Friday, October 4, 2024

ಭಾರತದೆದುರು ಪಾಕಿಸ್ತಾನಕ್ಕೆ ಮುಖಭಂಗ

ಮುಂಬೈ:

 ಪಾಕಿಸ್ತಾನ  ತಂಡದೊಂದಿಗೆ ದ್ವಿಪಕ್ಷೀಯ ಸರಣಿ ಆಯೋಜನೆಗೆ ನಿರಾಕರಿಸಿದ್ದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಇದಕ್ಕೆೆ ಪರಿಹಾರವಾಗಿ 70 ಮಿಲಿಯನ್ ಯುಎಸ್ ಡಾಲರ್ ನೀಡಬೇಕೆಂದಿದ್ದ  ಪಾಕಿಸ್ತಾನ  ಕ್ರಿಕೆಟ್ ಮಂಡಳಿ(ಪಿಸಿಬಿ) ಬೇಡಿಕೆಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ತಳ್ಳಿಹಾಕಿದೆ.

ಇದರೊಂದಿಗೆ ಭಾರತ ಎದುರು ಪಾಕಿಸ್ತಾನ  ತೀವ್ರ ಮುಖಭಂಗ ಉಂಟಾಯಿತು.
ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ದ್ವಿಪಕ್ಷೀಯ ಸರಣಿ ಆಯೋಜನೆ ಮಾಡಲು ನಿರಾಕರಿಸಿದ್ದ ಬಿಸಿಸಿಐ ವಿರುದ್ಧ ಪಿಸಿಬಿ, ಐಸಿಸಿಗೆ ಕಳೆದ ವರ್ಷ ದೂರು ನೀಡಿತ್ತು. ಸಾಂಪ್ರದಾಯ ಎದುರಾಳಿಗಳ ದ್ವಿಪಕ್ಷೀಯ ಸರಣಿ ಆಡದ್ದರಿಂದ 70 ಮಿಲಿಯನ್ ಯುಎಸ್ ಡಾಲರ್ ನಷ್ಟವಾಗಿದೆ. ಹಾಗಾಗಿ, ಆ ನಷ್ಟವನ್ನು ಬಿಸಿಸಿಐ ಭರಿಸಬೇಕೆಂದು ಪಿಸಿಬಿ ಐಸಿಸಿಗೆ ಸಲ್ಲಿಸಿದ್ದ ದೂರಿನಲ್ಲಿ ಬೇಡಿಕೆ ಇಟ್ಟಿತ್ತು. ಆದರೆ, ವಿಚಾರಣೆ ಮಾಡಿದ ಐಸಿಸಿ ನ್ಯಾಯಿಕ ಮಂಡಳಿ ಪಾಕ್ ಬೇಡಿಕೆಯನ್ನು ತಿರಸ್ಕರಿಸಿದೆ.

Related Articles