ಬೆಂಗಾಲ ಪರ ರಣಜಿ ಪಂದ್ಯಕ್ಕೆ ಶಮಿ

0
196
ಕೊಲ್ಕತಾ:

ಭಾರತ ತಂಡದ ಹಿರಿಯ ವೇಗಿ ಮೊಹಮ್ಮದ್ ಶಮಿ ಅವರು ಇಂದಿನಿಂದ ಈಡೆನ್ ಗಾರ್ಡನ್ಸ್   ಕ್ರೀಡಾಂಗಣದಲ್ಲಿ ಕೇರಳ ವಿರುದ್ಧ ನಡೆಯುವ ರಣಜಿ ಟ್ರೋಫಿ  ಪಂದ್ಯದಲ್ಲಿ ಬೆಂಗಾಲ್ ತಂಡದ ಪರ ಆಡಲಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್  ಸರಣಿ ಆಡಲಿರುವ ಶಮಿ, ಅಲ್ಲಿ ತನಕ ಯಾವುದೇ ಪಂದ್ಯವಿಲ್ಲದ ಕಾರಣ ಅವರು ರಣಜಿ ಟ್ರೋಫಿ ಆಡುವಂತೆ ಬಿಸಿಸಿಐ ಅನುಮತಿ ನೀಡಿದೆ. ಅಲ್ಲದೇ, ಅವರು ಪ್ರತಿ ಇನಿಂಗ್ಸ್  ನಲ್ಲೂ 15 ರಿಂದ 17 ಓವರ್ ಮಾತ್ರ ಬೌಲಿಂಗ್ ಮಾಡುವಂತೆ ಸೂಚನೆ ನೀಡಿದೆ.
ಭಾರತ ಟೆಸ್ಟ್  ತಂಡದ ರವಿಚಂದ್ರನ್ ಅಶ್ವಿನ್ ಹಾಗೂ ಇಶಾಂತ್ ಶರ್ಮಾ ಅವರನ್ನು ರಣಜಿ ಟ್ರೋಫಿ ಆಡದಂತೆ ಬಿಸಿಸಿಐ ಸೂಚನೆ ನೀಡಿದೆ. ಆದರೆ, ಮೊಹಮ್ಮದ್ ಶಮಿಗೆ ಬಿಸಿಸಿಐ ಗ್ರೀನ್ ಸಿಗ್ನಲ್ ನೀಡಿದೆ. ಮೊಹಮ್ಮದ್ ಶಮಿ ಇಂದು ಬೆಳಗ್ಗೆೆ ತಂಡ ಸೇರ್ಪಡೆಯಾಗಲಿದ್ದಾರೆ ಎಂದು ಬೆಂಗಾಲ್ ತಂಡದ ನಾಯಕ ಮನೋಜ್ ತಿವಾರಿ ತಿಳಿಸಿದ್ದಾರೆ.