Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಬೆಂಗಳೂರು ಡ್ರೀಮ್‌ ಯುನೈಟೆಡ್‌ ಎಫ್‌ಸಿ ಚಾಂಪಿಯನ್‌

ಬೆಂಗಳೂರು: ಡಿವೈಇಎಸ್‌ ಎಫ್‌ಸಿ ವಿರುದ್ಧ 4-2 ಅಂತರದಲ್ಲಿ ಜಯ ಗಳಿಸಿದ ಬೆಂಗಳೂರು ಡ್ರೀಮ್‌ ಯುನೈಟೆಡ್‌ ಫುಟ್ಬಾಲ್‌ ಕ್ಲಬ್‌ ʼಎ” ಡಿವಿಜನ್‌ ಚಾಂಪಿಯನ್‌ಷಿಪ್‌ ಗೆಲ್ಲುವುದು ಮಾತ್ರವಲ್ಲ, ಸೂಪರ್‌ ಡಿವಿಜನ್‌ಗೆ ಭಡ್ತಿ ಹೊಂದಿದೆ. Bengaluru Dream United FC A division Champion and promoted to Super Division

ಫೈನಲ್‌ ಪಂದ್ಯದಲ್ಲಿ ಬೆಂಗಳೂರು ಡ್ರೀಮ್‌ ಯುನೈಟೆಡ್‌ ಪರ ಜೈ ಹರಿ ಬರ್ಮನ್‌ ಎರಡು ಗೋಲು ಗಳಿಸಿದರೆ, ಅವಿಶೇಖ್‌ ಸಿಂಗ್‌ ಹಾಗೂ ಜೀವಿತ್‌ ತಲಾ ಒಂದು ಗೋಲು ಗಳಿಸಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು.

ಪ್ರಥಮಾರ್ಥದಲ್ಲಿ ಡಿವೈಇಎಸ್‌ ಎಫ್‌ಸಿ ಅಖಿಲ್‌ ಅಬ್ದುಲ್ಲಾ (7ನೇ ನಿಮಿಷ) ಹಾಗೂ ಭರತ್‌ ಗೌಡ (26ನೇ ನಿಮಿಷ) ಗಳಿಸಿದ ಗೋಲಿನಿಂದ 2-0 ಅಂತರದಲ್ಲಿ ಮುನ್ನಡೆ ಕಂಡಿತ್ತು. ಆದರೆ ಬೆಂಗಳೂರು ಡ್ರೀಮ್‌ ಯುನೈಟೆಡ್‌ನ ಪ್ರಮುಖ ಆಟಗಾರ ಜೈಹರಿ ಬರ್ಮನ್‌ 29ನೇ ನಿಮಿಷದಲ್ಲಿ ಗೋಲು ಗಳಿಸಿ ದಿಟ್ಟ ಸವಾಲು ನೀಡಿದರು. ನಂತರ ಅವಿಶೇಖ್‌ ಸಿಂಗ್‌ 37ನೇ ನಿಮಿಷದಲ್ಲಿ ಗಳಿಸಿ ಗೋಲಿನಿಂದ ಪಂದ್ಯ 2-2ರಲ್ಲಿ ಸಮಬಲಗೊಂಡಿತು. ಜೀವಿತ್‌ ಕೆ ಎನ್‌ 77 ನೇ ನಿಮಿಷದಲ್ಲಿ ಗಳಿಸಿದ ಗೋಲು ಬೆಂಗಳೂರು ಡ್ರೀಮ್‌ ಯುನೈಟೆಡ್‌ಗೆ ಮುನ್ನಡೆ ತಂದುಕೊಟ್ಟಿತು. 88ನೇ ನಿಮಿಷದಲ್ಲಿ ಜೈ ಹರಿ ಬರ್ಮನ್‌ ವೈಯಕ್ತಿಕ ಎರಡನೇ ಗೋಲು ಗಳಿಸಿ ತಂಡಕ್ಕೆ 4-2 ಅಂತರದಲ್ಲಿ ಜಯ ತಂದಿತ್ತರು.

ಬೆಂಗಳೂರು ಡ್ರೀಮ್‌ ಯುನೈಟೆಡ್‌ ಎಫ್‌ಸಿಯ ಜೈ ಹರಿ ಬರ್ಮನ್‌ ಟೂರ್ನಿಯಲ್ಲಿ ಒಟ್ಟು 20 ಗೋಲುಗಳನ್ನು ಗಳಿಸಿ ಅತಿ ಹೆಚ್ಚು ಗೋಲುಗಳಿಸಿದ ಗೌರವಕ್ಕೆ ಪಾತ್ರರಾದರು. ಬೆಂಗಳೂರು ಡ್ರೀಮ್‌ ಯುನೈಟೆಡ್‌ ಎಫ್‌ಸಿಯ ರಾಜು ಬಾಸ್ಫೋರ್‌ ಉತ್ತಮ ಗೋಲ್‌ಕೀಪರ್‌ ಪ್ರಶಸ್ತಿ ಗೆದ್ದರು. ಉತ್ತಮ ಮೌಲ್ಯಯುತ ಆಟಗಾರ ಪ್ರಶಸ್ತಿಗೆ ಬೆಂಗಳೂರು ಡ್ರೀಮ್‌ ಯುನೈಟೆಡ್‌ ಫುಟ್ಬಾಲ್‌ ಕ್ಲಬ್‌ನ ಕೆ. ಲಾಲ್‌ರಿನ್ಫೆಲಾ ಆಯ್ಕೆಯಾದರು.

ಬೆಂಗಳೂರು ಡ್ರೀಮ್‌ ಯುನೈಟೆಡ್‌ ಫುಟ್ಬಾಲ್‌ ಕ್ಲಬ್‌ನ ಈ ಯಶಸ್ಸಿನಲ್ಲಿ ಪ್ರಧಾನ ಕೋಚ್‌ ಶರತ್‌ ಕಾಮತ್‌ (Sharath Kamath), ಸಹಾಯಕ ಕೋಚ್‌ ಜಯಂತ್‌ ಕುಮಾರ್‌ ಹಾಗೂ ಸುಶ್ಮಾ ಕಾಮತ್‌ ಅವರ ಶ್ರಮ ಪ್ರಮುಖವಾಗಿತ್ತು.


administrator