Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಡಾ. ಕಾರ್ತಿಕ್‌ ಕರ್ಕೇರ… ಯಾರು ಈ ಚಿನ್ನದ ಓಟಗಾರ?

ಉಡುಪಿ:  ಅವರು ವೃತ್ತಿಯಲ್ಲಿ ಡಾಕ್ಟರ್‌, ವಿಶೇಷವಾಗಿ ಮೂಳೆ ತಜ್ಞರು. ಆದರೆ ದಿನದ ಒಂದಿಷ್ಟು ಸಮಯವನ್ನು ಓಟಕ್ಕಾಗಿಯೇ ಮೀಸಲಿಟ್ಟಿದ್ದಾರೆ. ಅವರು ಊಟವಿಲ್ಲದೆ ದಿನಗಳ ಕಳೆಯಬಲ್ಲರು, ಆದರೆ ಓಟವಿಲ್ಲದೆ ದಿನ ಸಾಗದು. ಓಟ ಅವರಿಗೆ ಬದುಕು ನೀಡಿದೆ. ಓಟ ಬದುಕಿಗೆ ಪಾಠ ಕಲಿಸಿದೆ. ಓಟದ ಮೂಲಕ ಒಲಿಂಪಿಕ್ಸ್‌ ತಲುಪಬೇಕು, ದೇಶವನ್ನು ಪ್ರತಿನಿಧಿಸಬೇಕು, ಆದಕ್ಕಾಗಿಯೇ ದೊಡ್ಡ ಆಸ್ಪತ್ರೆಗಳಿಗೆ ಸೇರಿಕೊಳ್ಳದೆ, ಹೆಚ್ಚಿನ ಶಸ್ತ್ರಚಿಕಿತ್ಸೆಗಳಿಗೆ ಆತುಕೊಳ್ಳದೆ, ಓಟಕ್ಕೆ ಹೆಚ್ಚಿನ ಸಮಯವನ್ನು ಮೀಸಲಿಡಲು ತೀರ್ಮನಿಸಿದ್ದಾರೆ. ಇಂಥ ವಿಶೇಷ ಗುಣದ ಡಾಕ್ಟರ್‌ ಬಗ್ಗೆ ಕೇಳಿದಾಗ ಎಲ್ಲರಿಗೂ ಅಚ್ಚರಿಯಾಗುವುದು ಸಹಜ. ನಿಜ ಭಾನುವಾರ ಮುಂಬಯಿಯಲ್ಲಿ ನಡೆದ ಟಾಟಾ ಮುಂಬಯಿ ಮ್ಯಾರಥಾನ್‌ನಲ್ಲಿ ಭಾರತಕ್ಕೆ ಚಿನ್ನ ತಂದುಕೊಟ್ಟ ಚಾಂಪಿಯನ್‌ ಓಟಗಾರ, ಮೂಳೆ ತಜ್ಞ ಡಾ. ಕಾರ್ತಿಕ್‌ ಕರ್ಕೇರ ಅವರ ಸಾಧನೆ ಇತರರಿಗೆ ಮಾದರಿ. Kannadigas are proud to say that Dr. Kartik Karkera, the runner who won the gold medal in the Mumbai Marathon, is from Mangalore origin.

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೋಳದವರು. ಮುಂಬಯಿಯ ಬೋರಿವಲಿಯಲ್ಲಿ ವಾಸ. ಮಹಾರಾಷ್ಟ್ರದ ಪರ 1500 ಮೀ. ಓಟದಲ್ಲಿ ದಾಖಲೆ ಬರೆದು ಚಿನ್ನ ಗೆದ್ದ ಅಥ್ಲೀಟ್‌. ಲಾಂಗ್‌ ಡಿಸ್ಟೆನ್ಸ್‌ ಓಟವೆಂದರೆ ಡಾ, ಕಾರ್ತಿಕ್‌ಗೆ ಅಚ್ಚುಮೆಚ್ಚು. ಕಳೆದ ವರ್ಷ ಡೆಲ್ಲಿ ಮ್ಯಾರಥಾನ್‌ನಲ್ಲಿಯೂ ಕಂಚಿನ ಪದಕ ಗೆದ್ದು ವೃತ್ತಿಪರ ಓಟಗಾರರಿಗೆ ಅಚ್ಚರಿ ಉಂಟು ಮಾಡಿದ್ದರು. ಓಟದ ಅಭ್ಯಾಸಕ್ಕಾಗಿಯೇ ಮುಂಬಯಿ ತೊರೆದು ದೂರದ ಸಾಸಿಕ್‌ನಲ್ಲಿರು ಆಸ್ಪತ್ರೆಯಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಮುಂಬಯಿ ಮ್ಯಾರಥಾನ್‌ನಲ್ಲಿ ಭಾರತದ ಎಲೈಟ್‌ ವಿಭಾಗದಲ್ಲಿ ಚಿನ್ನ ಗೆದ್ದ ನಂತರ ಡಾ. ಕಾರ್ತಿಕ್‌ ಕರ್ಕೇರ www.sportsmmail.net  ಜೊತೆ ಮಾತನಾಡಿ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಓಟವೆಂದರೆ ಇಷ್ಟ: ಡಾ. ಕಾರ್ತಿಕ್‌ ಅವರಿಗೆ ಓಟವೆಂದರೆ ಇಷ್ಟ. ಎಂಬಿಎಎಸ್‌ ಓದುತ್ತಿರುವಾಗಲೂ ಅವರು ಓಟವನ್ನು ನಿಲ್ಲಿಸಲಿಲ್ಲ. ಡಾಕ್ಟರ್‌ ವೃತ್ತಿಯನ್ನು ಆರಂಭಿಸಿದ ಮೇಲೂ ಓಡುವ ಅಭ್ಯಾಸವನ್ನು ನಿಲ್ಲಿಸಲಿಲ್ಲ. ಓಟವನ್ನು ತಮ್ಮ ಬದುಕಿನ ನಿತ್ಯದ ಕರ್ತವ್ಯವನ್ನಾಗಿಸಿಕೊಂಡು ಯಶಸ್ಸಿನ ಹಾದಿಯಲ್ಲಿ ಡಾ. ಕಾರ್ತಿಕ್‌ ಸಾಗಿದ್ದಾರೆ.

ಹೆತ್ತವರ ಪ್ರೋತ್ಸಾಹ:  ಡಾ ಕಾರ್ತಿಕ್‌ ಅವರ ಯಶಸ್ಸಿನ ಹಿಂದೆ ಅವರ ತಂದೆ ತಾಯಿಯ ಪ್ರೋತ್ಸಾಹ ಅಪಾರ. ಚಾಂಪಿಯನ್‌ ಓಟಗಾರನ ಬಗ್ಗೆ ಅವರಿಗೆ ಬಂಬಿಕೆ ಇದ್ದ ಕಾರಣ ಎಂಬಿಬಿಎಸ್‌ ಮಾಡುವಾಗಲೂ ಪ್ರೋತ್ಸಾಹ ಮುಂದುವರಿಸಿದ್ದರು.ತಂದೆ  ಜಯರಾಜ್‌ ಕರ್ಕೇರ ಹಾಗೂ ತಾಯಿ ಸುಗುಣ ಅವರು ಡಾ, ಕಾರ್ತಿಕ್‌ ಅವರ ಯಶಸ್ಸಿನ ಆಧಾರ ಸ್ತಂಭ, ಅದೇ ರೀತಿ ಸಹೋದರ ತ್ರಿಶೂಲ್‌ ಕರ್ಕೇರ ತಮ್ಮನ ಕ್ರೀಡಾ ಬದುಕಿಗೆ ನೆರವಾಗಿದ್ದಾರೆ.

ಹೊರ ರೋಗ ವಿಭಾಗಕ್ಕೆ ಹೆಚ್ಚಿನ ಆದ್ಯತೆ: ಡಾ. ಕಾರ್ತಿಕ್‌ ಮೂಳೆ ತಜ್ಞರು. ದೊಡ್ಡ ಆಸ್ಪತ್ರೆಗಳಲ್ಲಿ ಹೆಚ್ಚು ಆಪರೇಷನ್‌ ಕೆಲಸಗಳಿರುತ್ತವೆ, ಇಂಥ ಸಂದರ್ಭದಲ್ಲಿ ಮ್ಯಾರಥಾನ್‌ ಹಾಗೂ ಉದ್ಯೋಗ ಹೇಗೆ ಸರಿದೂಗಿಸುತ್ತೀರಿ ಎಂದು ಕೇಳಿದಾಗ, “ಸದ್ಯ ನನ್ನ ಗುರಿ ಏಷ್ಯನ್‌ ಗೇಮ್ಸ್‌ಗೆ ಅರ್ಹತೆ ಪಡೆಯವುದು, ಅದಕ್ಕೆ ಅರ್ಹತೆ ಡೆಲ್ಲಿ ಮ್ಯಾರಥಾನ್‌, ಅಲ್ಲಿ ಯಶಸ್ಸಿನೊಂದಿಗೆ ಸಮಯ ಕಾಯ್ದುಕೊಂಡರೆ ಏಷ್ಯನ್‌ ಗೇಮ್ಸ್‌ಗೆ ಅರ್ಯತೆ ಪಡೆಯುವೆ, ಅದಕ್ಕಾಗಿ ಹೆಚ್ಚು OPD ಗಳಲ್ಲೇ ಕಾರ್ಯ ನಿರ್ವಹಿಸುವೆ. ನಂತರ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗುರಿ ಹೊಂದಿರುವೆ, ಅದಕ್ಕಾಗಿ ಉದ್ಯೋಗದ ಕಡೆಗೆ ಸದ್ಯದ ಮಟ್ಟಿಗೆ ಹೆಚ್ಚು ಗಮನ ಹರಿಸಲಾಗದು,” ಎಂದಿದ್ದಾರೆ.

ವೃತ್ತಿಯಲ್ಲಿ ಡಾಕ್ಟರ್‌ ಆಗಿದ್ದರೂ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಮುಂದುವರಿಯುತ್ತಿರುವ ಡಾ. ಕಾರ್ತಿಕ್‌ ಅವರ ಸಾಧನೆ ನಿಜವಾಗಿಯೂ ಯುವ ಕ್ರೀಡಾಪಟುಗಳಿಗೆ ಮಾದರಿ.


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.