Thursday, September 12, 2024

ದ್ವೇಷದೊಂದಿಗೆ ಪ್ರೀತಿ ಬೆಸೆದು ಸಾಗುವ ಐ ಎಸ್ ಎಲ್

ಸ್ಪೋರ್ಟ್ಸ್ ಮೇಲ್ ವರದಿ 

ಆ ತಂಡಗಳಿಗೆ ಅತ್ಯಂತ ಭಾವೋದ್ವೇಗದಿಂದ ಕೂಡಿದ ಪ್ರೇಕ್ಷಕರಿದ್ದಾರೆ, ಅದೇ ರೀತಿ ನಿರೀಕ್ಷೆಯಂತೆ  ಭಾವೋದ್ವೇಗದಿಂದ ಕೂಡಿದ ವೈರತ್ವವನ್ನೂ ಅವರು ಸಂಭ್ರಮಿಸುತ್ತಾರೆ. ಹೀರೊ ಇಂಡಿಯನ್ ಸೂಪರ್ ಲೀಗ್ ಹಿಂದೆಯೂ ಸಾಕಷ್ಟು ವೈರತ್ವದಿಂದ ಕೂಡಿದ ತಂಡಗಳನ್ನು ಕಂಡಿತ್ತು. ಎಫ್ ಸಿ ಗೋವಾ ಹಾಗೂ ಎ ಟಿ ಕೆ, ಮುಂಬೈ ಎದುರಾಳಿ ಗೋವಾ, ಕೇರಳ ಹಾಗೂ ಚೆನ್ನೈ ಪ್ರಮುಖ. ಹಾಗೆ ಹೊಲಿಕೆ ಮಾಡುವುದಾದರೆ ಕಳೆದ ಋತುವಿನಲ್ಲಿ ಬೆಂಗಳೂರು ಎಫ್ ಸಿ ಹಾಗೂ ಕೇರಳ ಬ್ಲಾಸ್ಟರ್ಸ್ ತಂಡ ಹಂಚಿಕೊಂಡಿರುವ ಭಾವೋದ್ವೇಗದಲ್ಲೋ ಪ್ರೀತಿ ಹಾಗೂ ವಿರೋಧ ಇದೆ.

 

ಬೆಂಗಳೂರು ಎಫ್ ಸಿ ತಂಡ ಕಳೆದ ಬಾರಿ ಐ ಎಸ್ ಎಲ್ ನಲ್ಲಿ ಕನಸು ನನಸಾದ ಕ್ಷಣವನ್ನು ಕಂಡಿತ್ತು. ಆ ತಂಡ ಫೈನಲ್ ನಲ್ಲಿ ಸೋತಿರುವುದನ್ನು ಮರೆತು ಬಿಡೋಣ. ಆ ತಂಡ ಅದ್ಭುತವಾದ ಅಭಿಮಾನಿಗಳ ದಂಡನ್ನೇ ಹೊಂದಿತ್ತು.ವೆಸ್ಟ್ ಬ್ಲಾಕ್ ಬ್ಲೂಸ್ ಹಾಗೂ ಕೇರಳದ ಮಂಜಪ್ಪಾಡ ಪಡೆ ಗಮನಾರ್ಹವಾದುದು.

ಋತು ಆರಂಭ ಆಗುವುದಕ್ಕೆ ಮೊದಲೇ ವೈರತ್ವ ಆರಂಭಗೊಂಡಿತ್ತು. ಕಂಠೀರವ ಕ್ರೀಡಾಂಗಣದಲ್ಲಿ ನಡೆದ  ಎ ಎಫ್ ಸಿ ಕಪ್ ಪಂದ್ಯದ ವೇಳೆ ಸಿ ಕೆ ವಿನೀತ್ ಹಾಗೂ ರಿನೋ ಆಂಟೊ ಪ್ರೇಕ್ಷಕರ ಉಉದ್ಘೋಷಕ್ಕೆ ಕಿವಿ ಕೊಡುವ ಮೂಲಕ ಪ್ರೇಕ್ಷಕರ ನಡುವಿನ ವೈರತ್ವಕ್ಕೆ ವೇದಿಕೆ ನಿರ್ಮಿಸಿದರು. ಈ ಬಗ್ಗೆ ಫುಟ್ಬಾಲ್ ವಲಯದಲ್ಲಿ ಸಾಕಷ್ಟು ಚರ್ಚೆ ನಡೆದಿತ್ತು. ಬೆಂಗಳೂರು ಹಾಗು ಕೇರಳ ಬಲಿಷ್ಠ ಫುಟ್ಬಾಲ್ ಅಭಿಮಾನಿಗಳನ್ನು ಹೊಂದಿರುವ ತಂಡಗಳು. ಈ ಬಾರಿಯೂ ಯಾವ ತಂಡ ಹೆಚ್ಚು ಪ್ರೇಕ್ಷಕರ ಬೆಂಬಲ ಗಳಿಸಬಹುದು? ಉತ್ತಮ ಬೆಂಬಲ ಹಾಗೂ ಆರೋಗ್ಯಕರವಾದ ವಾದ ಉತ್ತಮ ಚರ್ಚೆಗೆ ಗ್ರಾಸವಾಗಬಹುದು. ” ಇದು ಫುಟ್ಬಾಲ್ ಅಭಿಮಾನಿ ಬಳಗಗಳ ನಡುವೆ ಅಂಗಣದಲ್ಲಿ ಜಿದ್ದು ಇರುವುದು ಸಹಜ. ಇರಬೇಕು. ಆದರೆ ಅದು ವೈಯಕ್ತಿಕ ಆಗಬಾರದು. ಅದು ಬೆಂಗಳೂರಿನಿಂದ ಕೊಚ್ಚಿಗೆ  ಎಂಟು ಗಂಟೆ ವಾಹನ ಚಲಾಯಿಸಿದಂತಿರಬೇಕೇ? ಹಾಗಾಗಬಾರದು. ಪ್ರೇಕ್ಷಕರ ನಡುವಿನ ವೈರತ್ವ ಫುಟ್ಬಾಲ್ ಗೆ ಆರೋಗ್ಯಕರ. ವೈರತ್ವದ ನಡುವೆಯೂ ಪಂದ್ಯ ಮುಗಿದ ನಂತರ ಆತ್ಮೀಯರಾಗಿ ಮುನ್ನಡೆದರೆ ಅದು ಫುಟ್ಬಾಲ್ ಗೂ ಉತ್ತಮ,” ಇಯಾನ್ ಹುಮೆ ಹೇಳಿದ್ದಾರೆ. ಹುಮೆ ಈ ಹಿಂದಿನ ಎಲ್ಲ ಋತುಗಳಲ್ಲೂ ಪಾಲ್ಗೊಂಡಿದ್ದು. ಎರಡು ಬಾರಿ ಕೇರಳದ ಪರ ಆಡಿದ್ದಾರೆ.

ಸೋಶಿಯಲ್ ಮೀಡಿಯಾ ಹಾಗೂ ಕ್ರೀಡಾಂಗಣಗಳು ಫುಟ್ಬಾಲ್ ಅಭಿಮಾನಿಗಳಿಗೆ ಯುದ್ಧದ ಅಂಗಣವಿದ್ದಂತೆ. ಮಂಜಪ್ಪಾಡ ಪಡೆಗೆ ಇನ್ನೂ ಪ್ರಶಸ್ತಿ ಗೆದ್ದಿಲ್ಲ ಎಂದು ವೆಸ್ಟ್ ಬ್ಲಾಕ್ ಬ್ಲೂಸ್ ಗೇಲಿ ಮಾಡಿದರೆ ಕೇರಳದ ಅಭಿಮಾನಿಗಳ ಉತ್ತಮ ಅಂಕೆ ಸಂಖ್ಯೆಗಳನ್ನು ನೀಡಿ ಉತ್ತರಿಸುತ್ತಿದ್ದರು. ಈ ರೀತಿಯ ಕ್ರೀಡಾ ಸಂಸ್ಕಾರ ಸ್ಪರ್ಧಾತ್ಮಕ  ಆಟ ಹುಟ್ಟಿಕೊಳ್ಳಲು ನೆರವು ಮಾಡಿಕೊಡುತ್ತದೆ. ಇದರೊಂದಿಗೆ ಭಾರತದ ಫುಟ್ಬಾಲ್ ಉತ್ತಮ ಹಾದಿಯಲ್ಲಿ ಮುನ್ನಡೆಯಲು ಸಾಧ್ಯವಾಗುತ್ತದೆ.

ಇದನ್ನು ಗಮನಿಸಿದರೆ ಭಾರತದ ಫುಟ್ಬಾಲ್ ಉತ್ತಮ ಸ್ಥಿತಿಯತ್ತ ಸಾಗುತ್ತಿದೆ ಎಂದು ಬೆಂಗಳೂರು ತಂಡದ ನಾಯಕ ಸುನಿಲ್ ಛೆಟ್ರಿ ಈ ಹಿಂದಿನ ಋತುವಿನ ಮೊದಲ ಪಂದ್ಯ ಆಂ‘ವಾಗುವುದಕ್ಕೆ ಮುನ್ನ ಹೇಳಿದ್ದರು. ಕೇರಳ ಬ್ಲಾಸ್ಟರ್ ವಿರುದ್ಧ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಲೀಗ್ ಪಂದ್ಯದಲ್ಲೂ ಇತ್ತಂಡಗಳ ಪ್ರೇಕ್ಷಕರು ಹಾಗೂ ಆಟಗಾರರ ನಡುವಿನ ವೈರತ್ವಕ್ಕೆ ಉದಾಹರಣೆ ಸಿಕ್ಕಿತ್ತು. ಆಗಲೇ ಲೀಗ್‌ನ ಅಂಕ ಪಟ್ಟಿಯಲ್ಲಿ ಅಗ್ರರು ಯಾರೆಂಬುದು ತೀರ್ಮಾನವಾಗಿತ್ತು. ಆ ಪಂದ್ಯ ಕೇವಲ ಔಪಚಾರಿಕ ಪಂದ್ಯವಾಗಿತ್ತು. ಪಂದ್ಯ ಪ್ರಮುಖವಾಗಿರದಿದ್ದರೂ ಹಳದಿ ಹಾಗೂ ಬ್ಲೂ ಪಡೆ ತುಂಬಿ ತುಳುಕಿತ್ತು.

ಐದನೇ ಋತುವಿನ ಪಂದ್ಯಗಳು ಆರಂಭಗೊಳ್ಳು ವೇದಿಕೆ ಸಜ್ಜಾಗಿದೆ. ಕೇರಳ ಬ್ಲಾಸ್ಟರ್ಸ್ ತಂಡ ಮೆಲ್ಬೋರ್ಸ್ ಸಿಟಿ ಹಾಗೂ ಗಿರೋನಾ ಎಫ್ ಸಿ  ತಂಡದ ವಿರುದ್ಧ ಸೋಲನುಭವಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಕೇರಳದಲ್ಲಿ ನೆರೆ ಸಂಭವಿಸಿ ನೂರಾರು ಮಂದಿ ಅಸು ನೀಗಿದ್ದಾರೆ. ಕೇರಳ ಬ್ಲಾಸ್ಟರ್ಸ್ ತಂಡಕ್ಕೆ ವಿರೋಧ ವ್ಯಕ್ತಪಡಿಸುವ ಬದಲು ಅವರಿಗೆ ಬೆಂಬಲ ಸೂಚಿಸುವುದು ಪ್ರಮುಖವಾಗಿದೆ. ನೆರಯವರ ಬಗ್ಗೆ ಬ್ಲೂಸ್ ಪ್ರೀತಿ ತೋರಿಸಬೇಕಾಗಿದೆ. ಬೆಂಗಳೂರು ಎಫ್ ಸಿ  ತಂಡದ ಆಟಗರರು ನೆರವಿನ ಹಸ್ತ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು. ದ್ವೇಷ ಎಂಬುದು ಕೇವಲ ಆಟದ ಸಮಯಕ್ಕೆ ಮಾತ್ರ ಸೀಮಿತವಾಗಿದೆ ಎಂಬುದಕ್ಕೆ ಇದು ಉತ್ತಮ ಉದಾಹರಣೆ.

ಅಂಗಣದ ವೈರತ್ವ ಮುಂದುವರಿದೆ. ಇಂಡಿಯನ್ ಸೂಪರ್ ಲೀಗ್ ಐದನೇ ಆವೃತ್ತಿ ಆರಂಭಗೊಳ್ಳುತ್ತಿದೆ. ಈ ದ್ವೇಷ ಹಾಗೂ ಪ್ರೀತಿಯ ಬಂಧ  ಮುಂದುವರಿಯುವುದೇ?ಕಾದು ನೋಡಬೇಕು.

Related Articles