Thursday, October 10, 2024

ಭಾರತ-ಪಾಕ್‌ ಪಂದ್ಯದ ಟಿಕೆಟ್‌ ಗರಿಷ್ಠ ಬೆಲೆ ರೂ. 16,85,847??

ನ್ಯೂಯಾರ್ಕ್‌: ಅಮೆರಿಕದಲ್ಲಿ ಬೇಸ್‌ಬಾಲ್‌ (ಎಂಎಲ್‌ಬಿ) ಹಾಗೂ ಬಾಸ್ಕೆಟ್‌ಬಾಲ್‌ (ಎನ್‌ಬಿಎ) ಪಂದ್ಯಗಳನ್ನು ನೋಡಲು ದುಬಾರಿ ಬೆಲೆ ತೆತ್ತು ಸೀಸನ್‌ ಟಿಕೆಟ್‌ ಖರೀದಿಸುತ್ತಾರೆ. ಆದರೆ ಕ್ರಿಕೆಟ್‌ಗೆ? ಅದಕ್ಕಿಂತಲೂ ಬೇಡಿಕೆ ಇದೆ ಎಂದರೆ ಅಚ್ಚರಿಯಾಗುತ್ತದೆ. ಜೂನ್‌ 9ರಂದು ಅಮೆರಿಕದ ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್‌ ಪಂದ್ಯದ ಡೈಮಂಡ್‌ ಕ್ಲಬ್‌ನ ಟಿಕೆಟ್‌ ಬೆಲೆ 20,000 ಅಮೆರಿಕನ್‌ ಡಾಲರ್‌. ಅಂದರೆ ಭಾರತದ 16,85,847 ರೂ.ಗಳಿಗೆ ಸಮ. India vs Pakistan T20 World Cup ticket maximum price 20,000 US Doller!

ಬ್ರಿಟಿಷ್‌ ನೆಲದಲ್ಲಿ ಹುಟ್ಟಿರುವ ಕ್ರಿಕೆಟ್‌ ಹಾಗೂ ಫುಟ್ಬಾಲ್‌ಗೆ ಅಮೆರಿಕ ಹೆಚ್ಚಿನ ಪ್ರೋತ್ಸಾಹ ನೀಡುತ್ತಿಲ್ಲ. ಈ ಕಾರಣಕ್ಕಾಗಿಯೇ ಅಲ್ಲಿ ಅಮೆರಿಕನ್‌ ಫುಟ್ಬಾಲ್‌, ಬೇಸ್‌ಬಾಲ್‌ ಕ್ರೀಡೆಗಳು ಹೆಚ್ಚು ಜನಪ್ರಿಯಗೊಂಡಿವೆ. ಆದರೆ ಈಗ ಅಮೆರಿಕ ಕೇವಲ ಅಮೆರಿಕ ದೇಶದ ಪ್ರಜೆಗಳ ರಾಷ್ಟ್ರವಾಗಿ ಉಳಿದಿಲ್ಲ. ಜನತ್ತಿನ ವಿವಿಧ ರಾಷ್ಟ್ರಗಳ ಜನರು ಇಲ್ಲಿ ನೆಲೆಸಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಆಡುತ್ತಿರುವ ಆತಿಥೇಯ ಅಮೆರಿಕ ಕ್ರಿಕೆಟ್‌ ತಂಡವನ್ನೇ ನೋಡಿದರೆ ಸ್ಪಷ್ಟವಾಗುತ್ತದೆ.

ಬೇಸ್‌ಬಾಲ್‌ ಹಾಗೂ ಬಾಸ್ಕೆಟ್‌ಬಾಲ್‌ ಪಂದ್ಯಗಳಿಗೆ ಒಂದು ಪಂದ್ಯಕ್ಕಾಗಿ ಟಿಕೆಟ್‌ ಖರೀದಿಸುವುದು ವಿರಳ. ಅಲ್ಲಿ ಸೀಸನ್‌ ಟಿಕೆಟ್‌ಗಳನ್ನು ಖರೀದಿಸುತ್ತಾರೆ. ಬೇಸ್‌ಬಾಲ್‌ ಒಂದು ಸೀಸನ್‌ ಟಿಕೆಟ್‌ನ ಗರಿಷ್ಠ ಮೊತ್ತ 54,14, 197 ರೂ. ಇನ್ನು ಎನ್‌ಬಿಎ ಬಾಸ್ಕೆಟ್‌ಬಾಲ್‌ ಸೀಸನ್‌ ಟಿಕೆಟ್‌ನ ಗರಿಷ್ಠ ಮೊತ್ತ 74,95,530 ರೂ. ಭಾರತದಲ್ಲಿ ಈ ಮೊತ್ತದಲ್ಲಿ ಒಂದು ಒಳ್ಳೆಯ ಮನೆ ಕಟ್ಟಿಕೊಂಡು ಜೀವನ ನಡೆಸಬಹುದು. ಹಾಗೆ ನೋಡಿದರೆ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ಟಿಕೆಟ್‌ ಬೆಲೆ ಎನ್‌ಬಿಎ ಹಾಗೂ ಎಂಎಲ್‌ಬಿ ಟಿಕೆಟ್‌ ಬೆಲೆಯನ್ನು ಹಿಂದಿಕ್ಕಿದೆ. ಅಮೆರಿಕದಲ್ಲಿ ಕ್ರಿಕೆಟ್‌ ಹುಚ್ಚು ಹಬ್ಬಿತೆಂದರೆ ಅದು ಇಡೀ ಜಗತ್ತನ್ನು ಆವರಿಸಿದಂತೆ. ಕಡಿಮೆ ಬೆಲೆಯ ಟಿಕೆಟ್‌ಗಳು ಈಗಾಗಲೇ ಮಾರಾಟಗೊಂಡಿರುವುದನ್ನು ಗಮನಿಸಿದಾಗ ಅಮೆರಿಕದಲ್ಲಿ ಈ ಬಾರಿಯ ವಿಶ್ವಕಪ್‌ ಹೊಸ ಅಧ್ಯಾಯವನ್ನೇ ಬರೆಯಲಿದೆ. ಅಲ್ಲಿಯ ಮೇಜರ್‌ ಹಾಗೂ ಮೈನರ್‌ ಲೀಗ್‌ಗಳಿಗೆ ಹೆಚ್ಚಿನ ಬೇಡಿಕೆ ಬರಲಿದ್ದು, ಯುವ ಆಟಗಾರರಿಗೆ ಮತ್ತಷ್ಟು ಅವಕಾಶ ಸಿಗಲಿದೆ.

Related Articles