ಬಾಕ್ಸಿಂಗ್‌ನಲ್ಲಿ ಕೊಳಗೇರಿ ಬಾಲಕಿ ಚಂದ್ರಿಕಾ ಪೂಜಾರಿ ಸಾಧನೆ
ಪುಣೆ: ಮಹಾರಾಷ್ಟ್ರದ ಪುಣೆಯ ಥಾಡಿವಾಲ ರೋಡ್ ಕೊಳಗೇರಿಯ ಪ್ರತಿಭೆ ಕರ್ನಾಟಕ ಮೂಲದ ಚಂದ್ರಿಕಾ ಪೂಜಾರಿ ಅಂತಾರಾಷ್ಟ್ರೀಯ ಬಾಕ್ಸಿಂಗ್‌ನಲ್ಲಿ ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. Chandrika Poojary, a talent from the Thadiwala Road slums of Pune, Maharashtra, and originally from Karnataka, has brought glory to the country by winning a gold medal in international boxing.
ಭಾನುವಾರ ಬ್ಯಾಂಕಾಕ್‌ನಲ್ಲಿ ನಡೆದ ವಿಶ್ವ ಬಾಕ್ಸಿಂಗ್ ಫ್ಯೂಚರ್ ಕಪ್ 2026 ಚಾಂಪಿಯನ್‌ಷಿಪ್‌ನಲ್ಲಿ 17 ವರ್ಷದ ಚಂದ್ರಿಕಾ ಪೂಜಾರಿ ಚಿನ್ನದ ಸಾಧನೆ ಮಾಡಿದ್ದಾರೆ. ಇದರಿಂದ ಚಂದ್ರಿಕಾ ಅವರಿಗೆ ಯೂಥ್ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಹಾದಿ ಸುಗಮವಾಗಿದೆ.
ಪುಣೆಯ ಯುವ ಬಾಕ್ಸಿಂಗ್ ಕ್ಲಬ್‌ನಲ್ಲಿ ತರಬೇತಿ ಪಡೆಯುತ್ತಿರುವ ಚಂದ್ರಿಕಾ ಪೂಜಾರಿ, ಕೊಳೆಗೇರಿಯಿಂದ ಬಂದಿದ್ದರೂ ಆಕೆಯ ಬಾಕ್ಸಿಂಗ್ ಕ್ರೀಡೆಯಲ್ಲಿ ಶ್ರೀಮಂಳಾಗಿದ್ದಾಳೆ. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಉಜ್ವೆಕಿಸ್ತಾನದ ಮರ್ಡೊನೊವಾ ನಝೊಕತ್ ವಿರುದ್ಧ ಐತಿಹಾಸಿಕ ಚಿನ್ನ ಗೆದ್ದಳು.

“10ನೇ ವಯಸ್ಸಿನಲ್ಲಿ ಯುವ ಬಾಕ್ಸಿಂಗ್‌ನಲ್ಲಿ ತರಬೇತಿಗೆ ಸೇರಿದ ಚಂದ್ರಿಕಾ ಪೂಜಾರಿಯ ಮೂಲ ಕರ್ನಾಟಕ. ತಂದೆ ಖಾಸಗಿ ಕಂಪೆನಿಯಲ್ಲಿ ಸಹಾಕರಾಗಿ ಕೆಲಸ ಮಾಡುತ್ತಿದ್ದರೆ, ತಾಯಿ ಬೇರೆಯವರ ಮನೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಚಂದ್ರಿಕಾ ಮಾಡಿರುವ ಈ ಸಾಧನೆ ಇಲ್ಲಿರುವ ಇತರ ಬಾಕ್ಸರ್‌ಗಳಿಗೆ ಸ್ಪೂರ್ತಿಯಾಗಿದೆ,” ಎಂದು ಯುವ ಬಾಕ್ಸಿಂಗ್ ಕ್ಲಬ್ ಹುಟ್ಟು ಹಾಕುವಲ್ಲಿ ಪ್ರಮುಖರಾಗಿರುವ ಸಚಿನ್ ಶಿಂಧೆ ಹೇಳಿರುವುದಾಗಿ “ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ʼ ವರದಿ ಮಾಡಿದೆ.
ಕ್ರೀಡೆಯ ಬಗ್ಗೆ ಸಾಕಷ್ಟು ಆಸಕ್ತಿ ಹೊಂದಿರುವ ಸಚಿನ್ ಬೀದಿ ಮಕ್ಕಳಿಗೆ ಕ್ರೀಡೆ ಬಗ್ಗೆ ಆಸಕ್ತಿ ಮೂಡಲಿ, ಆ ಮೂಲಕ ಉತ್ತಮ ಬದುಕನ್ನು ರೂಪಿಸಿಕೊಳ್ಳಲಿ ಎಂಬ ಉದ್ದೇಶದಿಂದ 2017ರಲ್ಲಿ ಕ್ಲಬ್ ಸ್ಥಾಪಿಸಿ, ಫುಟ್ಬಾಲ್ ಹಾಗೂ ಬಾಕ್ಸಿಂಗ್ ತರಬೇತಿ ಆರಂಭಿಸಿದರು.
ಕೊಳೆಗೇರಿಯ ಮಕ್ಕಳು ದುಶ್ಚಟಗಳಿಗೆ ಬಲಿಯಾಗುವುದ ಬೇಗ. ಇದನ್ನರಿತ ಸಚಿನ್ ಆ ಮಕ್ಕಳನ್ನು ಕ್ರೀಡೆಯಲ್ಲಿ ಪಾಲ್ಗೊಳ್ಳುವಂಗತೆ ಮಾಡಿದರು. ಪ್ರತಿ ವರ್ಷ ಡಾ. ಅಂಬೇಡ್ಕರ್ ಜಯಂತಿಯಂದು ಡೊನೇಷನ್ ಮೂಲಕ ಹಣ ಸಂಗ್ರಹಿಸಿ, ತರಬೇತುದಾರರ ವೇತನವನ್ನು ನೀಡಲಾಗುತ್ತಿತ್ತು. ಉಳಿದ ಹಣವನ್ನು ಮಕ್ಕಳ ಶಿಕ್ಷಣಕ್ಕೆ ವಿನಿಯೋಗಿಸಲಾಗುತ್ತಿತ್ತು.
51 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿರುವ ಚಂದ್ರಿಕಾ ಪೂಜಾರಿ ಯೂಥ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸವ ಬಗ್ಗೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಇನ್ನೂ ತೀರ್ಮಾನ ಕೈಗೊಂಡಿಲ್ಲ. ಆದರೆ ಚಂದ್ರಿಕಾ ಆಯ್ಕೆಯಾಗುವುದು ಖಚಿತ ಎನ್ನುತ್ತಾರೆ ಸಚಿನ್.

ಮಾಜಿ ಬಾಕ್ಸರ್ ಜಯಂತ್ ಶಿಂಧೆ ಅವರಲ್ಲಿ ತರಬೇತಿ ಪಡೆಯುತ್ತಿರುವ ಚಂದ್ರಿಕಾ ಪೂಜಾರಿ, 2015ರಲ್ಲಿ ಏಷ್ಯನ್ ಯೂಥ್ ಗೇಮ್ಸ್‌ನಲ್ಲಿ ಚಿನ್ನದ ಸಾಧನೆ ಮಾಡಿದ್ದರು, ನಂತರ ಏಷ್ಯನ್ ಯೂಥ್ ಚಾಂಪಿಯನ್‌ಷಿಪ್‌ನಲ್ಲೂ ಚಿನ್ನ ಗೆದ್ದಿದ್ದರು. ಚಂದ್ರಿಕಾ ಅವರ ಸಾಧನೆಯ ಬಳಿಕ ಕೊಳೆಗೇರಿಯ ಅನೇಕ ಮಕ್ಕಳು ಬಾಕ್ಸಿಂಗ್ ಕ್ಲಬ್‌ಗೆ ಸೇರ್ಪಡೆಗೊಂಡಿರುವುದು ವಿಶೇಷ.
ಜಯಂತ್ ಅವರ ಮುತುವರ್ಜಿಯಿಂದ ಚಂದ್ರಿಕಾ ಗೋವದಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ತರಬೇತಿ ಪಡೆಯುವಲ್ಲಿ ಯಶಸ್ವಿಯಾದಳು. ಬಳಿಕ ಪುಣೆಯಲ್ಲಿರುವ ಆರ್ಮಿ ಸ್ಪೋರ್ಟ್ಸ್ ಸೆಂಟರ್‌ನಲ್ಲಿ ತರಬೇತಿಗೆ ಅವಕಾಶ ಸಿಕ್ಕಿತು. ಅಲ್ಲಿ ನಿಖಿತಾ ಜರೀನ್

