Sunday, May 26, 2024

ಗೌರವಕ್ಕಾಗಿ ದಕ್ಷಿಣ ಭಾರತದ ಡರ್ಬಿ

ಕೊಚ್ಚಿ, ಫೆಬ್ರವರಿ 14

 

ಹೀರೋ ಇಂಡಿಯನ್ ಸೂಪರ್ ಲೀಗ್‌ನ ದಕ್ಷಿಣ ಭಾರತದ ಡರ್ಬಿಯಲ್ಲಿ ಉಳಿದಿರುವುದು ಕೇವಲ ಘನತೆ  ಅಥವಾ ಗೌರವ ಹೊರತು ಗೆದ್ದು ಮುನ್ನಡೆಯುವ ಕ್ಷಣ ಇಲ್ಲವಾಗಿದೆ. ಅದರಲ್ಲೂ ಕೇರಳ ತಂಡ ಮನೆಯಂಗಣದಲ್ಲಿ ಮೊದಲ ಜಯ ಕಾಣುವ ಗುರಿ ಹೊಂದಿದೆ. ನೂತನ ಕೋಚ್ ನೆಲೊ ವಿಂಗಡಾ ಪಡೆ ಈ ಋತುವಿನಲ್ಲಿ ಇದುವರೆಗೂ ಮನೆಯಂಗಣದಲ್ಲಿ ಗೆದ್ದಿರಲಿಲ್ಲ.

ವಿಂಗಡಾ ಆಗಮಿಸಿದ ನಂತರ ಕೇರಳ ತಂಡ ಎಟಿಕೆ ಹಾಗೂ ಬೆಂಗಳೂರು ವಿರುದ್ಧ ಡ್ರಾ ಕಂಡಿತ್ತು, ಹಾಗೂ ಡೆಲ್ಲಿ ಡೈನಮೋಸ್ ವಿರುದ್ಧ ಸೋಲನುಭವಿಸಿತ್ತು. ಹಾಲಿ ಚಾಂಪಿಯನ್ ವಿರುದ್ಧ  ಮನೆಯಂಗಣದಲ್ಲಿ ಸತತ ನಾಲ್ಕನೇ ಜಯ ಗಳಿಸುವ ಗುರಿ ಕೇರಳದ್ದಾಗಿದೆ. 14 ಪಂದ್ಯಗಳಲ್ಲಿ  ಸೋಲನುಭವಿಸಿರುವ ಕೇರಳ ಗೆದ್ದಿರುವುದು ಕೇವಲ ಒಂದು ಪಂದ್ಯದಲ್ಲಿ. ಚೆನ್ನೈಯಿನ್ ಎಫ್ಸಿ ತಂಡದ ಕೋಚ್ ಜಾನ್ ಗ್ರೆಗೋರಿ ಅಂಗಣದಲ್ಲಿ ಪ್ರೇಕ್ಷಕ ರ ಸಂಖ್ಯೆ ಕಡಿಮೆಯಾದರ ಆ ಬಗ್ಗೆ ಬೇಸರ ಪಡುವ ಅಗತ್ಯವಿಲ್ಲ ಎಂದಿದ್ದಾರೆ.
‘ನಾಳೆಯ ಪಂದ್ಯಕ್ಕೆ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಸಂಖ್ಯೆ ಕಡಿಮೆಯಾದರೆ ನಿರಾಸೆಯಾಗುವುದಿಲ್ಲ. ಕಳೆದ ವರ್ಷ ಕೇರಳಕ್ಕೆ ಮನೆ.ಯಂಗಣದಲ್ಲಿ ಪ್ರೇಕ್ಷಕರು ನೀಡಿದ ಪ್ರೋತ್ಸಾಹ  ಅಚ್ಚರಿಯನ್ನುಂಟು ಮಾಡಿತ್ತು. ಮನೆಯಂಗಣದಲ್ಲಿ ಕೇರಳ ತಂಡಕ್ಕೆ ಸಿಕ್ಕ ಪ್ರೋತ್ಸಾಹ ಸಿಗಬೇಕು. ಕಳೆದ ಐದು ಋತುಗಳಲ್ಲಿ ಕೇರಳ ಇಂಡಿಯನ್ ಸೂಪರ್ ಲೀಗ್ ಪ್ರಶಸ್ತಿ ಗೆಲ್ಲದಿರುವುದು ಅಚ್ಚರಿ ಎನಿಸಿದೆ,‘ ಎಂದು ಗ್ರೆಗೊರಿ ಹೇಳಿದ್ದಾರೆ.
ಈ ಋತುವಿನಲ್ಲಿ ಕಡಿಮೆ ಗೋಲು ಗಳಿಸಿರುವುದು ಕೇರಳ ತಂಡದ ದೊಡ್ಡ ದೌರ್ಬಲ್ಯ, 15 ಪಂದ್ಯಗಳಲ್ಲಿ ಕೇರಳ  15 ಗೋಲುಗಳನ್ನು ಗಳಿಸಿ ನಿರಾಸೆ ಮೂಡಿಸಿದೆ. ಸ್ಲಾವಿಸಾ ಸ್ಟೊಜಾನೊವಿಕ್ ನಾಲ್ಕು ಗೋಲುಗಳನ್ನು ಗಳಿಸಿದ್ದು, ತಂಡದ ಪರ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರರೆನಿಸಿದ್ದಾರೆ. ಕೇರಳ ತಂಡ ಈ ರೀತಿಯಲ್ಲಿ ಗೋಲು ಗಳಿಸಲು ಪರದಾಡುತ್ತಿರವುದು ಅಚ್ಚರಿಯನ್ನುಂಟು ಮಾಡಿದೆ.
‘ಮುಂದಿನ ಪಂದ್ಯ ಪ್ರಮುಖವಾದುದು. ಅಲ್ಲದೆ ಬಹಳ ಕಠಿಣವಾದ ಪಂದ್ಯ. ಮೂರು ಪಂದ್ಯಗಳ ನಂತರ ತಂಡದಲ್ಲಿ ಸಾಕಷ್ಟು ಹೊಂದಾಣಿಕೆ ಕಂಡಿದೆ. ತಂಡ ಅಂಕಪಟ್ಟಿಯಲ್ಲಿ ಮೇಲಕ್ಕೇರುವ ಲಕ್ಷಣ ತೊರಿದೆ. ನಾವು ತರಬೇತಿಯಲ್ಲಿ ಬಹಳ ಸಮಯ ಕಳೆದಿದ್ದೇವೆ, ಆಟಗಾರರು ನಮ್ಮ ಶೈಲಿ ಏನೆಂಬುದು ಆಟಗಾರರಿಗೆ ಸ್ಪಷ್ಟವಾಗಿದೆ,‘  ಎಂದು ವಿಂಗಡಾ ಹೇಳಿದ್ದಾರೆ.
ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಹೋರಾಟವನ್ನು ಮರೆತಿರುವ ಚೆನ್ನೈಯಿನ್ ಎಫ್ ಸಿ ತಂಡ ಈಗ ಕೊನೆಯ ಸ್ಥಾನದಲ್ಲಿದ್ದು, ಈಗ ಗೌರವ ಕಾಯ್ದುಕೊಳ್ಳುವುದಕ್ಕಾಗಿ ಅಂಗಣಕ್ಕಿಳಿಯಲಿದೆ. ‘ಪ್ರತಿಯೊಬ್ಬರೂ  ಸ್ಫೂರ್ತಿ ಪಡೆದಿದ್ದಾರೆ. ಮುಂದಿನ ಮೂರು ಪಂದ್ಯಗಳಲ್ಲಿ ನಾವು ಒಂಬತ್ತು ಅಂಕಗಳನ್ನು ಗಳಿಸುವ ಗುರಿ ಹೊಂದಿದ್ದೇವೆ.  ಆ ನಂತರ ನಾವು ತಲಪುವ ಸ್ಥಾನದ ಬಗ್ಗೆ ತೃಪ್ತಿ ಪಡುವೆವು. ಕೇರಳ ವಿರುದ್ಧ ಅಂಕ ಗಳಿಸುವ ಅವಕಾಶ ನಮಗಿದೆ,‘  ಎಂದು ಗ್ರೆಗೋರಿ ಹೇಳಿದ್ದಾರೆ. ಮೂರು ಪಂದ್ಯಗಳ ಅಮಾನತಿನ ನಂತರ ಮೈಲ್ಸನ್ ಆಲ್ವೆಸ್ ತಂಡವನ್ನು ಸೇರಿಕೊಳ್ಳಲಿದ್ದಾರೆ.
2017=18ರಲ್ಲಿ ಪ್ರಶಸ್ತಿ ಗೆದ್ದ ನಂತರ ಚೆನ್ನೆ‘ಯಿನ್ ತಂಡ ಈ ಬಾರಿ 11 ಸೋಲುಗಳನ್ನು ಅನುಭವಿಸಿ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ವಿಲವಾಗಿದೆ. ಬೆಂಗಳೂರು ವಿರುದ್ಧದ ಪಂದ್ಯದಲ್ಲಿ 2-1 ಗೋಲಿನಿಂದ ಗೆದ್ದಿರುವ ಚೆನ್ನೆ‘ ತಂಡ ಈಗ ಮತ್ತೊಂದು ಜಯ ಗಳಿಸುವ ಆತ್ಮವಿಶ್ವಾಸದಲ್ಲಿ ಕೇರಳಕ್ಕೆ ಆಗಮಿಸಿದೆ. ಚೆನ್ನೆ‘ ತಂಡದ ಆತ್ಮವಿಶ್ವಾಸ ಹೆಚ್ಚಿರಿವುದು ನಿಜ, ಏಕೆಂದರೆ ತಂಡ ಗೆದ್ದಿರುವುದು ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಬೆಂಗಳೂರು ವಿರುದ್ಧ. ಅದೇ ಸ್ಫೂರ್ತಿ ತಂಡಕ್ಕೆ ಕೇರಳವಿರುದ್ಧ ಗೆಲ್ಲಲು ನೆರವಾಗುವ ನಿರೀಕ್ಷೆ ಇದೆ.

Related Articles