556 ರನ್ ಸಿಡಿಸಿದ 14ರ ಪೋರ

0
190
ಏಜೆನ್ಸಿಸ್ ಹೊಸದಿಲ್ಲಿ:

ಎರಡು ದಿನಗಳ ಪಂದ್ಯವೊಂದರಲ್ಲಿ 14 ವರ್ಷದ ಪೋರನೊಬ್ಬ ಅಜೇಯ 556 ರನ್ ಸಿಡಿಸುವ ಮೂಲಕ ದೇಶದ ಗಮನ ಸೆಳೆದಿದ್ದಾನೆ.

ಇಲ್ಲಿನ ವಡೋದರ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ನಡೆದ ಶ್ರೀ ಡಿ.ಕೆ ಗಾಯಕ್ವಾಡ್ 14ರ ವಯೋಮಿತಿ ಟೂರ್ನಿಯಲ್ಲಿ ಮೊಹೀಂದರ್ ಲಾಲ ಅಮರ್ನಾಥ್ ಕ್ರಿಕೆಟ್ ಅಕಾಡೆಮಿ ತಂಡದ ಪ್ರಿಯಾಂಶು ಮೊಲಿಯಾ, ಯೋಗಿ ಕ್ರಿಕೆಟ್ ಅಕಾಡೆಮಿ ವಿರುದ್ಧ ಮೊದಲ ಇನಿಂಗ್ಸ್ ನಲ್ಲಿ 319 ಎಸೆತಗಳಿಗೆ ಅಜೇಯ 556 ರನ್ ಗಳಿಸಿದ್ದಾರೆ. ಇದಕ್ಕೂ ಮುನ್ನ ಮೊದಲ ಇನಿಂಗ್ಸ್ ನಲ್ಲಿ  ಯೋಗಿ ಕ್ರಿಕೆಟ್ ಅಕಾಡೆಮಿ ತಂಡ ಕೇವಲ 52 ರನ್ ಗಳಿಗೆ ಸರ್ವಪತನ ಕಂಡಿತ್ತು. ಈ ಇನಿಂಗ್ಸ್ ನಲ್ಲಿ ಪ್ರಿಯಾಂಶು ಸ್ಪಿನ್ ಮೋಡಿಯಿಂದ ನಾಲ್ಕು ವಿಕೆಟ್ ಪಡೆದಿದ್ದರು.
ನಂತರ ಎರಡನೇ ಇನಿಂಗ್ಸನಲ್ಲೂ ಯೋಗಿ ಕ್ರಿಕೆಟ್ ಅಕಾಡೆಮಿ 84 ರನ್‍ಗಳಿಗೆ ಸರ್ವಪತನ  ಕಂಡಿತ್ತು. ಈ ಇನಿಂಗ್ಸ್ ನಲ್ಲೂ ಪ್ರಿಯಾಂಶು ಎರಡು ವಿಕೆಟ್ ಪಡೆದಿದ್ದರು. ಅಂತಿಮವಾಗಿ ಇನಿಂಗ್ಸ್ ಹಾಗೂ 689 ರನ್‍ಗಳಿಂದ ಮಹೀಂದರ್ ಲಾಲ ಅಮರ್ ನಾಥ್ ಕ್ರಿಕೆಟ್ ಅಕಾಡೆಮಿ ಭರ್ಜರಿ ಜಯ ಸಾಧಿಸಿತ್ತು.