Saturday, October 12, 2024

ವಿಶ್ವಕಪ್‌ನ ವೇಗದ ಶತಕ ಸಿಡಿಸಿದ ಮ್ಯಾಕ್ಸ್ವೆಲ್‌!

ಹೊಸದಿಲ್ಲಿ: ನೆದರ್ಲೆಂಡ್ಸ್‌ ವಿರುದ್ಧದ ಐಸಿಸಿ ವಿಶ್ವಕಪ್‌ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆಲ್ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ಕೇವಲ 40 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ವಿಶ್ವಕಪ್‌ ಕ್ರಿಕೆಟ್‌ನ ವೇಗದ ಶತಕ ದಾಖಲಿಸಿದ್ದಾರೆ. ICC World Cup Fastest Century by Glenn Maxwell

ನೆದರ್ಲೆಂಡ್ಸ್‌ ವಿರುದ್ಧ ಇಲ್ಲಿನ ಅರುಣ್‌ ಜೇಟ್ಲಿ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮ್ಯಾಕ್ಸ್‌ವೆಲ್‌ ಕೇವಲ 40 ಎಸೆತಗಳಲ್ಲಿ ಈ ಸಾಧನೆ ಮಾಡಿದರು. ಅವರ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಹಾಗೂ 8 ಸಿಕ್ಸರ್‌ ಸೇರಿತ್ತು. ಬ್ಯಾಟಿಂಗ್‌ ಮುಂದುವರಿಸಿದ ಅವರು ಅಂತಿಮವಾಗಿ 53 ಎಸೆತಗಳನ್ನೆದುರಿಸಿ 9 ಬೌಂಡರಿ ಹಾಗೂ 8 ಸಿಕ್ಸರ್‌ ಮೂಲಕ 106 ರನ್‌ ಗಳಿಸಿದರು. ಇದಕ್ಕೂ ಮುನ್ನ ಈ ದಾಖಲೆ ದಕ್ಷಿಣ ಆಫ್ರಿಕಾದ ಆಡೆನ್‌ ಮಾರ್ಕ್‌ರಾಮ್‌ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 49 ಎಸೆತಗಳನ್ನೆದುರಿಸಿ 106 ರನ್‌ ಗಳಿಸಿದ್ದು ಇದುವರೆಗಿನ ದಾಖಲೆಯಾಗಿತ್ತು.

ಏಕದಿನ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್‌ 31 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿದ್ದು ಇದುವರೆಗಿನ ದಾಖಲೆಯಾಗಿದೆ.

ಆಸ್ಟ್ರೇಲಿಯಾ ಹಾಗೂ ನೆದರ್ಲೆಂಡ್ಸ್‌ ನಡುವಿನ ಪಂದ್ಯದಲ್ಲಿ ಇನ್ನೊಂದು ಮರೆಯಬೇಕಾದ ದಾಖಲೆಯಾಯಿತು. ನೆದರ್ಲೆಂಡ್ಸ್‌ನ ಬೌಲರ್‌ ಬಾಸ್‌ ಡೆ ಲೀಡೆ 10 ಓವರ್‌ಗಳಲ್ಲಿ 115 ರನ್‌ ನೀಡುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ನೀಡಿದ ಬೌಲರ್‌ ಎನಿಸಿದರು.

Related Articles