿಕಂಠಗೆ ಕೋಚ್ ರಾಜೇಶ್ ಅವರು ತರಬೇತಿ ನೀಡುತ್ತಿದ್ದಾರೆ.

