Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಕೀನ್ಯಾದಲ್ಲಿ ಖೋ ಖೋ ಬೆಳಗಿದ ಹಿಂದೂ ಸ್ವಯಂ ಸೇವಕ ಸಂಘ

ಹೊಸದಿಲ್ಲಿ: ಭಾರತದಲ್ಲಿ ನಡೆಯುತ್ತಿರುವ ಮೊದಲ ವಿಶ್ವಕಪ್‌ನಲ್ಲಿ ಸ್ಪರ್ಧಿಸಿರುವ ರಾಷ್ಟ್ರಗಳ ಆಟಗಾರರ ಯಶಸ್ಸಿ ಹಾದಿಯನ್ನು ಗಮನಿಸಿದಾಗ ಅಲ್ಲಿ ನೂರಾರು ಕುತೂಹಲದ ಕತೆಗಳು ಸಿಗುತ್ತವೆ. ಅದರಲ್ಲಿ ಕೀನ್ಯಾ ತಂಡವನ್ನು ಪ್ರತಿನಿಧಿಸುತ್ತಿರುವ ರಾಜ್‌ಖೋಟ್‌ ಮೂಲದ ಡಾ. ಹಿರೇನ್‌ ಪಾಠಕ್‌ ಅವರ ಯಶೋಗಾಥೆಯನ್ನು ಗಮನಿಸಿದಾಗ ನಿಜವಾಗಿಯೂ ಭಾರತದ ನೆಲದ ಕ್ರೀಡೆ ದೂರದ ಆಫ್ರೀಕಾ ದೇಶವಾದ ಕೀನ್ಯಾದಲ್ಲಿ ಹೇಗೆ ಜನಪ್ರಿಯಗೊಂಡಿತೆಂಬುದು ಅಚ್ಚರಿಯಾಗುತ್ತದೆ. From Rajkot to Delhi via Kenya Dr Hiren Pathak’s Journey to Kho Kho World Cup

ಖೋ ಖೋ ಕ್ರೀಡೆ ಮಹಾಭಾರತದ ಕಾಲದಲ್ಲೇ ಇದ್ದಿತ್ತಾ?

ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ಹಿರೇನ್‌ ಪಾಠಕ್‌ ಬಿಡುವಿನ ವೇಳೆಯಲ್ಲಿ ಖೋ ಖೋ ಆಡುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅಲ್ಲಿರುವ ಹಿಂದೂ ಸ್ವಯಂ ಸೇವಕಾ ಸಂಘ (ಎಚ್‌ಎಸ್‌ಎಸ್‌), “ನಾವು ಕೀನ್ಯಾದಲ್ಲಿ ಭಾರತ ಮೂಲದ ಆಟಗಳನ್ನೇ ಹೆಚ್ಚಾಗಿ ಆಡುತ್ತೇವೆ, ಅದರಲ್ಲಿ ಖೋ ಖೋ ಕೂಡ ಒಂದು. ಕೀನ್ಯಾಕ್ಕೆ ವಲಸೆ ಹೋಗಿ 20 ವರ್ಷಗಳಾಯಿತು. ಅಲ್ಲಿಂದ ಇಲ್ಲಿಯವರೆಗೂ ನಾವು ಖೋ ಖೋ ಆಟವನ್ನು ಆಡುತ್ತಿದ್ದೇವೆ. ಇಲ್ಲಿರುವ ಹಿಂದೂ ಸ್ವಯಂ ಸೇವಕ ಸಂಘ ನಮಗೆ ಖೋ ಖೋ ಆಡಲು ಸ್ಥಳವನ್ನು ನೀಡಿದೆ ಮತ್ತು ಭಾರತ ಇತರ ದೇಶೀಯ ಕ್ರೀಡೆಗಳನ್ನಾಡಲು ಪ್ರೋತ್ಸಾಹಿಸಿದೆ,” ಎನ್ನುತ್ತಾರೆ ಡಾ, ಪಾಠಕ್‌.

subscribe our sports channel

“ಖೋ ಖೋ ಆಟವನ್ನು ನಾವು ವಾರಕ್ಕೊಮ್ಮೆ ಆಡುತ್ತೇವೆ. ನಮ್ಮೊಳಗೇ ಟೂರ್ನಿಗಳನ್ನು ಮಾಡುತ್ತೇವೆಯೇ ವಿನಃ ಯಾವುದೇ  ಟೂರ್ನಿಗಳಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ. ಇದರ ಜೊತೆಯಲ್ಲಿ ಕಬಡ್ಡಿ ಆಡುತ್ತೇವೆ,” ಎಂದು ಪಾಠಕ್‌ ಹೇಳಿದ್ದಾರೆ.

“ಕೀನ್ಯಾದಲ್ಲಿ ಈಗ ಖೋ ಖೋ ಕ್ಲಬ್‌ಗಳು ಹುಟ್ಟಿಕೊಂಡಿವೆ. 2020ರಿಂದ ಈ ಕ್ರೀಡೆ ಕೀನ್ಯಾದಲ್ಲಿ ಹೆಚ್ಚು ಪ್ರಚಾರಗೊಳ್ಳುತ್ತಿದೆ. ವಿವಿಧ ಕೌಂಟಿಗಳಿಂದ ಆಟಗಾರರನ್ನು ಆಯ್ಕೆ ಮಾಡಲಾಗುತ್ತಿದೆ. ಪ್ರತಿಭೆಗಳನ್ನು ಗುರುತಿಸಲಾಗುತ್ತಿದೆ. ಚಿಕ್ಕ ಚಿಕ್ಕ ಕ್ಲಬ್‌ಗಳು ಭಾರತ ಈ ಕ್ರೀಡೆಯನ್ನು ಮೆಚ್ಚಿ ಅಳವಡಿಸಿಕೊಳ್ಳುತ್ತಿವೆ. ಇದರಿಂದಾಗಿ ದೂರದ ಆಫ್ರಿಕಾ ದೇಶದಲ್ಲಿ ನಮ್ಮ ದೇಶದ ಕ್ರೀಡೆ ಬೆಳೆಯಲು ಸಾಧ್ಯವಾಯಿತು,” ಎಂದು ಡಾ. ಪಾಠಕ್‌ ಹೇಳಿದ್ದಾರೆ.


administrator