Tuesday, January 14, 2025

ಏಷ್ಯಾ ಕಪ್‌ನಲ್ಲಿ ಮಿಂಚಿದ ಕನ್ನಡಿಗ ಹುಬ್ಬಳ್ಳಿಯ ಸರ್ವೇಶ್‌ ಬಾಲಪ್ಪ

ಬೆಂಗಳೂರು:

ಫಿಲಿಪ್ಪಿನ್ಸ್‌ನಲ್ಲಿ ಎರಡು ದಿನಗಳ ಕಾಲ ನಡೆದ ಏಷ್ಯ ಕಪ್‌ ಆಫ್‌ ರೋಡ್‌ ರೇಸಿಂಗ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಹುಬ್ಬಳ್ಳಿಯ ರೈಡರ್‌ ಸರ್ವೇಶ್‌ ಬಾಲಪ್ಪ ಹನುಮಣ್ಣವರ್‌ ಅವರು ಸ್ಕೂಟರ್‌ ಕ್ಲಾಸ್‌ ವಿಭಾಗದಲ್ಲಿ ಸಮಗ್ರ ಮೂರನೇ ಸ್ಥಾನ ಮತ್ತು ನೇಷನ್ಸ್‌ ಕಪ್‌ನಲ್ಲಿ ಸಮಗ್ರ ನಾಲ್ಕನೇ ಸ್ಥಾನ ಗಳಿಸಿ ದೇಶಕ್ಕೆ ಕೀರ್ತಿ ತಂದಿದ್ದಾರೆ.

ಚೆನ್ನೈನ ಮಥನ ಕುಮಾರ್‌ ಕೂಡ ಭಾರತವನ್ನು ಪ್ರತಿನಿಧಿಸಿದ್ದ ಇನ್ನೋರ್ವ ರೈಡರ್‌.

ಹುಬ್ಬಳ್ಳಿಯ ಸರ್ವೇಶ್‌ ಬಾಲಪ್ಪ ಇತ್ತೀಚಿಗೆ ಮುಕ್ತಾಯಗೊಂಡ ಎಫ್‌ಎಂಎಸ್‌ಸಿಐ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲೂ ಚಾಂಪಿಯನ್‌ ಪಟ್ಟ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದರು.

ಚಾಂಪಿಯನ್‌ ರೈಡರ್‌ಗಳಿಗೆ ಎಫ್‌ಐಎಂ ಏಷ್ಯಾದ ಉಪಾಧ್ಯಕ್ಷ ಸುಜಿತ್‌ ಕುಮಾರ್‌ ಅಭಿನಂದನೆ ಸಲ್ಲಿಸಿದ್ದಾರೆ.

Related Articles