ಲಕ್ಷದ್ವೀಪದಲ್ಲಿ ದೀಪ ಬೆಳಗಿದ ಮೀನುಗಾರರ ಹುಡುಗ ಅಬ್ದುಲ್ ಫತ್ಹಾ
ರಾಯ್ಪುರ: ಕೇಂದ್ರದಾಡಳಿತ ಪ್ರದೇಶವಾದ ಲಕ್ಷದ್ವೀಪದ ಅಮಿನಿ ದ್ವೀಪದಲ್ಲಿ ತಂದೆಯೊಂದಿಗೆ ರಾತ್ರಿ ಮೀನು ಹಿಡಿಯುತ್ತಿದ್ದ ಅಬ್ದುಲ್ ಫತ್ಹಾ Abdul Fatah ಖೇಲೋ ಇಂಡಿಯಾ ಬುಡಕಟ್ಟು ಕ್ರೀಡಾಕೂಟದ ಹೈಜಂಪ್‌ನಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಲಕ್ಷದ್ವೀಪದ ಕ್ರೀಡಾಪಟುಗಳ ಅಭಿವೃದ್ಧಿಗಾಗಿ ಕೇಂದ್ರ ಸರಕಾರ ಉತ್ತಮ ಅಥ್ಲೆಟಿಕ್ಸ್ ಕ್ರೀಡಾಂಗಣವನ್ನು ಸ್ಥಾಪಿಸಬೇಕಾದ ಅನಿವಾರ್ಯತೆ ಇದೆ. Fisherman by night, Abdul Fattah’s leap opens new chapter for Lakshadweep athletics.
ಪುರುಷರ ಲಾಂಗ್‌ಜಂಪ್‌ನಲ್ಲಿ 7.03 ಮೀ ಉದ್ದಕ್ಕೆ ಜಿಗಿದ ಅಬ್ದುಲ್ ಫತ್ಹಾ ಕ್ರೀಡಾಕೂಟದಲ್ಲಿ ಲಕ್ಷದ್ವೀಪಕ್ಕೆ ಮೊದಲ ಹಾಗೂ ಏಕೈಕ ಪದಕ ತಂದಿತ್ತರು.
ಲಕ್ಷದ್ವೀಪದಲ್ಲಿ ಅಥ್ಲೆಟಿಕ್ಸ್‌ಗೆ ಪೂರಕವಾದ ಯಾವುದೇ ಸೌಲಭ್ಯಗಳಿಲ್ಲ. ಆದರೂ ಜಿಗಿತದಲ್ಲಿ ಈ ಕೇಂದ್ರಾಡಳಿತ ಪ್ರದೇಶ ಅದ್ಭುತ ಸಾಧನೆ ಮಾಡಿದೆ. ಮುಬಾಸಿನಾ ಮೊಹಮ್ಮದ್ ಅವರಂಥ ಯುವ ಲಾಂಗ್‌ಜಂಪರನ್ನು ದೇಶಕ್ಕೆ ನೀಡಿದ ಲಕ್ಷದ್ವೀಪಕ್ಕೆ ಕ್ರೀಡಾ ಸೌಲಭ್ಯಗಳನ್ನು ಒದಗಿಸುವ ಅಗತ್ಯವಿದೆ. ಮುಬಾಸಿನಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೇಂದ್ರಾಡಳಿತ ಪ್ರದೇಶವನ್ನು ಪ್ರತಿನಿಧಿಸಿದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅಬ್ದುಲ್ ಫತ್ಹಾ ವಾಸಿಸುತ್ತಿರುವ ಅಮಿನಿ ದ್ವೀಪ 2.7 ಕಿಮೀ ಉದ್ದ ಹಾಗೂ 1.2 ಕಿಮೀ ಅಗಲವಿದೆ. ಇದು ಕವರಟ್ಟಿ ಹಾಗೂ ಕದ್ಮತ್ ದ್ವೀಪಗಳ ನಡುವೆ ಇದೆ.
ಲಕ್ಷದ್ವೀಪದಲ್ಲಿ ಸಿಂಥಜೆಟಿಕ್ ಟ್ರ್ಯಾಕ್ ಇಲ್ಲ: ಖೇಲೋ ಇಂಡಿಯಾ ಬುಡಕಟ್ಟು ಕ್ರೀಡಾಕೂಟದಲ್ಲಿ ಲಕ್ಷದ್ವೀಪದ ಕ್ರೀಡಾ ಅಧಿಕಾರಿಯಾಗಿ ಆಗಮಿಸಿದ್ದ, ದ್ವೀಪ ಸಮೂಹದ ಏಕೈಕ ಅಥ್ಲೆಟಿಕ್ಸ್ ಕೋಚ್, ಅಹಮದ್ ಜಾವೆದ್ ಹಸನ್ ಅವರು ಅಬ್ದುಲ್ ಫತ್ಹಾ ಚಿನ್ನ ಗೆದ್ದಿರುವುದಕ್ಕೆ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಅವರು ಲಕ್ಷದ್ವೀಪದಲ್ಲಿರುವ ಹಲವಾರು ಸಮಸ್ಯೆಗಳ ಬಗ್ಗೆ ಹೇಳಿದ್ದಾರೆ.
“ಇಲ್ಲಿ ಯುವಜನರಲ್ಲಿ 99% ಫುಟ್ಬಾಲ್ ಆಡುತ್ತಾರೆ. 10 ದ್ವೀಪಗಳಿಗೂ ಪ್ರಯಾಣ ಮಾಡಬೇಕಾಗುತ್ತದೆ. ಸುಮಾರು 80-90 ಹಿರಿಯ ಅಥ್ಲೀಟ್‌ಗಳಿದ್ದಾರೆ. 30-40 ಕಿರಿಯ ಅಥ್ಲೀಟ್‌ಗಳಿದ್ದಾರೆ. ನಾನೊಬ್ಬನೇ ಕೋಚ್. ಸಿಂಥಟಿಕ್ ಟ್ರ್ಯಾಕ್ ಇಲ್ಲ. 200 ಮೀಟರ್ ಮಣ್ಣಿನ ಟ್ರ್ಯಾಕ್ ಇದೆ. ಅದರಲ್ಲೇ ಅಭ್ಯಾಸ ಮಾಡಬೇಕು, ತರಬೇತಿಗೆ ಸೂಕ್ತವಾದ ಉಕರಣಗಳೂ ಇಲ್ಲ. ಆದರೂ ಇಲ್ಲಿಯ ಮಕ್ಕಳು ತಮ್ಮಿಂದಾದ ಪ್ರಯತ್ನ ಮಾಡುತ್ತಿದ್ದಾರೆ. ಇವುಗಳ ನಡುವೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆಲ್ಲುತ್ತಿದ್ದಾರೆ ಎಂಬುದು ತೃಪ್ತಿಕರ,” ಎಂದು ಅಹಮದ್ ಜಾವೆದ್ ಹಸನ್ ಅವರು ಬೇಸರದಿಂದ ಹೇಳಿದ್ದಾರೆ.

ಅಬ್ದುಲ್ ಫತ್ಹಾ ಅವರಿಗೆ ಮಲಯಾಳಂ ಹೊರತಾಗಿ ಬೇರೆ ಭಾಷೆ ಅಷ್ಟಾಗಿ ಅರ್ಥವಾಗುತ್ತಿಲ್ಲ, ಕೋಚ್ ಹಸನ್ ಅವರೇ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ, “ದ್ವಿತೀಯ ಪಿಯುಸಿ ಓದಿರುವೆ, ನಮ್ಮದು ಬಡ ಕುಟುಂಬ, ಮೀನುಗಾರಿಕೆ ಬಿಟ್ಟರೆ ಆದಾಯಕ್ಕೆ ಬೇರೆ ಮೂಲ್ಲ. ಹಗಲಿನಲ್ಲಿ ಅಭ್ಯಾಸ ಮಾಡಿದರೆ, ರಾತ್ರಿ ತಂದೆಯೊಂದಿಗೆ ಮೀನುಗಾರಿಕೆಗೆ ತೆರಳುವೆ, ಇಲ್ಲಿ ಪದಕ ಗೆದ್ದಿರುವುದು ಖುಷಿ ಕೊಟ್ಟಿದೆ, ನಮ್ಮ ಈ ಯಶಸ್ಸು ಬದುಕಿಗೆ ಆಧಾರವಾಗಬಹುದು ಎಂಬ ನಿರೀಕ್ಷೆ ಇದೆ,” ಎಂದು ಅಬ್ದುಲ್ ಫತ್ಹಾ ಅವರ ನಿಲುವು.

ಬುಡಕಟ್ಟು ಕ್ರೀಡಾಪಟುಗಳ ಅಭಿವೃದ್ಧಿಗಾಗಿ ಸರಕಾರ ಖೇಲೋ ಇಂಡಿಯಾ ಟ್ರೈಬಲ್ ಗೇಮ್ಸ್ ಆಯೋಜಿಸಿರುವುದು ಸ್ವಾಗತಾರ್ಹ. ಆದರೆ ಮೊದಲ ಕ್ರೀಡಾಕೂಟವಾಗಿದ್ದರಿಂದ ಹಲವಾವರು ಸಮಸ್ಯೆಗಳು ಬೆಳಕಿಗೆ ಬಂದಿವೆ. ಈ ಸಮಸ್ಯೆಗಳ ಬಗ್ಗೆ ಸರಕಾರ ಗಮನ ಹರಿಸಿದ ಮುಂದಿನ ದಿನಗಳಲ್ಲಿ ಪರಿಹಾರ ಕಂಡುಕೊಂಡರೆ ಬುಡಕಟ್ಟು ಜನರ ಕ್ರೀಡಾಕೂಟವನ್ನು ಆಯೋಜಿಸಿರುವುದು ಅರ್ಥಪೂರ್ಣವೆನಿಸುತ್ತದೆ.

