Saturday, July 27, 2024

ಯಮಗುಚಿಗೆ ಶಾಕ್ ನೀಡಿದ ಸಿಂಧು

ಗುವಾಂಗ್‌ಝೌವ್:

 ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಭಾರತದ ಪಿ.ವಿ. ಸಿಂಧು ವಿಶ್ವ ಟೂರ್ ಫೈನಲ್ಸ್  ನ ಮಹಿಳೆಯರ ಸಿಂಗಲ್‌ಸ್‌‌ನ ಗುಂಪು ‘ಎ’ ಮೊದಲ ಪಂದ್ಯದಲ್ಲಿ  ವಿಶ್ವ ಎರಡನೇ ಶ್ರೇಯಾಂಕದ ಹಾಗೂ ಹಾಲಿ ಚಾಂಪಿಯನ್ ಅಕನೆ ಯಮಗುಚಿ ವಿರುದ್ಧ ಜಯ ಸಾಧಿಸಿದರು.

ಆ ಮೂಲಕ ಬಿಡಬ್ಲ್ಯುಎಫ್ ಫೈನಲ್ಸ್  ಟೂರ್ನಿಯಲ್ಲಿ ಶಭಾರಂಭ ಮಾಡಿದರು. ಪುರುಷರ ಸಿಂಗಲ್ಸ್  ನಲ್ಲಿ ಭಾರತ ಸಮೀರ್ ವರ್ಮಾ ಅವರು ವಿಶ್ವ ಅಗ್ರ ಆಟಗಾರ ಕೆಂಟೊ ಮೊಮೊಟಾ ವಿರುದ್ಧ ಪರಾಭವಗೊಳ್ಳುವ ಮೂಲಕ ನಿರಾಸೆಗೆ ಜಾರಿದರು.
ದುಬೈನಲ್ಲಿ ನಡೆದಿದ್ದ ಕಳೆದ ಆವೃತ್ತಿಯಲ್ಲಿ  ಪಿ.ವಿ. ಸಿಂಧು ಅವರು ಸಿಂಗಲ್ಸ್  ನಲ್ಲಿ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತರಾಗಿದ್ದರು. ಆದರೆ, ಬುಧವಾರ ನಡೆದ ತಮ್ಮ ಮೊದಲ ಹಣಾಹಣಿಯಲ್ಲಿ ಜಪಾನ್ ಆಟಗಾರ್ತಿ ಯಮಗುಚಿ ಅವರನ್ನು ಆಕ್ರಮಣಕಾರಿ ಹಾಗೂ ತಾಳ್ಮೆೆಯ ಆಟವಾಡುವ ಮೂಲಕ 24-22, 21-15 ನೇರ ಸೆಟ್‌ಗಳಿಂದ ಸೋಲಿಸುವಲ್ಲಿ ಯಶಸ್ವಿಯಾದರು.
ಬಿಡಬ್ಲ್ಯುಎಫ್ ಫೈನಲ್ಸ್  ಟೂರ್ನಿಯ ಪುರುಷರ ಸಿಂಗಲ್ಸ್  ನ ಗುಂಪು ‘ಬಿ’ ನಲ್ಲಿ ಭಾರತದ ಸಮೀರ್ ವರ್ಮಾ ಮೊದಲ ಪಂದ್ಯದಲ್ಲೆೆ ವಿಶ್ವ ನಂ.1 ಕೆಂಟೊ ಮೊಮೊಟಾ ವಿರುದ್ಧ ಸೋಲು ಅನುಭವಿಸಿ ನಿರಾಸೆ ಅನುಭವಿಸಿದರು. ಇವರಿಬ್ಬರ ನಡುವೆ ಪಂದ್ಯದ ಆರಂಭದಲ್ಲಿ ಬಾರಿ ಪೈಪೋಟಿ ನಡೆಯಿತು. ಆದರೆ, ಮೊಮೊಟಾ ಅವರ ಎದುರು ಭಾರತದ ಆಟಗಾರನ ಆಟ ನಡೆಯಲಿಲ್ಲ. ಹಾಗಾಗಿ, 18-21 ಹಾಗೂ 6-1 ಅಂತರದಲ್ಲಿ ಸಮೀರ್ ವರ್ಮಾ ಸೋಲು ನುಭವಿಸಿದರು.  ಮೊದಲ ಸೆಟ್‌ನಲ್ಲಿ ಉತ್ತಮ ಆಟ ಪ್ರದರ್ಶನ ನೀಡಿದ ವರ್ಮಾ ಕೇವ 3 ಅಂಕಗಳ ಅಂತರದಲ್ಲಿ ಸೋಲು ಕಂಡರೆ, ದ್ವಿತೀಯ ಸೆಟ್‌ನಲ್ಲಿ 15 ಅಂಕಗಳ ಅಂತರದಲ್ಲಿ ಸೋಲು ಅನುಭವಿಸಿದರು.  ಆ ಮೂಲಕ ತೀವ್ರ ನಿರಾಸೆಗೆ ಭಾರತದ ಸಿಂಗಲ್ಸ್  ಆಟಗಾರ ಜಾರಿದರು.

Related Articles