ಚಂದರಗಿ ಕ್ರೀಡಾ ಶಾಲೆಗೆ ಡಬಲ್ ಬೆಳ್ಳಿ,ರಾಷ್ಟ್ರ ಮಟ್ಟಕ್ಕೆ ಆಯ್ಕೆ
ಚಂದರಗಿ: ದೇಶದ ಮೊದಲ ಖಾಸಗಿ ಕ್ರೀಡಾ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಳಗಾವಿ ಜಿಲ್ಲೆಯ ರಾಮದುರ್ಗಾ ತಾಲೂಕಿನ ಚಂದರಗಿಯಲ್ಲಿರು ಎಸ್.ಎಂ. ಕಲೂತಿ ಶಾಲೆಯ ವಿದ್ಯಾರ್ಥಿಗಳು ಸೈಕ್ಲಿಂಗ್ ಹಾಗೂ ಹಾಕಿಯಲ್ಲಿ ಬೆಳ್ಳಿಯ ಪದಕ ಗೆದ್ದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಅಲ್ಲದೆ ರಾಜ್ಯ ಮತ್ತು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. Chandaragi Sports School cyclist Kumar Honnappa Chidananda Dharmatti won the Silver medal in the state and selected for nationals.
ಧಾರವಾಡ ಜಿಲ್ಲಾ ಕ್ರೀಡಾಂಗಣದಲ್ಲಿ ಅಕ್ಟೋಬರ್ 3 ರಿಂದ 5 ರ ವರೆಗೆ ನಡೆದ ವಿಭಾಗ ಮಟ್ಟದ ಹಾಕಿ ಪಂದಾವಳಿಯಲ್ಲಿ ಚಂದರಗಿ ಕ್ರೀಡಾ ಶಾಲೆಯ 17 ವರ್ಷ ವಯೋಮಿತಿಯ ಬಾಲಕರ ತಂಡ (ಪ್ರೌಢ ಶಾಲಾ ವಿಭಾಗ) ಬೆಳ್ಳಿ ಪದಕವನ್ನು ಗೆದ್ದಿದೆ. ಫೈನಲ್‌ನಲ್ಲಿ ಸೋಲನುಭವಿಸಿದ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ.

ಅಕ್ಟೋಬರ್ 3 ರಿಂದ 5 ರವರೆಗೆ ಬೆಳಗಾವಿಯಲ್ಲಿ ನಡೆದ 16ನೇ ರಾಜ್ಯ ಮಟ್ಟದ ರೋಡ್ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ 16 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಚಂದರಗಿ ಕ್ರೀಡಾ ಶಾಲೆಯ ಪಿಯುಸಿ ವಿಭಾಗದಲ್ಲಿ ಓದುತ್ತಿರುವ ಕುಮಾರ್ ಹೊನ್ನಪ್ಪ ಚಿದಾನಂದ ಧಮ್ಮಟ್ಟಿ ಬೆಳ್ಳಿ ಪದಕ ಗೆದ್ದಿದ್ದಾರೆ. ಉತ್ತಮ ಸಾಧನೆ ತೋರಿದ ಕುಮಾರ್ ಹೊನ್ನಪ್ಪ ಚಿನಾದನಂದ ಧರ್ಮಟ್ಟಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳ ಈ ಕ್ರೀಡಾ ಸಾಧನೆಗೆ ಶಾಲೆಯ ಸಂಸ್ಥಾಪಕರಾದ ಎಸ್.ಎಂ. ಕಲೂತಿ, ಶಾಲಾ ಶಿಕ್ಷಕ ವೃಂದ, ಕ್ರೀಡಾ ಉತ್ತೇಜನ ಹಾಗೂ ಅಭಿವೃದ್ಧಿ ಸಹಕಾರಿ ಸಂಘ ಚಂದರಗಿ ಇದರ ಆಡಳಿತ ಮಂಡಳಿಯ ಪ್ರಮುಖರು ಅಭಿನಂದನೆ ಸಲ್ಲಿಸಿದ್ದಾರೆ.

