ಚೆನ್ನೈ: “ಡ್ರ್ಯಾಗ್ ಕಿಂಗ್” ಎಂದೇ ಖ್ಯಾತಿ ಪಡೆದಿರುವ ಬೆಂಗಳೂರಿನ ಮಂತ್ರ ರೇಸಿಂಗ್ ನ ರೈಡರ್, ಉದ್ಯಮಿ ಹೇಮಂತ್ ಮುದ್ದಪ್ಪ ಎಂಎಂಎಸ್ಸಿ ಎಫ್ಎಂಎಸ್ಸಿ ಭಾರತ ರಾಷ್ಟ್ರೀಯ ಡ್ರ್ಯಾಗ್ ರೇಸಿಂಗ್ ಚಾಂಪಿಯನ್ಷಿಪ್ ನಲ್ಲಿ ಮೂರು ಪ್ರಶಸ್ತಿ ಗೆದ್ದು ಸಾಧನೆ ಮಾಡಿದ್ದಾರೆ. Drag King Hemanth Muddappa won 15th National Racing Championship.
ಭಾನುವಾರ ಚೆನ್ನೈನ ಅಂತಾರಾಷ್ಟ್ರೀಯ ಸರ್ಕ್ಯೂಟ್ ನಲ್ಲಿ ನಡೆದ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಮೂರು ಟ್ರೋಫಿ ಗಳನ್ನು ಗೆಲ್ಲುವ ಮೂಲಕ 34 ವರ್ಷ ಪ್ರಾಯದ ಹೇಮಂತ್ ರಾಲಿ ಬದುಕಿನ 15ನೇ ರಾಷ್ಟ್ರೀಯ ಟ್ರೋಫಿ ತಮ್ಮದಾಗಿಸಿಕೊಂಡರು. ಈ ಋತುವಿನಲ್ಲಿ ಹೇಮಂತ್ ಪಾಲ್ಗೊಂಡ ಎಲ್ಲ ವಿಭಾಗಗಳಲ್ಲೂ ಪ್ರಶಸ್ತಿ ಗೆಲ್ಲುವ ಮೂಲಕ ದೇಶದ ಯಶಸ್ವಿ ರಾಲಿಪಟು ಎಂಬ ಹೆಗ್ಗಳಿಕೆಗೆ ಮತ್ತೊಮ್ಮೆ ಪಾತ್ರರಾದರು.
ಇತ್ತೀಚೆಗೆ ನಡೆದ ಅಂಬೆವ್ಯಾಲಿಯಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್ಷಿಪ್ ನಲ್ಲಿ ಬೆರಳು ಮುರಿದುಕೊಂಡಿದ್ದ ಹೇಮಂತ್ ಚೆನ್ನೈ ಸ್ಪರ್ಧೆಯಲ್ಲಿ ನೋವು ನಿವಾರಕ ಔಷಧ ಸೇವಿಸಿ ಸ್ಪರ್ಧೆಯಲ್ಲಿ ಪಾಲ್ಗೊಂಡಿರುವುದು ವಿಶೇಷ.
“ನನ್ನ ಖುಷಿಯನ್ನು ವ್ಯಕ್ತಪಡಿಸಲು ಪದಗಳೇ ಸಿಗುತ್ತಿಲ್ಲ. ಇದು 15 ರಾಷ್ಟ್ರೀಯ ಚಾಂಪಿಯನ್ಷಿಪ್ ಪ್ರಶಸ್ತಿ. ಇದಕ್ಕೆ ಶ್ರಮಿಸಿರುವ ಮಂತ್ರಾ ರೇಸಿಂಗ್ ನ ಪ್ರತಿಯೊಬ್ಬರನ್ನೂ ಇಲ್ಲಿ ಸ್ಮರಿಸುವೆ. ಹೆಬ್ಬರಳಿನ ಮೂಳೆ ಮರಿದು ಅಪಾರ ನೋವು ಇದ್ದಿತ್ತು. ನೋವು ನಿವಾರಕ ಸೇವನೆ ಮಾಡಿ ಪಾಲ್ಗೊಂಡಿರುವೆ. ಮಳೆಬಂದ ಕಾರಣ ಟ್ರ್ಯಾಕ್ ಒದ್ದೆಯಾಗಿತ್ತು ಇದರಿಂದ ವೇಗ ಸ್ವಲ್ಪ ಕಡೆಮೆಯಾಗಿತ್ತು ಎಂದು ಹೇಮಂತ್ ಮುದ್ದಪ್ಪ ಹೇಳಿದ್ದಾರೆ.