ವಿಘ್ನೇಶನಿಗೆ ನೆರವಾದ ಶರೀಫ್
Rashmi Tendulkar: “ನನ್ನ ಕ್ರಿಕೆಟ್ ಜೀವನಕ್ಕೆ ತಿರುವು ನೀಡಿದ ವ್ಯಕ್ತಿ ನನ್ನ ನೆರೆಮನೆಯ ಶರೀಫ್.” IPLನಲ್ಲಿ ಮುಂಬೈ ತಂಡ ಹರಾಜಿನಲ್ಲಿ ನಲ್ಲಿ ಖರೀದಿಸಿದ ಸುದ್ದಿ ಬಂದ ಕೂಡಲೇ ಮಾಧ್ಯಮಗಳಿಗೆ ನೀಡಿದ ಬೈಟ್ ನಲ್ಲಿ ವಿಘ್ನೇಶ್ ಪುತ್ತೂರ್ ಈ ಮಾತು ಹೇಳಿದ್ದರು. ಹೀಗೊಬ್ಬರು ಇರಬೇಕು.. ರೈಟ್ ಟೈಮ್ ನಲ್ಲಿ ರೈಟ್ ಟ್ರಾಕ್ ಗೆ push ಮಾಡಿದ್ರೆ ಸಾಕು. ಪರಿಶ್ರಮದ ಜೊತೆಗೆ ಅದೃಷ್ಟವೂ ಕೈ ಹಿಡಿದ್ರೆ ಬದುಕು ಹೊಸ ತಿರುವು ಪಡೆದು ಕೊಳ್ಳುತ್ತೆ ಎಂಬುದಕ್ಕೆ ವಿಘ್ನೇಶ್ ಉತ್ತಮ ನಿದರ್ಶನ. How neighbourer Shareef helped Vighnesh Puthur in bowling?
ಕೇರಳದ ಮಲಪ್ಪುರಂ ಜಿಲ್ಲೆಯ ಪೆರಿಂದಲ್ಮಣ್ಣ ನಿವಾಸಿಯಾಗಿರುವ ವಿಘ್ನೇಶ್ ತಮ್ಮ ಮೊದಲ ಪಂದ್ಯದಲ್ಲೇ ಮೂರು ವಿಕೆಟ್ ಗಳಿಸಿ ಮಿಂಚಿದ್ದು ನಮಗೆಲ್ಲರಿಗೂ ಗೊತ್ತೇ ಇದೆ. ಮಾರ್ಚ್ 23ರಂದು ಸಿಎಸ್ಕೆ ವಿರುದ್ಧ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಸೋತಿದ್ದರೂ ವಿಘ್ನೇಶ್ ಪುತ್ತೂರ್ ಎಂಬ ಈ 24ರ ಹರೆಯದ ಕೇರಳದ ‘ಕಣ್ಣನ್’ ಎಲ್ಲರ ಗಮನ ಸೆಳೆದಿದ್ದಾನೆ. ಈತನ nick name ಅಥವಾ ಮನೆಯಲ್ಲಿ ಕರೆಯುವ ಹೆಸರು ಕಣ್ಣನ್ ಎಂದು ಗೊತ್ತಾಗಿದ್ದು ಮಲಯಾಳ ಮನೋರಮಾದ ವಿಡಿಯೊದಿಂದ. ಅದರಲ್ಲಿ ಮಾಧ್ಯಮ ಪ್ರತಿನಿಧಿ ಶರೀಫ್ನ್ನು ಮಾತಾಡಿಸಿದ್ದರು. ಶರೀಫ್ ಎಂಬ ಆ ವ್ಯಕ್ತಿ ಕೋಟಕ್ಕಲ್ ಸಮೀಪದಲ್ಲಿರುವ ಕುಳಿಪ್ರದಲ್ಲಿರುವ ಒಂದು ಮಸೀದಿಯಲ್ಲಿ ಉಸ್ತಾದ್ ಆಗಿದ್ದಾರೆ. Over to ಶರೀಫ್…
10-13 ವರ್ಷಗಳ ಹಿಂದೆ ನಾನು ಕ್ರಿಕೆಟ್ ಆಡುತ್ತಿದ್ದೆ. ನಾನಾಗ ಪೆರಿಂದಲ್ಮಣ್ಣದಲ್ಲಿ ವಿಜಯನ್ ಸರ್ನ ಕ್ಯಾಂಪ್ನಲ್ಲಿ ಕ್ರಿಕೆಟ್ ತರಬೇತಿ ಪಡೆಯುತ್ತಾ ಕ್ರಿಕೆಟ್ನ್ನು ತುಂಬಾ ಸೀರಿಯಸ್ಸಾಗಿ ತೆಗೆದುಕೊಂಡಿದ್ದೆ. ಅಲ್ಲೇ ಊರಿನ ಹುಡುಗರ ಜತೆಗೂ ಆಟವಾಡುತ್ತಿದ್ದೆ. ಹಾಗೆ ಆಟವಾಡುವಾಗ ಅಲ್ಲಿಗೆ ಬಂದ ಹುಡುಗ ಈ ಕಣ್ಣನ್ ಎನ್ನುವ ವಿಘ್ನೇಶ್. ನಾವು ಆಗ ಕ್ಯಾಂಪ್ನಲ್ಲಿ ಕಲಿಯುತ್ತಿದ್ದ ಹೆಚ್ಚಿನ ಸಂಗತಿಗಳು ವಿಘ್ನೇಶ್ಗೆ ಸಹಜವಾಗಿಯೇ ತಿಳಿದಿತ್ತು.
ಕ್ರೀಡಾ ಲೋಕದ ಸ್ಫೂರ್ತಿಯ ಕತೆಗಳಿಗಾಗಿ ನಮ್ಮ ಚಾನೆಲ್ SUBSCRIBE ಆಗಿ ದಯವಿಟ್ಟು
ಅಂದರೆ ನಾವು ಕೋಚ್ ಬಳಿ ಕಲಿತಿದ್ದ ತಂತ್ರಗಳನ್ನು ಈ ಹುಡುಗ ಯಾರ ಕೋಚಿಂಗ್ ಇಲ್ಲದೆಯೇ ಮೈಗೂಡಿಸಿಕೊಂಡಿದ್ದ. ಅಲ್ಲಿ ನಾವಿಬ್ಬರೂ ಪರಿಚಿತರಾದೆವು. ಅವನ ಮನೆ ಮುಂದೆ ಪುಟ್ಟದೊಂದು ರಸ್ತೆ ಇದೆ. ನಾವು ಅಲ್ಲೇ ಆಟವಾಡಿಕೊಂಡಿದ್ದದ್ದು. ನಾನು ವಿಜಯನ್ ಸರ್ ಅವರ ಕ್ಯಾಂಪಿಗೆ ಹೋಗ್ತಿದ್ದೆ ಅಲ್ವಾ, ಹೀಗೊಬ್ಬ ಹುಡುಗ ಇದ್ದಾನೆ. ಅವನಲ್ಲಿ ಪ್ರತಿಭೆ ಇದೆ. ಅವನ ಮನೆಯಲ್ಲಿ ಹೋಗಿ ಮಾತಾಡಿ ಅನುಮತಿ ಸಿಕ್ಕಿದರೆ ಕ್ಯಾಂಪಿಗೆ ಕರೆದುಕೊಂಡು ಬರುತ್ತೇನೆ ಎಂದಿದ್ದೆ. ವಿಘ್ನೇಶ್ನ ಅಪ್ಪನ ಜತೆ ಮಾತಾಡಿ ಅವನನ್ನು ಕ್ಯಾಂಪ್ಗೆ ಕರೆದುಕೊಂಡು ಬಂದೆ.ಮೊದಲು ಮೀಡಿಯಂ ಪೇಸ್ನಂತೆ ಸಾಧಾರಣ ಬೌಲಿಂಗ್ ಮಾಡ್ತಿದ್ದ. ಅಂದು ನನಗೆ ಲೆಗ್ ಸ್ಪಿನ್ ಇಷ್ಟವಾಗಿತ್ತು. ಆದರೆ ನನಗೆ ಅದು ಸಾಧ್ಯವಾಗಲಿಲ್ಲ, ನಾನು ಆಫ್ ಸ್ಪಿನ್ನರಾದೆ.
ವಿಘ್ನೇಶ್ನ್ನು ಪರಿಚಯವಾದ ನಂತರ ನಾನು ಅವನಿಗೆ ಹೇಳಿದ್ದೆ ಎಡಗೈ ಲೆಗ್ ಸ್ಪಿನ್ ಮಾಡುವವರು ಕಡಿಮೆ. ಚೈನಾಮೆನ್ ಅಂತ ಅದಕ್ಕೆ ಹೇಳ್ತಾರೆ ಅಂದು ಆಗ ನನಗೆ ಗೊತ್ತಿರಲಿಲ್ಲ. ಇದೊಂದು ವಿಶೇಷ ಶೈಲಿ. ಆಸ್ಟ್ರೇಲಿಯಾ ತಂಡದಲ್ಲಿ Hogg ಎಂಬ ಆಟಗಾರನಿದ್ದ. ಅವ ಈ ರೀತಿ ಬೌಲಿಂಗ್ ಮಾಡ್ತಿದ್ದ ಎಂದು. ವಿಘ್ನೇಶ್ ನಾನು ಹೇಳಿಕೊಟ್ಟಿದ್ದಕ್ಕಿಂತ ಚಂದವಾಗಿ ಬೌಲಿಂಗ್ ಇಂಪ್ರೂವ್ ಮಾಡಿಕೊಂಡ. ಕ್ಯಾಂಪಿಗೆ ಬಂದಾಗ ಅವನು ಮತ್ತಷ್ಟು ಇಂಪ್ರೂವ್ ಆದ. ನಾನು ಅವನನ್ನು ಕ್ಯಾಂಪಿಗೆ ಕರೆದುಕೊಂಡು ಬಂದದ್ದು ಬಿಟ್ಟರೆ ಬಾಕಿ ಎಲ್ಲ ಅವನ ಪರಿಶ್ರಮದಿಂದಲೇ ಅವನು ಗಳಿಸಿದ್ದು. ನಾನು ಅವನ ಹಿಂದೆ ಓಡ್ತಾ ಅವನಿಗೆ ತರಬೇತಿ ಕೊಡಲೂ ಇಲ್ಲ. ಅವನ ಬೌಲಿಂಗ್ ಶೈಲಿ ಸ್ಪೆಷಲ್ ಅನಿಸಿತ್ತು.
ಅದು ಇಂಪ್ರೂವ್ ಮಾಡಿದರೆ ಒಳ್ಳೇದು ಅಂದುಕೊಂಡೆ. ಅವನೊಳಗೆ ಒಬ್ಬ ಅದ್ಬುತ ಕ್ರಿಕೆಟಿಗ ಇದ್ದ.ನಾನು ಆರಂಭದಲ್ಲಿ ಅವನಿಗೆ ಸ್ಪಲ್ಪ ಪುಶ್ ಕೊಟ್ಟೆ ಅಷ್ಟೇ. ಬಾಕಿ ಎಲ್ಲವೂ ಅವನ ಪರಿಶ್ರಮದ ಫಲ. ನಾನು ಅಂಡರ್ 19ನಲ್ಲಿ ಆಡುವಾಗ ಅವ ಅಂಡರ್ 14 ಟೀಂನಲ್ಲಿದ್ದ. ನಾನು ಎರಡು ವರ್ಷ ಆಡಿ ನಂತರ ಕ್ರಿಕೆಟ್ ಬಿಟ್ಟೆ. ವಿಘ್ನೇಶ್ ಜಿಲ್ಲಾ ತಂಡದಲ್ಲಿ ಕ್ಯಾಪ್ಟನ್, ವೈಸ್ ಕ್ಯಾಪ್ಟನ್ ಎಲ್ಲ ಆಗಿದ್ದ. ನಾವು ಒಂದೇ ಊರು.. ನೆರೆಹೊರೆಯವರಲ್ಲವೇ.. ನಾನು ಒಂದು ಸಣ್ಣ ಸಹಾಯ ಮಾಡಿದ್ದಷ್ಚೇ. ಒಳ್ಳೇ ಮನಸ್ಸಿನ ಹುಡುಗ. ಹಾಗಾಗಿ ಅವ ನನ್ನ ಹೆಸರು ಹೇಳಿದ್ದು. ಅವ ಮತ್ತಷ್ಟು ಬೆಳೆಯಲಿ. ಇಂಡಿಯನ್ ಟೀಂನಲ್ಲಿ ಆಡಲಿ ಎಂಬುದೇ ಹಾರೈಕೆ.