Thursday, September 12, 2024

ಸೇಡು ತೀರಿಸಿಕೊಂಡ ಬೆಂಗಳೂರು

ಸ್ಪೋರ್ಟ್ಸ್ ಮೇಲ್ ವರದಿ

ಕಳೆದ ವರ್ಷದ ಫೈನಲ್ ಪಂದ್ಯದ ಸೋಲಿನ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ ಬೆಂಗಳೂರು ಎಫ್ ಸಿ ಗೆ ಋತುವಿನ ಮೊದಲ ಪಂದ್ಯದಲ್ಲೇ ಅವಕಾಶ. 41ನೇ ನಿಮಿಷದಲ್ಲಿ ಮಿಕು  ಗಳಿಸಿದ ಗೋಲಿನಿಂದ ಆತಿಥೇಯ ತಂಡ 1-0 ಅಂತರದಲ್ಲಿ ಚೆನ್ನೈಯಿನ್ ಎಫ್ ಸಿ ಗೆ ಸೋಲುಣಿಸಿ ಶುಭಾರಂಭ ಕಂಡಿತು.

ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲವಾದ ಚೆನ್ನೈ ತಂಡ ಅದಕ್ಕೆ ತಕ್ಕ ಬೆಲೆ ತೆರಬೇಕಾಯಿತು. ಇಂಡಿಯನ್ ಸೂಪರ್ ಲೀಗ್ ನ ಮೊದಲ ಪಂದ್ಯವಾದ ಕಾರಣ ಚೆನ್ನೈ ತಂಡಕ್ಕೆ ಈ ಸೋಲು ಅಷ್ಟು ಆಘಾತವನ್ನು ಉಂಟು ಮಾಡದು. ದ್ವಿತೀಯಾರ್ಧದಲ್ಲಿ ಬೆಂಗಳೂರು ತಂಡ ರಕ್ಷಣೆಯ ಆಟಕ್ಕೆ ಮನ ಮಾಡಿತು. ಪರಿಣಾಮ ಎಲ್ಲಿಯೂ ತಪ್ಪಿನ ಹೆಜ್ಜೆ ಇಡಲಿಲ್ಲ.

ಬೆಂಗಳೂರು ಮೇಲುಗೈ 

41ನೇ  ನಿಮಿಷದಲ್ಲಿ ಮಿಕು ಗಳಿಸಿದ ಅದ್ಭುತ ಗೋಲಿನ ನೆರವಿನಿಂದ ಬೆಂಗಳೂರು ತಂಡ ಚೆನ್ನೈಯಿನ್  ವಿರುದ್ಧದ ಮೊದಲ ಪಂದ್ಯದ ಪ್ರಥಮಾರ್ಧ ಮೇಲು ಗೈ ಸಾಧಿಸಿತು . ಈ ಗೋಲು ದಾಖಲಾಗಿರುವುದಕ್ಕೆ ಮುನ್ನ ಈ  ಬಾರಿ ಐಎಸ್‌ಎಲ್‌ನಲ್ಲಿ ಎರಡು ಗೋಲು ದಾಖಲಾಗಿತ್ತು. ಇದು ಅತ್ಯುತ್ತಮ ಗೋಲು ಎಂದರೆ ತಪ್ಪಾಗಲಾರದು.
ಚೆನ್ನೈ  ಹಾಗೂ ಬೆಂಗಳೂರು ತಂಡಗಳು ಆರಂಭದಿಂದದಲೂ ರಕ್ಷಣಾತ್ಮಕ ಆಟಕ್ಕೆ ಮನ ಮಾಡಿದವು.. ಆದರೂ ಚೆನ್ನೈ  ಚೆಂಡಿನ ಮೇಲೆ ಹೆಚ್ಚು ಕಾಲ ನಿಯಂತ್ರಣ ಸಾಧಿಸಿತ್ತು. 36ನೇ ನಿಮಿಷದಲ್ಲಿ ಚೆನ್ನೆ‘ಯಿನ್ ತಂಡಕ್ಕೆ ಫ್ರೀ ಕಿಕ್ ಅವಕಾಶ ಸಿಕ್ಕಿತ್ತು. ಆದರೆ ಬೆಂಗಳೂರಿನ ಗೋಲ್‌ಕೀಪರ್ ಸಂಧೂ ಚೆಂಡನ್ನು ತಡೆಯುವಲ್ಲಿ ಸಫಲರಾದರು.
ಇದಕ್ಕೂ ಮುನ್ನ  ಬೆಂಗಳೂರು ತಂಡದ ರಾಹುಲ್ ಭೆಕು ಚೆಂಡನ್ನು  ಸಂಧೂ ಅವರಿಗೆ ನೀಡುವ ಆತುರದಲ್ಲಿ  ಚೆನ್ನೈ  ಅಪಾಯಕಾರಿ ಆಟಗಾರ  ಜೆಜೆ ಅವರ ಉಪಸ್ಥಿತಿಯನ್ನು ಗಮನಿಸಲಿಲ್ಲ. ನಿಧಾನಗತಿಯಲ್ಲಿ ಚೆಂಡನ್ನು ನೀಡಿದರು. ಆಗ ಸಂಧೂ  ಅವರಿಗಿಂತ ಜೆಜೆ ಮೊದಲು ಚೆಂಡನ್ನು ನಿಯಂತ್ರಿಸುವಲ್ಲಿ ಸಲದಾರು. ಆದರೆ ಜೆಜೆಗೆ ಚೆಂಡನ್ನು ನಿಯಂತ್ರಿಸಲಾಗದೆ ಚೆಂಡು ಹೊರ ನಡೆಯಿತು. ಇದು ಚೆನ್ನೈಗೆ ಸಿಕ್ಕ ಅತ್ಯಂತ ಸುಲಭ  ಅವಕಾಶವಾಗಿತ್ತು

Related Articles