Friday, April 19, 2024

ರಿಯಲ್ ಮ್ಯಾಡ್ರಿಡ್ ಗೆ ನೂತನ ಸಾರಥಿ

ಮ್ಯಾಡ್ರಿಡ್:

ರಿಯಲ್ ಮ್ಯಾಡ್ರಿಡ್ ಫುಟ್ಬಾಲ್ ತಂಡದ ನೂತನ ತರಬೇತುದಾರರಾಗಿ ಸ್ಯಾಂಟಿಯಾಗೊ ಸೊಲಾರಿ ಅವರನ್ನು ಆಯ್ಕೆ ಮಾಡಲಾಗಿದೆ.

ಇದಕ್ಕೂ ಮುನ್ನ  ಈ ತಂಡದ ಮ್ಯಾನೇಜರ್ ಆಗಿ ಜುಲೆನ್ ಲೊಪೆಟೆಗೂ ಅವರಿದ್ದರು. ಈಗ ಅವರ ಸ್ಥಾನಕ್ಕೆ ಸೊಲಾರಿ ಅವರನ್ನು ನೇಮಿಸಲಾಗಿದೆ.
ಸೊಲಾರಿ ಅವರು ರಿಯಲ್ ಮ್ಯಾಡ್ರಿಡ್ ಪರ ಐದು ವರ್ಷಗಳ ಕಾಲ ಆಡಿರುವ ಅನುಭವವಿದೆ. ಇದಕ್ಕೂ ಮುನ್ನ ಅವರು ಕೊಸ್ಟಿಲ್ಲಾ ಕ್ಲಬ್ ಬಿ ತಂಡದ ಜವಾಬ್ದಾರಿ ತೆಗೆದುಕೊಂಡಿದ್ದರು.
ಲೊಪೆಟೆಗೊ ಅವರ ಸಾರಥ್ಯದಲ್ಲಿ ರಿಯಲ್ ಮ್ಯಾಡ್ರಿಡ್ ತಂಡ ಕಳೆದ ಏಳು ಪಂದ್ಯಗಳಲ್ಲಿ ಒಂದೂ ಪಂದ್ಯ ಜಯಿಸಿರಲಿಲ್ಲ. ಈ ಕಾರಣದಿಂದಾಗಿ ರಿಯಲ್ ಮ್ಯಾಡ್ರಿಡ್ ತಂಡ ಉಸ್ತುವಾರಿ ಇವರನ್ನು ಕೋಚ್ ಸ್ಥಾನದಿಂದ ವಜಾ ಮಾಡಿ, ಸೊಲಾರಿ ಅವರನ್ನು ಸೋಮವಾರ ನೇಮಿಸಿದೆ.

Related Articles