Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ರಣಜಿ ಟ್ರೋಫಿಯಲ್ಲಿ ದಾಖಲೆ ಮಾಡಿದ ಜಾಫರ್

ನಾಗ್ಪುರ್:

ಅನುಭವಿ ಆಟಗಾರ ವಾಸಿಂ ಜಾಫರ್ ಅವರು ಬರೋಡ ವಿರುದ್ಧದ ಪಂದ್ಯದ ಎರಡನೇ ದಿನ 153 ರನ್ ಗಳಿಸುವ ಮೂಲಕ ರಣಜಿ ಟ್ರೋಫಿ ಮಾದರಿಯಲ್ಲಿ 11 ಸಾವಿರ ವೈಯಕ್ತಿಕ ರನ್ ಪೂರೈಸಿದರು. ಇದರೊಂದಿಗೆ ರಣಜಿ ಟ್ರೋಫಿಯಲ್ಲಿ 11 ಸಾವಿರ ರನ್ ಗಳಿಸಿದ ಮೊದಲ ಬ್ಯಾಟ್ಸ್ ಮನ್ ಎಂಬ ಕೀರ್ತಿಗೆ ಭಾಜನರಾದರು.

ವಿದರ್ಭ ತಂಡದ ಪರ ಆಡುತ್ತಿರುವ ವಾಸಿಂ ಜಾಫರ್ ಬರೋಡ ಎದುರು ಮೊದಲ ಇನಿಂಗ್ಸ್ ನಲ್ಲಿ 284 ಎಸೆತಗಳಿಗೆ 153 ರನ್ ದಾಖಲಿಸಿದರು. ವೃತ್ತಿ ಜೀವನದ 54 ನೇ ಶತಕದ ಬಲದಿಂದ ವಿದರ್ಭ ತಂಡ ಪ್ರಥಮ ಇನಿಂಗ್ಸ್ ನಲ್ಲಿ 529 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿತು. ವಾಸಿಂ ಜಾಫರ್ ಭಾರತ ಪರ 31 ಟೆಸ್ಟ್ ಪಂದ್ಯಗಳಲ್ಲಿ 1944 ರನ್ ಗಳಿಸಿದ್ದು, 11 ಅರ್ಧ ಶತಕಗಳನ್ನು ಸಿಡಿಸಿದ್ದಾರೆ. ಎರಡು ಏಕದಿನ ಪಂದ್ಯಗಳನ್ನು ಆಡಿದ್ದಾರೆ.

administrator