Saturday, July 20, 2024

ಇಂದಿನಿಂದ ಟಿ-20 ವಿಶ್ವಕಪ್: ಭಾರತಕ್ಕೆ ನ್ಯೂಜಿಲೆಂಡ್ ಸವಾಲು

ಗಯಾನ: 

ಇಂದಿನಿಂದ ಕೆರಿಬಿಯನ್ ನಾಡಿನಲ್ಲಿ ಮಹಿಳೆಯರ ಟಿ-20 ವಿಶ್ವಕಪ್ ಆರಂಭವಾಗಲಿದ್ದು, ಒಟ್ಟು 10 ತಂಡಗಳು ಭಾಗವಹಿಸುತ್ತಿವೆ. ಭಾರತ ‘ಬಿ’ ಗುಂಪಿನಲ್ಲಿದ್ದು, ತನ್ನ ಮೊದಲ ಪಂದ್ಯವನ್ನು ನ್ಯೂಜಿಲೆಂಡ್ ವಿರುದ್ಧ ಗುಯಾನದಲ್ಲಿ ಸೆಣಸಲಿದೆ.

ಆತಿಥೇಯ ವೆಸ್ಟ್ ಇಂಡೀಸ್  ತನ್ನ ಮೊದಲ ಕಾದಾಟವನ್ನು ಬಾಂಗ್ಲಾದೇಶ ವಿರುದ್ಧ ಶನಿವಾರ ಆಡಲಿದೆ.
ಗುಂಪು‘ಎ’: ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ವಿಂಡೀಸ್, ಇಂಗ್ಲೆಂಡ್ ಹಾಗೂ ಶ್ರೀಲಂಕಾ.
ಗುಂಪು‘ಬಿ’: ಭಾರತ, ಐರ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ.
ಭಾರತದ ವೇಳಾ ಪಟ್ಟಿ
ನ.9 ನ್ಯೂಜಿಲೆಂಡ್ ಗಯಾನ ರಾತ್ರಿ8.30
ನ.11 ಪಾಕಿಸ್ತಾನ ಗಯಾನ ರಾತ್ರಿ 8.30
ನ.15 ಐರ್ಲೆಂಡ್ ಗಯಾನ ರಾತ್ರಿ 8.30
ನ.17 ಆಸ್ಟ್ರೇಲಿಯಾ ಗಯಾನ ರಾತ್ರಿ 8.30
ನ.23 ಮೊದಲನೇ ಸೆಮಿಫೈನಲ್(ತಡರಾತ್ರಿ 1.30) ಹಾಗೂ ಎರಡನೇ ಸೆಮಿಫೈನಲ್(ಮುಂಜಾನೆ 5.30)
ನ.25 ಫೈನಲ್(ಮುಂಜಾನೆ 5.30)

Related Articles