Thursday, October 10, 2024

ಜಾಂಬಿಯಾ ವಿರುದ್ಧ ಭಾರತದ ಅಂತಾರಾಷ್ಟ್ರೀಯ ಫುಟ್ಬಾಲ್‌ ಪಂದ್ಯ

ಹೊಸದಿಲ್ಲಿ: ಮೇ 25ರಂದು ಭಾರತ ಫುಟ್ಬಾಲ್‌ ತಂಡವು ಉನ್ನತ ರಾಂಕ್‌ ಹೊಂದಿರುವ ಜಾಂಬಿಯಾ ವಿರುದ್ಧ ಅಂತಾರಾಷ್ಟ್ರೀಯ ಸೌಹಾರ್ಧ ಪಂದ್ಯವನ್ನಾಡಲಿದೆ ಎಂದು ಫೆಡರೇಷನ್‌ ತಿಳಿಸಿದೆ.

ಕೋಲ್ಕೊತಾದಲ್ಲಿ ಜೂನ್‌ 8ರಂದು ನಡೆಯಲಿರುವ ಎಎಫ್‌ಸಿ ಏಷ್ಯನ್‌ ಕಪ್‌ ಕ್ವಾಲಿಫಯರ್‌ ಫೈನಲ್‌ ಸುತ್ತಿನ ಪಂದ್ಯದ ಸಿದ್ಧತೆಯ ಭಾಗವಾಗಿ ಭಾರತ ಈ ಪಂದ್ಯವನ್ನು ಆಡಲಿದೆ.

ಫಿಫಾ ರಾಂಕಿಂಗ್‌ನಲ್ಲಿ ಜಾಂಬಿಯಾ 87ನೇ ರಾಂಕ್‌ ಹೊಂದಿದ್ದು, ಭಾರತ 106ನೇ ರಾಂಕ್‌ನಲ್ಲಿದೆ.

“ಮೇ 25ರಂದು ಬ್ಲೂ ಟೈಗರ್ಸ್‌ ಖ್ಯಾತಿಯ ಭಾರತ ತಂಡ ಜಾಂಬಿಯಾ ವಿರುದ್ಧ ದೋಹಾದಲ್ಲಿ ಸೌಹಾರ್ಧ ಪಂದ್ಯವನ್ನು ಆಡಲಿದೆ,” ಎಂದು ಅಖಲಿ ಭಾರತ ಫುಟ್ಬಾಲ್‌ ಫೆಡರೇಷನ್‌ ಖಚಿತಪಡಿಸಿದದೆ. ಮಾರ್ಚ್‌ನಲ್ಲಿ ಭಾರತ ತಂಡ ಬಹೆರಿನ್‌ ಮತ್ತು ಬೆಲಾರೂಸ್‌ ವಿರುದ್ಧ ಬಹೆರಿನ್‌ನಲ್ಲಿ ಸೌಹಾರ್ಧ ಪಂದ್ಯವನ್ನಾಡಿತ್ತು.

ಏಪ್ರಿಲ್‌ 23ರಿಂದ ಬಳ್ಳಾರಿ ಮತ್ತು ಕೋಲ್ಕೊತಾದಲ್ಲಿ ಅಭ್ಯಾಸ ನಡೆಸುತ್ತಿರುವ ಭಾರತ ತಂಡ,  ಐ ಲೀಗ್‌ನ ಆಲ್‌ ಸ್ಟಾರ್‌ ಇಲೆವೆಲ್‌ ಮತ್ತು ಬಂಗಾಳದ ಸಂತೋಷ್‌ ಟ್ರೋಫಿ ತಂಡದ ವಿರುದ್ಧ ಅಭ್ಯಾಸ ಪಂದ್ಯವನ್ನಾಡಲಿದೆ. ಮೇ 11ರಂದು ಎಟಿಕೆ ಮೋಹನ್‌ ಬಾಗನ್‌ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ತಂಡ 1-2 ಗೋಲುಗಳ ಅಂತರದಲ್ಲಿ ಸೋಲನುಭವಿಸಿತ್ತು.

ಏಷ್ಯನ್‌ ಕಪ್‌ ಕ್ವಾಲಿಫಯರ್‌ ಅಂತಿಮ ಸುತ್ತಿನ ಪಂದ್ಯಗಳು ಜೂನ್‌ 8, 11 ಮತ್ತು 14ರಂದು ನಡೆಯಲಿದ್ದು, ಗ್ರೂಪ್‌ನಲ್ಲಿ ವಿಜೇತ ತಂಡ ಹಾಗೂ ಎರಡನೇ ಸ್ಥಾನ ಪಡೆದ ಉತ್ತಮ ಐದು ತಂಡಗಳು ಚೀನಾದಲ್ಲಿ ನಡೆಯಲಿರುವ ಟೂರ್ನಿಗೆ ಅರ್ಹತೆ ಪಡೆಯಲಿವೆ.

Related Articles